ವಿಶ್ರಾಂತಿ ಪಡೆದ ನಂತರವೂ ಆಯಾಸವಾಗ್ತಿದೆಯೇ? ಹಾಗಾದ್ರೆ ಇದು ಈ ಅನಾರೋಗ್ಯದ ಸಂಕೇತವಾಗಿರಬಹುದು|Tired

Tired
Published on

Tired: ಕೆಲವೊಮ್ಮೆ ಸಂಪೂರ್ಣ ವಿಶ್ರಾಂತಿ ಪಡೆದ ನಂತರವೂ ನೀವು ದಣಿದ, ಸುಸ್ತಾದ ಅನುಭವವನ್ನು ಅನುಭವಿಸುತ್ತೀರಿ ಅಲ್ಲವೇ. ಸಾಕಷ್ಟು ನಿದ್ದೆ ಮಾಡಿದ್ರು, ದೇಹ ಭಾರವಾಗಿರುತ್ತದೆ. ಯಾವುದೇ ಕೆಲಸ ಮಾಡಲು ಇಷ್ಟವಿರುವುದಿಲ್ಲ. ಅನೇಕ ಜನ ಇದನ್ನು ದೌರ್ಬಲ್ಯ ಅಥವಾ ದಿನಚರಿಯ ಪರಿಣಾಮವೆಂದು ಪರಿಗಣಿಸಿ ಸುಮ್ಮನಾಗುತ್ತಾರೆ. ಆದರೆ ವಿಶ್ರಾಂತಿಯ ಬಳಿಕವೂ ನಿರಂತರವಾಗಿ ಸುಸ್ತಾದ, ದಣಿದ ಅನುಭವ ಆಗುತ್ತಿದ್ದರೆ ನಿಮಗೆ  ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಲಕ್ಷಣವಿರಬಹುದು ಎನ್ನುತ್ತಾರೆ ತಜ್ಞ ವೈದ್ಯರು.

ಹೃದಯಕ್ಕೆ ರಕ್ತ ಮತ್ತು ಆಮ್ಲಜನಕ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ, ದೇಹದ ಶಕ್ತಿ ವೇಗವಾಗಿ ಕಡಿಮೆಯಾಗುತ್ತದೆ. ಇದರ ಪರಿಣಾಮ ಆಯಾಸವಾಗುತ್ತದೆ. ಹೃದಯದ ಸ್ನಾಯುಗಳ ಮೇಲಿನ ಒತ್ತಡದ ಪರಿಣಾಮವಾಗಿ ನಿರಂತರ ಆಯಾಸದ ಭಾವನೆ ಉಂಟಾಗಬಹುದು ಎನ್ನುತ್ತಾರೆ ತಜ್ಞರು.

ಯಾವ ಸಂಕೇತಗಳು ನಿಮಗೆ ಎಚ್ಚರಿಸಬಹುದು?

ನಿರಂತರ ಸುಸ್ತಾಗಿ ವಿಶ್ರಾಂತಿ ಮತ್ತು ನಿದ್ರೆಯ ನಂತರವೂ ದೇಹದಲ್ಲಿ ಉಲ್ಲಾಸ ಕಂಡು ಬರದಿದ್ದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ. ಯಾವುದಾದರೂ ಸಣ್ಣ ಕೆಲಸ ಮಾಡಿದ ಬಳಿಕ ಉಸಿರಾಟದ ತೊಂದರೆ ಉಂಟಾಗುವುದು ಹೃದಯ ಸಮಸ್ಯೆಯ ಸಂಕೇತವಾಗಿರಬಹುದು. ಎದೆಯಲ್ಲಿ ಭಾರ ಅಥವಾ ನೋವು ಇದ್ದರೆ ಅದು ಲಕ್ಷಣವಾಗಿರಬಹುದು. ಆಗಾಗ್ಗೆ ತಲೆತಿರುಗುವಿಕೆ ಮತ್ತು ದೌರ್ಬಲ್ಯವು ಹೃದಯ ಸಮಸ್ಯೆಗಳನ್ನು ಸೂಚಿಸುತ್ತದೆ.

ರಕ್ತ ಪರಿಚಲನೆ ದುರ್ಬಲಗೊಂಡ ಕಾರಣ ಪಾದಗಳಲ್ಲಿ ಊತವು ಹೃದಯ ಕಾಯಿಲೆಯ ಸಂಕೇತವಾಗಿರಬಹುದು.

ಆಯಾಸವನ್ನು ನಿರ್ಲಕ್ಷಿಸಬಾರದು

ಜನರು ಆಯಾಸವು ಆಗಾಗ್ಗೆ ಅತಿಯಾದ ಕೆಲಸ ಅಥವಾ ಒತ್ತಡದಿಂದ ಮಾತ್ರ ಉಂಟಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಅದು ನಿರಂತರ ಮತ್ತು ವಿವರಿಸಲಾಗದ ಆಯಾಸವು ಎಲ್ಲವೂ ಸಾಮಾನ್ಯವಲ್ಲ. ಇದನ್ನು ಸರಿಯಾದ ಸಮಯಕ್ಕೆ ನಿರ್ಲಕ್ಷಿಸಿದರೆ ಹೃದಯಾಘಾತದ ಅಪಾಯವು ಹೆಚ್ಚಾಗಬಹುದು.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ನಿಮಗೆ ಉಸಿರಾಟದ ತೊಂದರೆ ಅಥವಾ ಆಯಾಸದ ಜೊತೆಗೆ ಎದೆ ನೋವು, ದಿನನಿತ್ಯದ ಸಣ್ಣ ಕೆಲಸಗಳಲ್ಲಿಯೂ ಸಹ ದುರ್ಬಲ ಭಾವನೆ, ಕಾಲುಗಳಲ್ಲಿ ನಿರಂತರ ಊತ, ಆಗಾಗ್ಗೆ ತಲೆತಿರುಗುವಿಕೆ ಮತ್ತು ಬೆವರುವಿಕೆಯ ಸಮಸ್ಯೆ ಇದೆ ಅಂದ್ರೆ ಅಂತಹ ಸಂದರ್ಭಗಳಲ್ಲಿ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಹೃದಯವನ್ನು ಆರೋಗ್ಯವಾಗಿಡುವ ಮಾರ್ಗ

ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯಿರಿ ಅಥವಾ ವ್ಯಾಯಾಮ ಮಾಡಿ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ, ಒತ್ತಡ ಕಡಿಮೆ ಮಾಡಲು ಧ್ಯಾನ ಅಥವಾ ಯೋಗ ಮಾಡಿ.ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net