ಆಹಾರ ಆರೋಗ್ಯ; ಬಹು ಪ್ರಯೋಜನಕಾರಿ ಪಾಲಕ್

PALAK
Published on

ದಿನಬಳಕೆಯ ಸೊಪ್ಪುಗಳಲ್ಲಿ ಪಾಲಕ್ ಕೂಡ ಒಂದು. ಇದನ್ನು ಬಳಸಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಪಾಲಕ್ ಸೊಪ್ಪು ಅಡುಗೆಗೆ ಮಾತ್ರ ಸೀಮಿತವಲ್ಲ. ಈ ಸೊಪ್ಪನ್ನು ಔಷಧವಾಗಿಯೂ ಉಪಯೋಗಿಸಬಹುದು. ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿರುವ ಪಾಲಕ್, ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಇದರಲ್ಲಿ ವಿಟಮಿನ್, ಪ್ರೊಟೀನ್, ಮಿನರಲ್, ಕಬ್ಬಿಣದ ಅಂಶಗಳು ಹೇರಳವಾಗಿವೆ.

ಆಹಾರದಲ್ಲಿ ನಿಯತವಾಗಿ ಪಾಲಕ್ ಸೊಪ್ಪನ್ನು ಬಳಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಜತೆಗೆ ಕೂದಲಿನ ಹೊಳಪನ್ನು ಹೆಚ್ಚಿಸಿ, ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

  • ಮಲಬದ್ಧತೆಯಿಂದ ಬಳಲುತ್ತಿರುವವರು ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಏಕೆಂದರೆ ಇದರಲ್ಲಿ ನಾರಿನಂಶ ವಿಪುಲವಾಗಿದೆ.
  • ಮಧುಮೇಹ ರೋಗಿಗಳು ದಿನನಿತ್ಯ ಪಾಲಕ್ ಸೊಪ್ಪನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ, ಮಧುಮೇಹ ನಿಯಂತ್ರಣದಲ್ಲಿರುತ್ತದೆ.
  • ಸೂಪ್, ಜ್ಯೂಸ್ ಹೀಗೆ ಯಾವುದಾದರೂ ರೀತಿಯಲ್ಲಿ ಆಹಾರದಲ್ಲಿ ನಿಯತವಾಗಿ ಪಾಲಕ್ ಸೊಪ್ಪನ್ನು ಬಳಸುವುದರಿಂದ ಮುಖದ ಮೇಲಿನ ನೆರಿಗೆಗಳು ಕಡಿಮೆಯಾಗುತ್ತವೆ. ಮೊಡವೆಗಳು ಇಲ್ಲವಾಗಿ, ಮುಖದ ಕಾಂತಿ ಹೆಚ್ಚುತ್ತದೆ.
  • ಸ್ಥೂಲಕಾಯ ಹೊಂದಿರುವವರು ಪಾಲಕ್ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಅದರ ಕ್ಯಾರೊಟಿನಾಯ್್ಡ ಅಂಶವು ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಕರಗಿಸಿ ದೇಹದ ಬೆಳವಣಿಗೆಯನ್ನು ಸಮತೋಲನದಲ್ಲಿರಿಸುತ್ತದೆ.
  • ನಿತ್ಯ ಪಾಲಕ್ ಸೊಪ್ಪಿನ ರಸ ಸೇವನೆಯಿಂದ ದೇಹದಲ್ಲಿ ರಕ್ತಕಣಗಳ ಉತ್ಪತ್ತಿ ಹೆಚ್ಚಾಗಿ ರಕ್ತ ಹೀನತೆ ದೂರವಾಗುತ್ತದೆ.
  • ಪಾಲಕ್ ಸೊಪ್ಪನ್ನು ಆಹಾರದಲ್ಲಿ ನಿಯತವಾಗಿ ಬಳಸುವುದರಿಂದ ಮಿದುಳಿನ ನರಕೋಶಗಳು ಚೆನ್ನಾಗಿ ಬೆಳವಣಿಗೆ ಹೊಂದಿ ನೆನಪಿನ ಶಕ್ತಿ ಹೆಚ್ಚಳಕ್ಕೆ ಸಹಾಯವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net