

ಹಲವು ಗಂಟೆಗಳ ಕಾಲ ಕುಳಿತಲ್ಲಿಯೇ ಕುಳಿತು ಕೆಲಸಮಾಡುವ ಸಮಸ್ಯೆ ಕೆಲವರದ್ದು, ಮತ್ತೆ ಕೆಲವರು ಆಲಸ್ಯದಿಂದ ಮಲಗಿದ್ದಲ್ಲೇ ಮಲಗಿ ಕುಳಿತಲ್ಲಿಯೇ ಕುಳಿತಿರುತ್ತಾರೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಮನುಷ್ಯ ನಡೆಯುವುದೇ ಕಡಿಮೆಯಾಗಿದೆ.
ತೂಕವನ್ನು ಕಮ್ಮಿಮಾಡಿಕೊಳ್ಳಲು ವಾಕಿಂಗ್ ಮಾಡುವುದಕ್ಕಿಂತಾ ಬೇರೆ ಯಾವ ವ್ಯಾಯಾಮಗಳಿಲ್ಲ. ವಾಕಿಂಗ್ ಮಾಡುವುದು ಸರಳ, ಸುಲಭ ಮತ್ತು ವಿನೋದವೂ ಆಗಿರುತ್ತದೆ. ಇದು ಹೆಚ್ಚು ಶ್ರಮವಿಲ್ಲದೆ ಯಾವಾಗಲೂ ಕಾರ್ಯನಿರತವಾಗಿರಲು ಮತ್ತು ಸೂಕ್ತವಾದ ಆರೋಗ್ಯದಿಂದರಲು ಬಯಸುವ ಎಲ್ಲಾ ವಯಸ್ಸಿನ ಜನರಿಗೆ ಒಂದು ಅತ್ಯುತ್ತಮ ಮಾರ್ಗ. ಈ ಒಂದು ವ್ಯಾಯಾಮಕ್ಕೆ ನಮಗೆ ಯಾವ ಉಪಕರಣಗಳ ಅಗತ್ಯವೂ ಸಹ ಇರುವುದಿಲ್ಲ ಮತ್ತು ಇದರಲ್ಲಿ ಸ್ವಲ್ಪವೂ ಸಂಶಯವಿಲ್ಲ.
ಹೀಗಾಗಿ ನಡಿಗೆಯಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳು ಏನು ಎನ್ನುವುದರ ಮಾಹಿತಿ ಇಲ್ಲಿದೆ ಪ್ರತಿ ತಿಂಗಳು 2-3 ಕೆಜಿ ತೂಕವನ್ನು ಕಳೆದುಕೊಳ್ಳುವುದು ಕಷ್ಟವೇನಲ್ಲ ಮತ್ತು ತೂಕ ಇಳಿಸಿಕೊಳ್ಳಲು ನೀವು ಕಾರ್ಬೋಹೈಡ್ರೇಟ್‌ಗಳು ಅಥವಾ ಸಕ್ಕರೆಯನ್ನು ಬಿಡಬೇಕು ಎಂದು ಹೇಳುವ ಯಾರಾದರೂ ಕೇಳುವುದನ್ನು ನಿಲ್ಲಿಸಿ. ನೀವು ಎಲ್ಲವನ್ನೂ ತಿನ್ನಬಹುದು ಮತ್ತು ಪ್ರತಿದಿನ 200-300 ಕ್ಯಾಲೊರಿಗಳನ್ನ ಕಡಿಮೆ ಮಾಡಿಕೊಳ್ಳಬಹುದು. ಇನ್ನು ವಾಕಿಂಗ್ನಿಂದಾಗುವ ಲಾಭ ಏನು?
ಹೃದಯದ ಆರೋಗ್ಯ ಹೆಚ್ಚಳ :ನಾವು ಸೇವಿಸುವ ಆಹಾರಗಳು ನಮ್ಮ ದಿನನಿತ್ಯದ ಬದುಕು ನಮ್ಮ ಹೃದಯದ ಮೇಲೆ ಪರಿಣಾಮ ಬೀರುತ್ತವೆ.. ಹೀಗಾಗಿ ಪ್ರತಿನಿತ್ಯ ನಮ್ಮ ಹೃದಯವನ್ನು ನಾವು ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಅಂದರೆ ಸತತವಾಗಿ ಮೂವತ್ತು ನಿಮಿಷಗಳಕಾಲ ನಡಿಗೆ ಮಾಡುವುದು ಆರೋಗ್ಯಕರವಾದದ್ದು.ಅಲ್ಲದೆ ಹೃದಯಾಘಾತ ಮತ್ತು ಬೈಪಾಸ್ ಚಿಕಿತ್ಸೆಯಾಗಿರುವವರು ಬಹಳ ಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.
ಅಧಿಕ ಬಿಪಿ ತಡೆಗಟ್ಟುವುದು : ಇತ್ತೀಚಿನ ದಿನಗಳಲ್ಲಿ ಜನರನ್ನ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಗ ಅಂದ್ರೆ ಅದು ಬಿಪಿ.. ನಾವು ನಡೆಯೋದೇ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಅದು ಅಧಿಕ ಬಿಪಿ ಹಾಗೂ ಹೃದಯಾಘಾತದ ಸಮಸ್ಯೆಗೆ ಕಾರಣವಾಗಬಹುದು..ಆದರೆ ಪ್ರತಿನಿತ್ಯ ಮೂವತ್ತು ನಿಮಿಷಗಳಕಾಲ ನಡೆಯುವುದರಿಂದ ನಮ್ಮ ದೇಹವನ್ನು ನಾವು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು.
ಕ್ಯಾನ್ಸರ್ ನಿವಾರಣೆ :ನಮ್ಮ ಜೀವನ ಶೈಲಿ ಕೂಡ ಕ್ಯಾನ್ಸರ್ ಗೆ ಕಾರಣ ಎಂದು ಹೇಳಲಾಗುತ್ತದೆ. ವಿಜ್ಞಾನಿಗಳು ಸಹ ವಾಕಿಂಗ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಖಚಿತಪಡಿಸಿದ್ದಾರೆ. ಕೀಮೊಥೆರಪಿಯ ಅಡ್ಡ ಪರಿಣಾಮ ಗಳನ್ನು ಕಡಿಮೆ ಮಾಡುತ್ತದೆ. ಸ್ತನ ಕ್ಯಾನ್ಸರ್‌ನಿಂದ ಆಗುವ ಅಪಾಯ ಕಡಿಮೆ ಮಾಡುತ್ತದೆ.
ಒತ್ತಡ ನಿವಾರಣೆ :ಇತ್ತೀಚಿನ ದಿನಗಳಲ್ಲಿ ಒತ್ತಡ ಕೂಡ ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡವು ಬೊಜ್ಜು, ಮೆದುಳು ಸಂಬಂಧಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದರೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ದೇಹದಲ್ಲಿನ ಒತ್ತಡ ಕಡಿಮೆಯಾಗುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ : ಸೋಂಕುಗಳು ಅಥವಾ ಯಾವುದೇ ರೋಗಗಳನ್ನು ತಡೆಗಟ್ಟಲು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಎಲ್ಲಾ ಸಮಯದಲ್ಲೂ ಸರಿಯಾಗಿ ಕಾರ್ಯನಿರ್ವಹಿಸಬೇಕು. ರೋಗನಿರೋಧಕ ಶಕ್ತಿ ಹೆಚ್ಚಬೇಕೆಂದರೆ ವಾಕಿಂಗ್ ಮಾಡಲೇಬೇಕು. ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದರಿಂದ ರೋಗನಿರೋಧಕ ಹೆಚ್ಚುತ್ತದೆ. ಬಿ-ಕೋಶಗಳು, ಟಿ-ಕೋಶಗಳು, ಡಬ್ಲ್ಯೂಬಿಸಿಗಳು ವೇಗವಾಗಿ ಬಿಡುಗಡೆಯಾಗುತ್ತವೆ.