ದೇಶದ ಜನಸಂಖ್ಯೆಯ ಶೇ.25 ಮಂದಿಗೆ ಅಲರ್ಜಿ

Allergy
Published on

ಬೆಂಗಳೂರು: ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.25 ಮಂದಿ ವಿವಿಧ ರೀತಿಯ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಜೆರಾತ್ ಪ್ಯಾಥ್ ಲ್ಯಾಬ್​ನ ಡಾ.ಪ್ರಶಾಂತ್ ಜೆರಾತ್ ತಿಳಿಸಿದ್ದಾರೆ.

ಅಲರ್ಜಿಯಿಂದ ಮೈಯೆಲ್ಲಾ ತುರಿಸುವುದು, ಕೆಂಪು ಗುಳ್ಳೆ ಏಳುವುದು, ಶೀತ, ಕೆಮ್ಮು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಸಾಮಾನ್ಯವಾಗಿ ಧೂಳು, ಮಾಲಿನ್ಯ, ವಿಷಕಾರಕ ಸಸ್ಯಗಳು, ಚುಚ್ಚುಮದ್ದು, ಔಷಧ ಕಾರಣಗಳಿಂದ ಅಲರ್ಜಿ ಉಂಟಾಗುತ್ತದೆ. ಕೆಲವೊಮ್ಮೆ ಶುಚಿಯಿಲ್ಲದ ಆಹಾರ ಸೇವನೆ, ಜೀವನಶೈಲಿ, ದೈಹಿಕ ಸುಸ್ತು, ಮಾನಸಿಕ ಒತ್ತಡ ಇವುಗಳ ಕೂಡ ಅಲರ್ಜಿ ಸಮಸ್ಯೆಗೆ ಒಂದು ಕಾರಣವಾಗಿದೆ. ಆದ್ದರಿಂದ ವಿಶ್ವಾದ್ಯಂತ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿರುವ ಈ ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು ಎಂದು ಹೇಳಿದರು.

ಗುಣಮಟ್ಟ ಚಿಕಿತ್ಸೆ: ಅಲರ್ಜಿ ತಡೆಗಟ್ಟಲು ಜೆರಾತ್ ಪ್ಯಾಥ್ ಲ್ಯಾಬ್​ನಲ್ಲಿ ಸುಧಾರಿತ ತಂತ್ರಜ್ಞಾನ ವ್ಯವಸ್ಥೆ ಇದೆ. ವಿಶ್ವ ದರ್ಜೆಯ ಪರೀಕ್ಷೆ ಸೌಲಭ್ಯಗಳಿವೆ. ಅಲರ್ಜಿ ಪರೀಕ್ಷೆಯಲ್ಲಿ ಪರಿಣತಿ ಹೊಂದಿರುವ ಡಾ.ಪ್ರಶಾಂತ್ ಜೆರಾತ್ ರೋಗಿಗಳಿಗೆ ಗುಣಮಟ್ಟ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸುತ್ತಿದ್ದಾರೆ. ಅಲ್ಲದೆ, ಮುಜಾಗ್ರತೆಯಾಗಿ ಏನೇನು ಪಾಲನೆ ಮಾಡಬೇಕೆಂದು ರೋಗಿಗಳಿಗೆ ಸಲಹೆಗಳನ್ನು ನೀಡುತ್ತಿದ್ದಾರೆ.

ಇಮ್ಯುನೊಕ್ಯಾಪ್ ಪರೀಕ್ಷೆ: ಅಲರ್ಜಿ ರೋಗ ನಿರ್ಣಯದ ಸಂಬಂಧ ಅನೇಕ ಸಂಶೋಧನೆಗಳು ನಡೆದಿವೆ. ಚರ್ಮದ ಚುಚ್ಚು ಪರೀಕ್ಷೆಗಳು ಇನ್ನೂ ಮೂಲಭೂತ ಪರೀಕ್ಷೆಯಾಗಿದೆ. ಭಾರತದಲ್ಲಿ ಹೆಚ್ಚಾಗಿ ಇದನ್ನು ಬಳಸಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಇಮ್ಯುನೊಕ್ಯಾಪ್ ಪರೀಕ್ಷೆಯು ಕ್ರಾಂತಿಕಾರಿಯಾಗಿದೆ. ಈ ಪರೀಕ್ಷೆಯಿಂದ ಕಾಯಿಲೆ ಲಕ್ಷಣ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಸಿಗಲಿದೆ. ಇಂತಹ ತಂತ್ರಜ್ಞಾನವನ್ನು ಜೆರಾತ್ ಪ್ಯಾಥ್ ಲ್ಯಾಬ್​ನಲ್ಲಿ ಅಳವಡಿಸಲಾಗಿದೆ ಎಂದು ಡಾ.ಪ್ರಶಾಂತ್ ಜೆರಾತ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net