

ಚಳಿಗಾಲಕ್ಕೆ ಒಡೆದ ಚರ್ಮಕ್ಕೆ ಹಚ್ಚಲು ಬಳಕೆ ಮಾಡಿ ಬಾಡಿ ಲೋಷನ್.
ಮನೆಯಲ್ಲಿಯೇ ನೈಸರ್ಗಿಕವಾಗಿ ಬಾಡಿ ಲೋಷನ್ ತಯಾರಿಸುವುದು ಹೇಗೆ?.
ನೈಸರ್ಗಿಕವಾಗಿ ಚರ್ಮದ ರಕ್ಷಣೆ ಮಾಡಲು ಆದಷ್ಟು ಮನೆಯಲ್ಲಿ ತಯಾರಿಸುವ ಮಾಯಿಶ್ಚರೈಸರ್ ಬಳಕೆ ಮಾಡಿ.
Homemade Body Lotions : ಚಳಿಗಾಲದಲ್ಲಿ ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳುವುದು, ತುರಿಕೆಯುಂಟಾಗುವುದು ಸಾಮಾನ್ಯ. ಹೀಗಾಗಿಯೇ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಕರಿದ ತಿಂಡಿ, ಎಳ್ಳು, ಸೇರಿದಂತೆ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದು ವಾಡಿಕೆಯಲ್ಲಿದೆ. ದೇಹದ ಒಳಗಿನಿಂದ ಚರ್ಮವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರ ಜತೆಗೆ ಬಾಹ್ಯವಾಗಿಯೂ ಕಾಪಾಡಿಕೊಳ್ಳುವುದು ಅಗತ್ಯ. ಇದಕ್ಕಾಗಿ ಹಲವಾರು ರೀತಿಯ ಮಾಯಿಶ್ಚರೈಸರ್ ಮಾರುಕಟ್ಟೆಯಲ್ಲಿ ಸಿಗುತ್ತದೆ.
ಆದರೆ, ಇವು ಹೆಚ್ಚು ರಾಸಾಯನಿಕದಿಂದ ಕೂಡಿದ್ದು, ಚರ್ಮದ ಸೂಕ್ಷ್ಮತೆಯನ್ನು, ನೈಸರ್ಗಿಕ ರಕ್ಷಣೆ, ಚರ್ಮರೋಗಕ್ಕೆ ಕಾರಣವಾಗುತ್ತದೆ. ಹೀಗಾಗಿ ಮನೆಯಲ್ಲಿಯೇ ಸುಲಭವಾಗಿ ಬಾಡಿಲೋಶನ್ ತಯಾರಿ ಮಾಡುವುದು ಹೇಗೆ ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.
ಬಾಡಿಲೋಶನ್ ತಯಾರಿಸಲು ಬೇಕಾದ ಸಾಮಗ್ರಿ
ಕೋಕೋ ಬಟರ್- 2 ಚಮಚ
ವಿಟಮಿನ್ ಇ - 2 ಚಮಚ
Virgin Olive Oil- ಅರ್ಧ ಕಪ್
ರೋಸ್ ವಾಟರ್- 4 ಚಮಚ
ಮೊದಲಿಗೆ ಕೊಕೋ ಬಟರ್ ಅನ್ನು ಮತ್ತು ಆಲಿವ್ ಎಣ್ಣೆಯನ್ನು ಡಬಲ್ ಬಾಯ್ಲರ್ನಲ್ಲಿ ಕರಗಿಸಿ..ಮಿಶ್ರಣ ತಣ್ಣಗಾದ ನಂತರ ವಿಟಮಿನ್ ಇ ಅದಕ್ಕೆ ಸೇರಿಸಿ. ಎಲ್ಲವೂ ತಣ್ಣಗಾದಾಗ ಅದಕ್ಕೆ ರೋಸ್ ವಾಟರ್ ಸೇರಿ ಸ್ಪಲ್ಪ ಮಿಶ್ರಣ ಮಾಡಿ. ಅದು ಕೆನೆಭರಿತ ಹಾಲಿನಂತಾಗುವರೆಗೆ ಮಿಶ್ರಣ ಮಾಡಿ. ರೋಸ್ ವಾಟರ್ನಿಂದ ಮಿಶ್ರಣವಾದ ಮಾಯಿಶ್ಚರೈಸರ್ ಅನ್ನು ನಾವು ಆರೋಗ್ಯಕರವಾಗಿ ತಯಾರಿಸಿಕೊಳ್ಳಬೇಕಾಗುತ್ತದೆ. ಇದು ಯಾವುದೇ ವಾಣಿಜ್ಯ ಟೆಸ್ಟಿಂಗ್ ಪಡೆದುಕೊಳ್ಳದ ಕಾರಣ ಅದರ ಸುರಕ್ಷತೆ ಬಗ್ಗೆ, ಯಾವುದೇ ಕಲುಷಿತವಾಗದ ಬಗ್ಗೆ ಹೆಚ್ಚು ಗಮನಹರಿಸುವುದು ಅಗತ್ಯವಾಗಿರುತ್ತದೆ.
ಇಷ್ಟೇ ಅಲ್ಲ ತೆಂಗಿನ ಎಣ್ಣೆ ಮತ್ತು ಶಿಯಾ ಬಟರ್ನಿಂದಲೂ ನಾವು ಬಾಡಿ ಲೋಷನ್ ತಯಾರಿಸಿಕೊಳ್ಳಬಹುದಾಗಿದೆ. ಆದರೆ, ಅಲರ್ಜಿ ಸಮಸ್ಯೆ ಉಳ್ಳವರು ಈ ಬಗ್ಗೆ ಗಮನ ಹರಿಸಬೇಕು. ಮೊಡವೆ ಹೆಚ್ಚಿಸುವ ಕಾರಣ ವೈದ್ಯರ ಸಲಹೆ ಮೇರೆಗೆ ಇದನ್ನು ಬಳಕೆ ಮಾಡಿ.
ತಯಾರಿಸುವ ವಿಧಾನ
ಶಿಯಾ ಬಟರ್; ಅರ್ಧ ಕಪ್
ತೆಂಗಿನ ಎಣ್ಣೆ; ಕಾಲು ಕಪ್
ಅವಾಕಾಡೋ ಎಣ್ಣೆ; ಕಾಲು ಕಪ್
ಎಸೆನ್ಶಿಯಲ್ ಎಣ್ಣೆ - 8-10 ಹನಿ
ಆರೋರೂಟ್ ಪುಡಿ- 3 ಚಮಚ
ಶಿಯಾ ಬಟರ್ ಮತ್ತು ತೆಂಗಿನ ಎಣ್ಣೆ, ಅವಾಕಾಡೊ ಎಣ್ಣೆಯನ್ನು ಬಾಯ್ಲರ್ನಲ್ಲಿ ಕರಗಿಸಿ ಮಿಶ್ರಣ ಮಾಡಿ. ಅದನ್ನು ತೆಗೆದು ತಣ್ಣಗಾಗಲು ಬಿಡಿ. ನಿಮ್ಮ ಮಾಯಿಶ್ಚರೈಸರ್ಗೆ ಪರ್ಫ್ಯೂಮ್ ಬಳಸಲು ಬಯಸಿದರೆ, ಅದು ನಿಮ್ಮ ಚರ್ಮಕ್ಕೆ ಸರಿಯಾದರೆ ಬಳಕೆ ಮಾಡಿ. ಇಲ್ಲದಿದ್ದರೆ ಮಿಶ್ರಣ ತಣ್ಣಗಾದ ನಂತರ ಆರೋರೂಟ್ ಪುಡಿ ಸೇರಿಸಿ ನಿಮ್ಮ ಮಾಯ್ಶ್ಚರೈಸರ್ ಬಳಕೆಗೆ ಸಿದ್ಧ
ಚರ್ಮವನ್ನು ಹೈಡ್ರೇಟ್ ಆಗಿಡಲು ಆಲೋವೆರಾ ಜೆಲ್ ಬಳಕೆ ಮಾಡಲಾಗುತ್ತದೆ. ಬಾದಾಮಿ ಎಣ್ಣ ಒಣ ಚರ್ಮವನ್ನು ತಡೆಯಲು ಸಹಾಯ ಮಾಡುತ್ತದೆ. ಇವುಗಳನ್ನು ಬಳಕೆ ಮಾಡಿಕೊಂಡು ಬಾಡಿಲೋಷನ್ ತಯಾರಿ ಮಾಡುವುದು ಹೇಗೆ ನೋಡೋಣ ಬನ್ನಿ
ಬೇಕಾಗುವ ಪದಾರ್ಥ
ಅಲೋವೆರಾ ಜೆಲ್: 1 ಕಪ್
ಟೀ ಟ್ರೀ ಎಣ್ಣೆ: 15 ಹನಿ
ವಿಟಮಿನ್ ಇ ಎಣ್ಣೆ; 1 ಚಮಚ
ಬಾದಾಮಿ ಎಣ್ಣೆ; 4-6 ಸ್ಪೂನ್
ಜೇನುಮೇಣ (Beeswax); ಅರ್ಧ ಕಪ್
ಜೇನುಮೇಣ (Beeswax) ಮತ್ತು ಬಾದಾಮಿ ಎಣ್ಣೆಯನ್ನು ಡಬಲ್ ಬಾಯ್ಲರ್ನಲ್ಲಿ ಬಿಸಿ ಮಾಡಿ ಆ ಮಿಶ್ರಣ ತಣ್ಣಗಾಲು ಬಿಡಿ ಆನಂತರ ಅದಕ್ಕೆ ಅಲೋವೆರಾ ಜೆಲ್ ಹಾಗೂ ವಿಟಮಿನ್ ಇ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಟೀ ಟ್ರೀ ಆಯ್ಲ್ ಚರ್ಮಕ್ಕೆ ಕಿರಿಕಿರಿ ಮಾಡಬಹುದು. ಹೀಗಾಗಿ ವೈದ್ಯರ ಸಲಹೆ ಪಡೆದು ಚರ್ಮಕ್ಕೆ ಬಳಕೆ ಮಾಡಿ, (ಏಜೆನ್ಸೀಸ್).