ಬೆಳಗ್ಗೆ ಎದ್ದ ತಕ್ಷಣ ಮಾಡುವ ಸಣ್ಣ ತಪ್ಪಿಂದಾಗಿ ಗಂಭೀರ ಕಾಯಿಲೆಗಳು ಎದುರಿಸಬೇಕಾಗುತ್ತಂತೆ!; ಅದು ಏನು ಗೊತ್ತೆ? | Morning

dk - 2025-04-11T172531.122
Published on

Morning : ನೀವು ಬೆಳ್ಳಿಗ್ಗೆ ಮತ್ತುಮ ರಾತ್ರಿ ಹಲ್ಲುಜ್ಜದೆ ಮಲಗಿದ್ರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗಿತ್ತವೆ ಗೊತ್ತೆ. ಒಂದು ವೇಳೆ ಹಲ್ಲುಜ್ಜದೆ ಸೋಮಾರಿಗಳಾಗಿದ್ದರೆ ಈ ಸುದ್ದಿ ನಿಮಗಾಗಿ ಎಂದೇ ಹೇಳಬಹುದು. ನಿಮ್ಮ ಹಲ್ಲುಗಳನ್ನು ದಿನಾಲು ಸ್ವಚ್ಛಗೊಳಿಸುವುದು ಸುಂದರವಾದ ನಗುವಿಗೆ ಮಾತ್ರವಲ್ಲದೆ, ಗಂಭೀರಮ ಕಾಯಿಲೆಗಳಿಂದ ದೇಹದ ಆರೋಗ್ಯವನ್ನು ರಕ್ಷಿಸುವುದಾಗಿದೆ.

ಹೌದು, ಪ್ರತಿನಿತ್ಯ ಹಲ್ಲುಜ್ಜದಿದ್ದರೆ ಬಾಯಿಗೆ ಮಾತ್ರವಲ್ಲ, ದೇಹಕ್ಕೂ ಕಾರಣವಾಗುತ್ತದೆ. ಅಲ್ಲದೆ, ಅನೇಕ ಅಪಾಯಕಾರಿ ರೋಗಗಳು ದೇಹದಲ್ಲಿ ಉಲ್ಬಣಿಸುವ ಸಾಧ್ಯತೆ ಇದೆ. ಇನ್ನು WHO ಪ್ರಕಾರ, ಬಾಯಿಯ ಕಾಯಿಲೆಗಳು ಸುಮಾರು 3.7 ಶತಕೋಟಿ ಜನರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಈ ರೋಗಗಳು ಹರಡುವ ಸಾಧ್ಯತೆ ಇದೆ.

1.ಒಸಡು (ಪೆರಿಯೊಡಾಂಟಲ್)​ ಕಾಯಿಲೆ

ನಿಯಮಿತವಾಗಿ ಹಲ್ಲುಜ್ಜುದಿದ್ದರೆ ಪೆರಿಯೋಡಾಂಟಲ್​ ಕಾಯಿಲೆ ಬರುವ ಸಾಧ್ಯತೆ ಅಧಿಕವಾಗಿದೆ. ಹಲ್ಲುಜ್ಜದಿದ್ದರೆ ನಿಮ್ಮ ಹಲ್ಲುಗಳ ಬೇರಿಗಳಲ್ಲಿ ಬ್ಯಾಕ್ಟರಿಯಾಗಳು ಸಂಗ್ರಹವಾಗುತ್ತವೆ.. ಇದರಿಂದಾಗಿ ಒಸಡುಗಳು ಊದಿಕೊಳ್ಳುತ್ತವೆ. ಅಲ್ಲದೆ, ರಕ್ತಸ್ರಾವದಿಂದಾಗಿ ಹಲ್ಲುಗಳು ಸಡಿಲವಾಗುತ್ತವೆ. ಇದರಿಂದಾಗಿ ಹಲವು ಸಮಸ್ಯೆಗಳು ಉಂಟಗುಯತ್ತವೆ.

2. ಹೃದ್ರೋಗ

ದಿನಂಪ್ರತಿ ಹಲ್ಲುಜ್ಜದಿದ್ದರೆ ಹೃದಯ ಸಂಬಂಧಿತ ರೋಗಗಳು ಬರುವ ಸಾಧ್ಯತೆ ಅಧಿಕವಾಗಿದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ರಕ್ತ ಪರಿಚಲನೆಯ ಮೂಲಕ ಹೃದಯವನ್ನು ತಲುಪಬಹುದು, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅನೇಕ ಸಂಶೋಧನೆಗಳು ಕಂಡುಕೊಂಡಿವೆ.

3. ಶುಗರ್​

ಹಲ್ಲುಜ್ಜದೇ ಇರುವುದರಿಂದ ಕೂಡ ಮಧುಮೇಹ( ಶುಗರ್​) ರೋಗ ಬರುವ ಸಾಧ್ಯತೆ ಕೂಡ ಅಧಿಕವಾಗಿದೆ ಎಂದು ತಜ್ಞರು ಅಭಿಪ್ರಾಯವಾಗಿದೆ. ಹಲ್ಲು ಮತ್ತು ಒಸಡು ಊರಿಯತವೂ ದೇಹದಲ್ಲಿ ಇನ್ಸೂಲಿನ್​ ಪ್ರತಿರೋಧವನ್ನು ಹೆಚ್ಚಿಸಬಹುದು. ಇದರಿಂದ ಸಕ್ಕರೆ ನಿಯಂತ್ರಿಸುವುದು ಕಷ್ಟವಾಗುವುದು. ಇದು ಮಧುಮೇಹ ರೋಗ ಬರುವ ಅಪಾಯವನ್ನುಂಟು ಮಾಡುತ್ತದೆ.

4.ಶ್ವಾಸಕೋಶ ಸೋಂಕು

ಹಲ್ಲುಜ್ಜದೆ ಇರುವುದರಿಂದ, ಬಾಯಿಯಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾಗಳು ಉಸಿರಾಟದ ಮೂಲಕ ಶ್ವಾಸಕೋಶವನ್ನು ತಲುಪಬಹುದು ಮತ್ತು ನ್ಯುಮೋನಿಯಾದಂತಹ ಕಾಯಿಲೆಗಳಿಗೆ ಕಾರಣವಾಗಬಹುದು.

5. ಬಾಯಿ ಕ್ಯಾನ್ಸರ್​ ದೀರ್ಘಕಾಲದವರೆಗೆ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಸೋಂಕು ಮತ್ತು ಅಂಗಾಂಶ ಹಾನಿ ಹೆಚ್ಚಾಗುತ್ತದೆ, ಇದು ಬಾಯಿಯ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸುತ್ತದೆ. ಇದು ಮಾರಕವಾಗಬಹುದು. ಅದಕ್ಕಾಗಿಯೇ ಎಲ್ಲರೂ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಹಲ್ಲುಜ್ಜಬೇಕು.

ಹಲ್ಲಿನ ಆರೋಗ್ಯ ರಕ್ಷಿಸಿಕೊಳ್ಳುವುದೇಗೆ..?

1.ದಿನಕ್ಕೆ ಎರಡು ಬಾರಿ ಹಲ್ಲುಜ್ಜಿಕೊಳ್ಳಿ

2.ಮೌತ್‌ವಾಶ್ ಮತ್ತು ಫ್ಲೋಸಿಂಗ್ ಬಳಸಿ

3.ಪ್ರತಿ 6 ತಿಂಗಳಿಗೊಮ್ಮೆ ದಂತ ತಪಾಸಣೆ ಮಾಡಿಸಿಕೊಳ್ಳಿ

4.ಸಕ್ಕರೆ ಮತ್ತು ಧೂಮಪಾನವನ್ನು ತಪ್ಪಿಸಿ(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net