ಆರೋಗ್ಯಕರ ಎನ್ನುವ ಹಾಲಿನ ಉತ್ಪನ್ನಗಳು ಜೀರ್ಣಾಂಗವ್ಯೂಹಕ್ಕೆ ಮಾರಕ; ವೈದ್ಯರು ಹೇಳಿದ್ದೇನು?..Dairy Food

Dairy and gut health
Dairy and gut health
Published on

ಪ್ರಮುಖ ಮುಖ್ಯಾಂಶಗಳು

  • ಡೈರಿ ಉತ್ಪನ್ನಗಳು ಎಲ್ಲರ ದೇಹಕ್ಕೂ ಸೂಕ್ತವಾದ ಆಹಾರವಲ್ಲ: ಡಾ. ಸೌರಭ್ ಸೇಥಿ
  • ಹಾಲಿನ ಉತ್ಪನ್ನಗಳು ಹೊಟ್ಟೆ ಉಬ್ಬರ ಮತ್ತು ಅಸಿಡಿಟಿಗೆ ಕಾರಣವಾಗಬಹುದು.
  • ಲ್ಯಾಕ್ಟೋಸ್ ಮುಕ್ತ ಆಹಾರ ಅಥವಾ ಹುದುಗಿಸಿದ ಆಹಾರಗಳು ಹೊಟ್ಟೆಗೆ ಉತ್ತಮ.
Dairy And Gut Health: ಬೆಳಗ್ಗೆದ್ದ ಕೂಡಲೇ ಕಾಫಿ ಬೇಕು, ಮಧ್ಯಾಹ್ನ ಒಂದು ಸಿಪ್, ಸಂಜೆ ಇನ್ನೊಮ್ಮೆ ಟೀ, ಹಾಲು ಹೀಗೆ ನಾನಾ ವಿಚಾರಕ್ಕೆ ನಾವು ಹಾಲನ್ನು ಬಳಕೆ ಮಾಡ್ತೇವೆ. ಇನ್ನು ಗಿಣ್ಣು, ಪನ್ನೀರು ಮುಂತಾದ ಡೈರಿ ಉತ್ಪನ್ನಗಳನ್ನು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಪೌಷ್ಟಿಕಾಂಶಯುಕ್ತ ಆಹಾರವೆಂದು ಪರಿಗಣಿಸುತ್ತೇವೆ.
ಆದರೆ, ಅಚ್ಚರಿ ವಿಚಾರ ಎಂದರೆ, ಡೈರಿ ಉತ್ಪನ್ನಗಳು ಕೆಲವರ ದೇಹಕ್ಕೆ ಒಗ್ಗಿಕೊಳ್ಳುವುದಿಲ್ಲ. ಇದು ಹೊಟ್ಟೆಯ ಆರೋಗ್ಯವನ್ನು ನಮಗೆ ತಿಳಿಯದೇ ಹಾಳು ಮಾಡುತ್ತದೆ ಎಂದು ಹಾರ್ವರ್ಡ್ ಮತ್ತು AIIMS ತರಬೇತಿ ಪಡೆದ ಪ್ರಸಿದ್ಧ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಮಾಹಿತಿ ಹಂಚಿಕೊಂಡಿದ್ದಾರೆ.

ಲ್ಯಾಕ್ಟೋಸ್ ಜೀರ್ಣವಾಗದೆ ಸಮಸ್ಯೆ

ಹಾಲು ಮತ್ತು ಡೈರಿ ಉತ್ಮನ್ನಗಳು ಎಲ್ಲ ಜನರಿಗೆ ಕೆಟ್ಟದಲ್ಲ. ಆದರೆ ವಯಸ್ಕರಲ್ಲಿ ಹಾಲಿನಲ್ಲಿರುವ 'ಲ್ಯಾಕ್ಟೋಸ್' ಅಂಶವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಕಾರಣದಿಂದ ಹೊಟ್ಟೆ ಉಬ್ಬುವುದು. ಇರಿಸು ಮುರಿಸಾಗುವುದು, ಗ್ಯಾಸ್, ಅಸಿಡಿಟಿ ಅಥವಾ ಅಜೀರ್ಣದಿಂದ ಬಳಲುವಂತಾಗುತ್ತದೆ ಎಂದು ಡಾ. ಸೇಥಿ ಹೇಳಿದರು.

ಮುಂದೇನು ಮಾಡಬೇಕು?

  • ಹಾಲಿನ ಉತ್ಪನ್ನ ಅಥವಾ ಹಾಲಿನಿಂದ ಸಮಸ್ಯೆಯಾಗುತ್ತಿದೆ ಎಂದು ಎನಿಸಿದರೆ, ತಕ್ಷಣ ಬಿಡೋದು ಬೇಡ. ಜೀರ್ಣಾಂಗ ಕ್ರಿಯೆ ಬೇಕಾದ ಬದಲಾವಣೆಯನ್ನು, ಯಾವ ಆಹಾರವನ್ನು ಸೇವಿಸಿದರೆ, ನನ್ನ ಹೊಟ್ಟೆಗೆ ಸೂಕ್ತ ಎಂದು ಅರಿತುಕೊಂಡು ಆಹಾರ ಕ್ರಮ ಪಾಲಿಸಬೇಕು ಎಂದು ಹೇಳಿದ್ದಾರೆ.
  • ಕಾಫಿ, ಟೀ, ಪನ್ನೀರ್​ ಗಿಣ್ಣು ಇವುಗಳನ್ನು ಸಂಪೂರ್ಣ ನಿಷೇಧಿಸಬೇಕು ಎಂದು ನಿಮ್ಮಲ್ಲೇ ನೀವು ಪ್ರಮಾಣ ಮಾಡಿಕೊಂಡು ಆಗದೆ ಒದ್ದಾಡುವ ಬದಲಾಗಿ, ಲ್ಯಾಕ್ಟೋಸ್​ ಮುಕ್ತ ಆಹಾರವನ್ನು ಸೇವಿಸಲು ಚಿಂತಿಸಿ ಎಂದಿದ್ದಾರೆ. ಇದರಿಂದ ನಿಮ್ಮನ್ನು ಕಾಡುವ ಅಸಿಡಿಟಿ ಹೊಟ್ಟೆ ಉಬ್ಬರ ತಡೆಯಬಹುದು.
  • ಡೈರಿ ಉತ್ಪನ್ನದ ಬದಲಿಗೆ ಹುದುಗಿಸಿದ ಆಹಾರ ಪದಾರ್ಥ ಸೇವಿಸುವುದು ಒಳ್ಳೆಯದು. ಇದು ಹೊಟ್ಟೆಗೆ ತೊಂದರೆ ಮಾಡುವುದಿಲ್ಲ ಜೊತೆಗೆ ಜೀರ್ಣಕ್ರಿಯೆಗೆ ಹಗುರವಾಗುವಂತೆ ಮಾಡುತ್ತವೆ. ಹೊಟ್ಟೆಯ ಉಬ್ಬರ, ಅಸಿಡಿಟಿ, ಗ್ಯಾಸ್​ ಸಮಸ್ಯೆಗೆ ಕೇವಲ ನಾವು ನಿತ್ಯ ತಿನ್ನುವ ಆಹಾರ ಕಾರಣವಾಗೋದಿಲ್ಲ ಡೈರಿ ಉತ್ಪನ್ನ ಸೇವಿಸುವ ಪ್ರಮಾಣವು ಮ್ಯಾಟರ್​ ಆಗಲಿದೆ ಎಂದಿದ್ದಾರೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಡಾ. ಸೌರಭ್ ಸೇಥಿ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಮಾಹಿತಿಯಾಗಿದೆ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net