ಪ್ರತಿದಿನ ಹೆಚ್ಚು ಕ್ಯಾಲೊರಿಗಳನ್ನು ಸೇವಿಸುತ್ತಿದ್ದೀರಾ? ದೇಹದ 5 ಸಂಕೇತಗಳು ಸುಳ್ಳು ಹೇಳೋದಿಲ್ಲ! Calories

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅತಿಯಾಗಿ ತಿನ್ನುವುದು ನಮ್ಮ ಜೀವನದಲ್ಲಿ ನಾವು ಮಾಡಿಕೊಂಡಿರುವ ಅಭ್ಯಾಸವಾಗಿದೆ
  • ಈ ರೀತಿಯ ಅಭ್ಯಾಸಗಳು ನಮ್ಮ ದೇಹದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ
  • ರಂತರವಾಗಿ ಊಟ ಸೇವಿಸುವುದು ಅತಿಯಾಗಿ ತಿನ್ನುವುದರ ಸಂಕೇತವಾಗಿದೆ
  • ಅತಿಯಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು
Calories: ಅತಿಯಾಗಿ ತಿನ್ನುವುದು ನಮ್ಮ ಜೀವನದಲ್ಲಿ ನಾವು ಮಾಡಿಕೊಂಡಿರುವ ಅಭ್ಯಾಸವಾಗಿದೆ. ಇದು ನಮಗೆ ಅರಿವಿಲ್ಲದೇ, ಒಂದೇ ಬಾರಿಗೆ ಇಡೀ ಪಿಜ್ಜಾವನ್ನು ತಿನ್ನುವುದಾಗಲಿ, ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಸೇವಿಸುವುದು ಈ ರೀತಿಯ ಅಭ್ಯಾಸಗಳು ನಮ್ಮ ದೇಹದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ನೀವು ಮಿತಿಮೀರಿ ಸೇವಿಸುತ್ತಿದ್ದೀರಿ ಎಂದು ತಿಳಿಯುವುದು ಹೇಗೆ?
ನೀವು ಅತಿಯಾಗಿ ತಿನ್ನುತ್ತಿದ್ದೀರಿ ಎಂದು ಸೂಚಿಸುವ 5 ಪ್ರಮುಖ ಚಿಹ್ನೆಗಳನ್ನು ಫಿಟ್‌ನೆಸ್ ತರಬೇತುದಾರರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿಹ್ನೆಗಳನ್ನು ಅರ್ಥಮಾಡಿಕೊಂಡು ಆಹಾರದೊಂದಿಗೆ ಆರೋಗ್ಯಕರ ಸಂಬಂಧವನ್ನು ಬೆಳೆಸುವುದು ಮೊದಲ ಹೆಜ್ಜೆ ಎಂದು ತಿಳಿಸಿದ್ದಾರೆ.

1. ಹಸಿವಿಲ್ಲದಿದ್ದರೂ ತಟ್ಟೆಯಲ್ಲಿರುವ ಊಟವನ್ನು ಖಾಲಿ ಮಾಡುತ್ತೀರಿ

ನಿಮಗೆ ಹಸಿವಿಲ್ಲದಿದ್ದರೂ ಸಹ ನಿರಂತರವಾಗಿ ಊಟ ಸೇವಿಸುವುದು ಅತಿಯಾಗಿ ತಿನ್ನುವುದರ ಸಂಕೇತವಾಗಿದೆ. ಈ ಅಭ್ಯಾಸಗಳು ದೇಹದ ಹೊಟ್ಟೆ ತುಂಬಿದ್ದರೂ, ಆಹಾರವನ್ನು ವ್ಯರ್ಥ ಮಾಡಬಾರದು ಎಂದು ಕೆಲವೊಮ್ಮೆ ಸೇವಿಸುವುದು ಕೂಡಾ ಆಗಿದೆ.

2. ಊಟದ ನಂತರ ಹೆಚ್ಚುವರಿ ಬಾಯಾರಿಕೆಯಾಗುವುದು

ಊಟದ ನಂತರ ಅಸಾಧಾರಣವಾಗಿ ಬಾಯಾರಿಕೆಯಾಗುವುದು. ವಿಶೇಷವಾಗಿ ಉಪ್ಪು ಅಥವಾ ಮಸಾಲ ಪದಾರ್ಥವನ್ನು ಸೇವಿಸಿದ ನಂತರ ಬಾಯಾರಿಕೆಯಾಗುತ್ತದೆ. ಇದು ಹೆಚ್ಚು ತಿನ್ನುವುದರಿಂದ ಈ ಸಮಸ್ಯೆ ಉಂಟಾಗಬಹುದು ಎಂದು ಫಿಟ್ನೆಸ್​ ತರಬೇತುದಾರರು ತಿಳಿಸಿದ್ದಾರೆ.

3. ಹೊಟ್ಟೆ ಉಬ್ಬರವಾದಂತೆ ಭಾಸವಾಗುವುದು

ಊಟದ ನಂತರ ಹೊಟ್ಟೆ ಉಬ್ಬುವುದು, ಗ್ಯಾಸ್ ಆದಂತೆ ಭಾಸವಾಗುವಂತಹ ಸಮಸ್ಯೆಯನ್ನು ನೀವು ಎದುರಿಸುತ್ತೀರಾ. ಇದು ಅತಿಯಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಹೆಚ್ಚುವರಿ ಆಹಾರವನ್ನು ಸಂಸ್ಕರಿಸಲು ಹೆಣಗಾಡುವಂತೆ ಮಾಡುತ್ತದೆ.

4. ನೀವು ಗಮನ ಕೊಡದೆ ಬೇಗನೆ ತಿನ್ನುತ್ತೀರಿ

ಕೆಲವೊಮ್ಮೆ, ಯಾವುದೇ ಕಡೆ ಗಮನ ನೀಡದೇ, ಅವಸರದಿಂದ ಆಹಾರವನ್ನು ಸೇವಿಸುತ್ತೀರಿ. ಇದು ನಿಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎಂದು ಹೇಳಲು ಸಹ ಆಗುವುದಿಲ್ಲ. ಹಾಗಾಗಿ ನೀವು ತೃಪ್ತಿಯ ಹಂತವನ್ನು ಮೀರಿ ತಿನ್ನುವುದರಿಂದ ಸಣ್ಣ ತುಂಡುಗಳನ್ನು ತೆಗೆದುಕೊಂಡು ಅಗೆದು ಸೇವಿಸಬೇಕು ಎಂದು ಫಿಟ್​ನೆಸ್​ ತರಬೇತುದಾರರು ತಿಳಿಸಿದ್ದಾರೆ.

5. ಊಟದ ನಂತರ ಕಡುಬಯಕೆಗಳು ಬರುತ್ತವೆ

ಯಾವುದೇ ವ್ಯಕ್ತಿಯು ಆಹಾರವನ್ನು ಸೇವಿಸಿದ ನಂತರ ಪುರ್ನ ತಿನ್ನಬೇಕು ಎಂದು ಅವನಲ್ಲಿ ಆಸೆಗಳು ಹೆಚ್ಚಾಗುತ್ತವೆ. ಈ ರೀತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಸ್ಪ್ರೈಕ್‌ಗಳು ಮತ್ತು ನಂತರ ಕ್ರ್ಯಾಶ್‌ಗಳು ಉಂಟಾಗಬಹುದು. ಹಾಗಾಗಿ ಯಾವಾಗಲು ಅತಿಯಾಗಿ ಸೇವಿಸುವುದನ್ನು ನಿಲ್ಲಿಸಬೇಕು ಎಂದು ಕ್ಯಾಟ್​ ತಿಳಿಸಿದ್ದಾರೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net