5 ವರ್ಷದ ಬಾಲಕಿಗೆ ಮಿದುಳು ಶಸ್ತ್ರಚಿಕಿತ್ಸೆ; ದೆಹಲಿ ಏಮ್ಸ್​ನಿಂದ ಹೊಸ ದಾಖಲೆ

AIIMS
Published on

ನವದೆಹಲಿ: ಐದು ವರ್ಷದ ಬಾಲಕಿಗೆ ಮಿದುಳು ಶಸಚಿಕಿತ್ಸೆ ಮಾಡುವ ಮೂಲಕ ದೆಹಲಿ ಏಮ್ಸ್​ ಹೊಸ ದಾಖಲೆ ನಿರ್ಮಿಸಿದೆ. ಬಾಲಕಿಯ ಮಿದುಳಿನ ಎಡಭಾಗದಲ್ಲಿದ್ದ ಅಡ್ಡೆಯನ್ನು "ಅವೇಕ್​ ಕ್ರಾನಿಯೊಟಮಿ ಶಸ್ತ್ರಚಿಕಿತ್ಸೆ' ಮೂಲಕ ಯಶಸ್ವಿಯಾಗಿ ಹೊರತೆಗೆದಿದೆ. ಇದರಿಂದ ಬಾಲಕಿ ಪ್ರಜ್ಞೆ ಇರುವಾಗಲೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ವಿಶ್ವದ ಮೊದಲ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಶಸ್ತ್ರಚಿಕಿತ್ಸೆಗೆ ಬಾಲಕಿ ಸಾಕಷ್ಟು ಸಹಕರಿಸಿದ್ದು, ಬಳಿಕವೂ ಆಕೆ ಚೆನ್ನಾಗಿಯೇ ಇದ್ದಳು ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಅವೇಕ್​ ಕ್ರಾನಿಯೊಟಮಿ ಎನ್ನುವುದು ವಿಶೇಷವಾದ ನರಶಸಚಿಕಿತ್ಸಾ ವಿಧಾನವಾಗಿದೆ. ಇದು ಕ್ರೇನಿಯೊಟಮಿಯ ಒಂದು ರೂಪವಾಗಿದೆ. ಶಸಚಿಕಿತ್ಸೆಯ ಸಮಯದಲ್ಲಿ ರೋಗಿಯು ಪ್ರೆಯಲ್ಲಿರುವಾಗ ವೈದ್ಯರಿಗೆ ಮೆದುಳಿನ ಗಡ್ಡೆಯನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಶಸಚಿಕಿತ್ಸಕ ಮೆದುಳಿನ ವಿವಿಧ ಭಾಗಗಳ ಕಾರ್ಟಿಕಲ್​ ಮ್ಯಾಪಿಂಗ್​ ಮಾಡುತ್ತಾನೆ, ಇದರಿಂದಾಗಿ ಗೆಡ್ಡೆಯನ್ನು ತೆಗೆದುಹಾಕುವಾಗ ಯಾವುದೇ ಅಸ್ವಸ್ಥತೆ ಉಂಟಾಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net