

ಮಕ್ಕಳಲ್ಲಿ ಬರುವ ಕ್ಯಾನ್ಸರ್ಗಳಿಗೆ ನಿರ್ದಿಷ್ಟ ಕಾರಣ ಹೇಳಲು ಸಾಧ್ಯವಿಲ್ಲ. ಮಕ್ಕಳ ದೇಹದಲ್ಲಿನ ಜೀವಕೋಶದಲ್ಲಿರುವ ಜೀವಕಣಗಳಲ್ಲಿನ ವ್ಯತ್ಯಾಸದಿಂದ ಉಂಟಾಗುತ್ತದೆ ಎಂದು ಹೇಳಬಹುದು. ಉಳಿದಂತೆ ವಂಶವಾಹಿನಿ, ರೋಗ ನಿರೋಧಕ ಶಕ್ತಿ ಇಲ್ಲದಿರುವುದು, ಇಬಿ ವೈರಸ್ ಸೋಂಕು, ರಾಸಾಯನಿಕ (ಕೆಮಿಕಲ್) ಬಳಕೆ, ಧೂಮಪಾನ ಹಾಗೂ ತಂಬಾಕು ಬಳಕೆ ಮಾಡುವವರ ಸಂಪರ್ಕದಿಂದಲೂ ಮಕ್ಕಳಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ.
ಮಕ್ಕಳಲ್ಲಿ ಪ್ರಮುಖವಾಗಿ ಕಾಡುವ ಕ್ಯಾನ್ಸರ್ ಅಕ್ಯೂಟ್ ಲಿಂಫೋ ಬ್ಲಾಸ್ಟಿಕ್. ಇದು ಶೇ.30 ಮಕ್ಕಳಲ್ಲಿ ಕಂಡುಬರಲಿದ್ದು, ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಶೇ.20 ಬ್ರೖೆನ್ ಟ್ಯೂಮರ್, ಶೇ.15 ಲಿಂಫೋ ಗಂಥಿ ಕ್ಯಾನ್ಸರ್, ಶೇ.10 ಕಿಡ್ನಿ ಕ್ಯಾನ್ಸರ್ ಮತ್ತು ನ್ಯೂರೋಬ್ಲಾಸ್ಟೋಮಾ, ಉಳಿದ ಶೇ.25 ಮಾಂಸಖಂಡದ ಕ್ಯಾನ್ಸರ್, ಮೂಳೆಯಿಂದ ಬರುವ ಕ್ಯಾನ್ಸರ್, ಕಣ್ಣಿನ ಕ್ಯಾನ್ಸರ್, ಲಿವರ್ ಮತ್ತು ಅಂಡಾಣು ಕ್ಯಾನ್ಸರ್ ಆಗಿದೆ. ಆರಂಭದಲ್ಲೇ ಕಾಯಿಲೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು.