ತೂಕ ಇಳಿಸಿಕೊಳ್ಳಲು ನೀವು ಹರಸಾಹಸ ಪಡುತ್ತಿದ್ದೀರಾ? ಹಾಗಿದ್ದರೆ ಈ ಪಾನೀಯ ಕುಡಿಯಿರಿ, ಕೆಜಿಗಟ್ಟಲೆ ತೂಕ ಇಳಿಸಿಕೊಳ್ಳುತ್ತೀರಿ...| health tips

untitled-design-2025-09-02t171147476-68b6d8095787b
Published on

health tips: ಇಂದಿನ ದಿನಗಳಲ್ಲಿ ಅನೇಕರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಅವರು ಆದಷ್ಟು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಸಹ ಅವರಿಂದ ಅದು ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ಅದೇ ರೀತಿಯಲ್ಲಿ ಆಹಾರ ಸೇವಿಸುವುದು, ವ್ಯಾಯಾಮ, ಜಿಮ್​ ಈ ರೀತಿಯ ಹವ್ಯಾಸಗಳನ್ನು ಬೆಳೆಸಿಕೊಂಡರೂ ಸಹ ತೂಕ ಕಡಿಮೆಯಾಗದೇ ಒದ್ದಾಡುತ್ತಿರುತ್ತಾರೆ. ಆ ರೀತಿಯಾಗಿ ಇರುವವರು ಈ ಪಾನೀಯ ಸೇವಿಸುವುದರಿಂದ ನಿಮ್ಮ ದೇಹದ ತೂಕವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬಹುದು.

ತೂಕ ಇಳಿಸಿಕೊಳ್ಳಲು ಸಹಾಯಕವಾದ ಪಾನೀಯಗಳಲ್ಲಿ ಗ್ರೀನ್​ ಟೀ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೇಯೇ ತೂಕ ಇಳಿಸಲು ಸಹಕಾರಿಯಾಗಿದೆ. ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ಸ್ ಎಂಬ ಉತ್ಕರ್ಷಣ ನಿರೋಧಕಗಳು ಇವೆ. ಇದು ಚಯಾಪಚಯವನ್ನು ಹೆಚ್ಚಿಸಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ಕೊಬ್ಬಿನ ಜೀವಕೋಶಗಳನ್ನು ಒಡೆಯಲು ಸಹಾಯ ಮಾಡುತ್ತದೆ.

ಗ್ರೀನ್ ಟೀ ಉತ್ತಮ ಯಾಕೆ?

ಗ್ರೀನ್​ ಟೀ ಕ್ಯಾಲೋರಿಗಳನ್ನು ಒಳಗೊಂಡಿರದ ಕಾರಣ ಇದು ಕಡಿಮೆ ಕ್ಯಾಲೊರಿ ಆಹಾರಕ್ಕೆ ಸೂಕ್ತವಾಗಿದೆ. ಇದು ಥರ್ಮೋಜೆನಿಕ್ ಗುಣವನ್ನು ಹೊಂದಿರುವುದರಿಂದ ದೇಹದ ಶಾಖ ಉತ್ಪಾದನೆಯನ್ನು ಹೆಚ್ಚಿಸಿ ಕೊಬ್ಬನ್ನು ಸುಡುತ್ತದೆ.

ದಿನಕ್ಕೆ 2 ರಿಂದ 3 ಕಪ್ ಗ್ರೀನ್ ಟೀ ಕುಡಿಯುವುದರಿಂದ ಚಯಾಪಚಯ ದರವು ಶೇ. 4ರಿಂದ 5 ಪಟ್ಟು ಹೆಚ್ಚಾಗಬಹುದು ಎಂದು ಕೆಲವೊಂದು ಅಧ್ಯಾಯನಗಳು ತಿಳಿಸಿವೆ. ಅದಾಗ್ಯೂ, ಇದರಲ್ಲಿರುವ ಕೆಫೀನ್ ಶಕ್ತಿಯ ಮಟ್ಟವನ್ನು ಏರಿಸಿ, ದೈಹಿಕ ಚಟುವಟಿಕೆಗೆ ಉತ್ತೇಜನ ನೀಡುತ್ತದೆ.

ಹೇಗೆ ಸೇವಿಸಬೇಕು?

ಗ್ರೀನ್​ ಟೀಯನ್ನು ಸೇವಿಸುವಾಗ ಯಾವುದೇ ಸಿಹಿಕಾರಕಗಳಿಲ್ಲದೆ ಸೇವಿಸಿ. ಬೆಳಿಗ್ಗೆ ಅಥವಾ ವ್ಯಾಯಾಮಕ್ಕೆ ಮುನ್ನ ಒಂದು ಕಪ್​ ಗ್ರೀನ್​ ಟೀ ಕುಡಿಯಿರಿ. ಇದರ ಜೊತೆಗೆ ನಿಂಬೆಹಣ್ಣು, ಶುಂಠಿ ಸೇವಿಸಿದರೆ ರುಚಿ ಜೊತೆ ಆರೋಗ್ಯ ಪ್ರಯೋಜಗಳೂ ಹೆಚ್ಚಾಗುತ್ತವೆ. ಇನ್ನು ರಾತ್ರಿ ವೇಳೆಯಲ್ಲಿ ಇದನ್ನು ಸೇವಿಸುವುದರಿಂದ ನಿದ್ರೆಗೆ ಭಂಗ ತರಬಹುದು ಹಾಗಾಗಿ ರಾತ್ರಿ ಸಮಯದಲ್ಲಿ ಸೇವಿಸುವುದನ್ನು ಕಡಿಮೆ ಮಾಡಿ.

ಇತರ ಸಲಹೆಗಳು

ಗ್ರೀನ್​ ಟೀ ಸೇವನೆಯಿಂದ ತೂಕ ಕಡಿಮೆಯಾಗಲು ಸಾಕಾಗುವುದಿಲ್ಲ. ಹಾಗಾಗಿ ನೀವು ಸೇವಿಸುವ ಆಹಾರದಲ್ಲಿ ಸಮ,ತೋಲನ ಕಾಪಾಡಿಕೊಳ್ಳಿ. ಹಾಗೆಯೇ ನಿಯಮಿತ ವ್ಯಾಯಾಮ, ನಿದ್ರೆ ಮಾಡುವುದರಿಂದ ತೂಕ ಇಳಿಸಬಹುದು ಎಂದು ಕೆಲವು ಅಧ್ಯಾಯನಗಳು ತಿಳಿಸಿವೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net