ತಲೆನೋವು ಬರುತ್ತಿದೆಯೇ? ಈ ಕಾಯಿಲೆಗಳ ಬಗ್ಗೆ ಎಚ್ಚರದಿಂದಿರಿ...Headache Causes

Headache
Published on

Headache Causes: ತಲೆನೋವಿನ ಸಣ್ಣ ಕಾರಣಗಳನ್ನು ಸಹ ನಿರ್ಲಕ್ಷಿಸಬಾರದು. ನಿಮಗೆ ತಲೆನೋವಿನ ಜೊತೆಗೆ ಇತರ ಲಕ್ಷಣಗಳು ಕಂಡುಬಂದರೆ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ತಲೆನೋವಿಗೆ ಹಲವು ಕಾರಣಗಳಿವೆ.

ತಲೆ ನೋವಿಗೆ ಕಾರಣ:

ನಿರ್ಜಲೀಕರಣ, ಹಸಿವು, ನಿದ್ರೆಯ ಕೊರತೆ, ಕೆಲಸದ ಒತ್ತಡ, ಆರ್ಥಿಕ ಸಮಸ್ಯೆ, ಒತ್ತಡ ಹೀಗೆ ಹಲವು ಕಾರಣಗಳಿಂದ ತಲೆನೋವು ಉಂಟಾಗಬಹುದು.

ಕಡಿಮೆ ನೀರು ಕುಡಿಯುವುದರಿಂದ ನಿರ್ಜಲೀಕರಣ ಮತ್ತು ತಲೆನೋವು ಉಂಟಾಗುತ್ತದೆ.

ಹಾರ್ಮೋನುಗಳ ಬದಲಾವಣೆಗಳು ಸಹ ತಲೆನೋವುಗೆ ಕಾರಣವಾಗಬಹುದು.

ಗರ್ಭಾವಸ್ಥೆಯಲ್ಲಿ ಈ ಸಮಸ್ಯೆಗಳಲ್ಲದೆ ತಲೆನೋವು ಕೂಡ ಉಂಟಾಗುತ್ತದೆ. ಬ್ರೈನ್ ಟ್ಯೂಮರ್ ಕೂಡ ತಲೆನೋವಿಗೆ ಕಾರಣವಾಗಬಹುದು.

ಕಣ್ಣು ಮತ್ತು ಕುತ್ತಿಗೆಯ ಸಮಸ್ಯೆಗಳಿಂದಲೂ ತಲೆನೋವು ಉಂಟಾಗುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಗಳು ಸಹ ತಲೆನೋವು ದಾಳಿಗೆ ಕಾರಣವಾಗಬಹುದು. ಆದ್ದರಿಂದ, ನಿಮಗೆ ಆಗಾಗ್ಗೆ ತಲೆನೋವು ಬಂದರೆ, ನೀವು ಖಂಡಿತವಾಗಿಯೂ ಜಾಗರೂಕರಾಗಿರಬೇಕು.

 ತಲೆ ನೋವಿಗೆ ಮನೆ ಮದ್ದು:

ಲವಂಗ ಮೊಗ್ಗುಗಳನ್ನು ತೆಗೆದುಕೊಂದು ಅದನ್ನು ಪ್ಯಾನ್ ಮೇಲೆ ಬಿಸಿ ಮಾಡಿ. ಲವಂಗದ ಪರಿಮಳ ಬರಲು ಆರಂಭವಾದಾಗ ಅದನ್ನು ಕರವಸ್ತ್ರದಲ್ಲಿ ಕಟ್ಟಿಕೊಳ್ಳಿ.  ನಂತರ ಪದೇ ಪದೇ ಇದರ ವಾಸನೆ ನೋಡುತ್ತಾ ಇರಿ. ಹೀಗೆ ಮಾಡಿದರೆ ತಲೆನೋವು ಕಡಿಮೆಯಾಗುವುದು.

ತಲೆನೋವನ್ನು ಹೋಗಲಾಡಿಸಲು ಲವಂಗದ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ. ಇದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದೇ ಪದೇ ತಲೆನೋವು ಬಂದಾಗಲೆಲ್ಲಾ ನೀವು ತುಳಸಿ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕುದಿಸಿ. ಇದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ತಲೆ ನೋವು ಕಡಿಮೆಯಾಗುತ್ತದೆ. ಈ ವಿಧಾನವನ್ನು ಪ್ರತಿ ಬಾರಿಯೂ ಮಾಡುವುದರಿಂದ, ತಲೆ ನೋವು ಬಿಟ್ಟು ಬಿಟ್ಟು ಬರುವುದಿಲ್ಲ.

ಒಂದು ಲೋಟದಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಇದು ತಲೆನೋವಿಗೆ ಪರಿಹಾರ ನೀಡುತ್ತದೆ.

ಗಮನಿಸಿ: ವಿಷಯಗಳು ಮಾಹಿತಿಗಾಗಿ ಮಾತ್ರ.  ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net