ಮುಖದಲ್ಲಿ ಕಪ್ಪು ಕಲೆ ಹೋಗ್ತಿಲ್ವಾ? ಚಿಂತೆ ಬಿಡಿ! ಈ 2 ತರಕಾರಿಯಲ್ಲಿದೆ ಚಮತ್ಕಾರ, ಟ್ರೈ ಮಾಡಿ.. | Dark Spots

ವಿಜಯವಾಣಿ - 2025-01-30T080754.009
Published on

Dark Spots: ಹೆಚ್ಚಿನ ಜನರು ತಮ್ಮ ದೇಹದ ಆರೋಗ್ಯಕ್ಕಿಂತ ಮುಖದ ಆರೋಗ್ಯ, ಸೌಂದರ್ಯದ ಬಗ್ಗೆ ಅತೀಯಾದ ಕಾಳಜಿ ವಹಿಸುತ್ತಾರೆ. ತಮ್ಮ ಮುಖದ ಮೇಲೆ ಒಂದು ಸಣ್ಣ ಗುಳ್ಳೆ ಅಥವಾ ಕಲೆ ಕಂಡುಬಂದರೂ ಚಿಂತಾಕ್ರಾಂತರಾಗುತ್ತಾರೆ. ಅದರ ಬಗ್ಗೆಯೇ ಇಡೀ ದಿನವೆಲ್ಲಾ ಯೋಚನೆ ಮಾಡುತ್ತ, ಯಾವ ಕ್ರೀಮ್​ ಬಳಸಿದರೆ ಹೋಗುತ್ತದೆ, ಮಾರುಕಟ್ಟೆಯಲ್ಲಿ ಇದಕ್ಕೆ ಇರುವ ಹೊಸ ಪ್ರಾಡೆಕ್ಟ್​ ಲಭ್ಯವಿದೆ ಎಂದೆಲ್ಲಾ ತಲೆಕಡಿಸಿಕೊಳ್ಳುತ್ತಾರೆ.

ಇದರಿಂದ ಮುಕ್ತಿ

ಹೆಚ್ಚಾಗಿ ಅನೇಕರು ಮಾರುಕಟ್ಟೆಗಳಲ್ಲಿ ಸಿಗುವ ಸೌಂದರ್ಯ ವರ್ಧಕ ಪ್ರಾಡೆಕ್ಟ್​​ಗಳನ್ನು ಬಳಸುವ ಮೂಲಕ ತಮ್ಮ ಮುಖದ ಕಾಂತಿ, ತ್ವಚೆಯ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಅದರಲ್ಲೂ ಅತೀ ಮುಖ್ಯವಾಗಿ ಮುಖದಲ್ಲಿನ ಕಪ್ಪು ಕಲೆಯ ಸಮಸ್ಯೆಯಿಂದ ಬಳಲುವವರು ಇದನ್ನು ಹೋಗಲಾಡಿಸುವುದು ಹೇಗೆ? ಇದರಿಂದ ಮುಕ್ತಿ ಪಡೆಯುವುದು ಹೇಗೆಂದು ಚಿಂತೆ ಮಾಡುತ್ತಾರೆ.

ಆಲೂಗಡ್ಡೆ-ಸೌತೆಕಾಯಿ

ಮುಖದಲ್ಲಿನ ಕಪ್ಪು ಕಲೆಗೆ ಮನೆಯಲ್ಲಿ ಬಳಸುವ ಸೌತೆಕಾಯಿ ಮತ್ತು ಆಲೂಗಡ್ಡೆಯೇ ಚಮತ್ಕಾರಿ ಔಷಧ. ಈ ಎರಡು ತರಕಾರಿ ಸಾಕು, ಕಪ್ಪು ಕಲೆಗಳನ್ನು ಹೋಗಲಾಡಿಸಲು. ನಿಮ್ಮ ಮನೆಯಲ್ಲಿಯೇ ಈ ಸರಳ, ಸುಲಭ ವಿಧಾನವನ್ನು ಅನುಸರಿಸುವ ಮೂಲಕ ಡಾರ್ಕ್​ ಸ್ಪಾರ್ಟ್​ಗೆ ಗುಡ್​ಬೈ ಹೇಳಬಹುದು.

ವಿಧಾನ

ಟೇಬಲ್​ಸ್ಪೂನ್​ ಸೌತೆಕಾಯಿ ರಸ ಮತ್ತು 1 ಟೇಬಲ್​ಸ್ಪೂನ್ ಆಲೂಗಡ್ಡೆಯನ್ನು ಸರಿಯಾಗಿ ಮಿಶ್ರಿಸಿ, ಈ ಪ್ಯಾಕ್​ ಅನ್ನು ಕಪ್ಪು ಕಲೆಯ ಮೇಲೆ ಹಚ್ಚಿ. ಹೀಗೆ ನಿರಂತರವಾಗಿ ಮಾಡಿ. ಇದು ನಿಮ್ಮ ಮುಖವನ್ನು ತೇವಗೊಳಿಸುವುದರ ಜತೆಗೆ ಡಾರ್ಕ್​ ಸ್ಪಾಟ್​ಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net