

ಬೆಂಗಳೂರು: ಭಾರತದ ವಿವಿಧ ನಗರಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ವಿಷಕಾರಿಯಾಗಿದೆ. ಅದೇನೇ ಇದ್ದರೂ, ದೀಪಾವಳಿಯ ಸಮಯದಲ್ಲಿ ಸಿಡಿಯುವ ಪಟಾಕಿಗಳು ಸಹ ಇದಕ್ಕೆ ಸೇರ್ಪಡೆಯಾಗುತ್ತವೆ. ದೆಹಲಿಯಲ್ಲಿ ಸಾಮಾನ್ಯವಾಗಿ ಗಾಳಿಯ ಗುಣಮಟ್ಟದ ವಿಷಯದಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮ, ಹಬ್ಬದ ಸಮಯದಲ್ಲಿ ವಾಯು ಮಾಲಿನ್ಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕೆಲವು ಸಲಹೆಗಳಿವೆ.
ಇತ್ತೀಚೆಗೆ, ಭಾರತದ ವಾಯು ಗುಣಮಟ್ಟ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ ಮತ್ತು ಗ್ರೇಟರ್ ನೋಯ್ಡಾ, ದೆಹಲಿ ಮತ್ತು ಫರಿದಾಬಾದ್‌ನಂತಹ ವಿವಿಧ ನಗರಗಳು ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿವೆ. ಹೀಗಾಗಿ ಈ ಹಬ್ಬದ ಸಮಯದಲ್ಲಿ, ಮಾಲಿನ್ಯದಿಂದ ಉಂಟಾಗುವ ಯಾವುದೇ ರೀತಿಯ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ.
ಮಾಲಿನ್ಯದಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು?:
1. ನೀವು ಮನೆಯಿಂದ ಹೊರಗೆ ಹೋದಾಗ, ಮಾಸ್ಕ್ ಧರಿಸಿ.
2. ಮಾಲಿನ್ಯವು ಚರ್ಮ ಮತ್ತು ಕಣ್ಣುಗಳ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ನೀವು ಮನೆಯಿಂದ ಹೊರಗೆ ಹೋದಾಗ, ಕನ್ನಡಕವನ್ನು ಧರಿಸಿ.
3. ನೀವು ಮುಖಕ್ಕೆ ಮಾಸ್ಕ್ ಧರಿಸಿ ಹೊರಗೆ ಹೋಗುತ್ತಿದ್ದರೆ, ಅದನ್ನು ಮತ್ತೆ ಮತ್ತೆ ಮುಟ್ಟಬೇಡಿ.
4. ಹೊರಗಿನ ಗಾಳಿ ಮಾತ್ರವಲ್ಲದೆ ಒಳಗಿನ ಗಾಳಿಯೂ ಕಲುಷಿತಗೊಳ್ಳುತ್ತದೆ, ಆದ್ದರಿಂದ ನಿಯಮಿತವಾಗಿ ಮನೆಯನ್ನು ಧೂಳುನ್ನು ಸ್ವಚ್ಚ ಮಾಡುತ್ತಿರಿ.
5. ಮನೆಯ ಹೊರಗಿನ ರಸ್ತೆಗೆ ಆಗಾಗ ನೀರನ್ನು ಹಾಕುತ್ತಾ ಧೂಳು ಮನೆಯೊಳಗೆ ಬರದಂತೆ ಒದ್ದೆ ಮಾಡಿ. ಹೀಗೆ ಮಾಡುವುದರಿಂದ ಕಲುಷಿತ ಧೂಳಿನ ಕಣಗಳು ಗಾಳಿಯಲ್ಲಿ ಹಾರುವುದಿಲ್ಲ.
6. ನೀವು ಹೊರಗೆ ಸುತ್ತಾಡಿ ಮನೆಗೆ ಬಂದ ಕೂಡಲೇ ಕೈ, ಕಾಲನ್ನು ಸ್ವಚ್ಚವಾಗಿ ತೊಳೆದುಕೊಳ್ಳಿ. ನೀವು ಎಷ್ಟು ಸ್ವಚ್ಚತೆಗೆ ಆದ್ಯತೆ ಕೊಡುತ್ತೀರಾ ಅಷ್ಟು ಅನಾರೋಗ್ಯದಿಂದ ದೂರ ಇರಬಹುದು.
7. ಸುತ್ತಾಡಿ ವಾಪಸ್ ಬಂದ ಕೂಡಲೇ ಸ್ವಚ್ಚವಾಗಿ ಕೈ, ಕಾಲು ತೊಳೆದು...ಬಾಡಿಲೋಶನ್ ಹಾಕಿ. ಹೀಗೆ ಮಾಡುವುದರಿಂದ ಚರ್ಮಕ್ಕೆ ಯಾವುದೇ ಹಾನಿ ಆಗುವುದಿಲ್ಲ.