ವಿಮಾನ ಪ್ರಯಾಣವನ್ನು ಇನ್ನಷ್ಟು ಸುಂದರವಾಗಿಸಲು ಕೆಫೆ ಆಕಾಸ ಬಾಯೂರಿಸುವ ಸ್ಮೋಕ್ಡ್ ಚಿಕನ್ ಹಾಗೂ ಡಿಲ್ ರೋಲಾಡ್, ಕ್ರ್ಯಾನ್‌ಬೆರಿ ಮತ್ತು ಪಿಸ್ತಾದ ಸೊಗಸಾದ ಮಿಶ್ರಣ, ಕಣ್ಮನ ಸೆಳೆಯುವ ಬಾಲ್ಸಾಮಿಕ್ ತರಕಾರಿ ಸಲಾಡ್ ಇರಲಿದೆ. ಜೊತೆಗೆ ಸಿಹಿ ಪ್ರಿಯರಿಗಾಗಿ ನಿಂಬೆ ಸುವಾಸನೆ ಭರಿತ ಮೃದುವಾದ ಪನ್ನಾ ಕೊಟ್ಟಾ, ಬೆರ್ರಿ ಜ್ಯೂಸ್‌ನ ಸಾಸ್ ಹಾಗೂ ಪ್ರಯಾಣಿಕರ ಇಷ್ಟದ ಪಾನೀಯವನ್ನು ಇದರಲ್ಲಿ ಸೇರಿಸಲಾಗಿದೆ.