ಈ ಹತ್ತು ನಗರಗಳಿಗೆ ಅಪ್ಪಿತಪ್ಪಿಯೂ ಪ್ರವಾಸಕ್ಕೆ ತೆರಳದಿರಿ, ಹೆಣ ಉರುಳಿತು ಎಚ್ಚರ! | Dangerous Cities

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ದಿನನಿತ್ಯ ಕೆಲಸದ ಜಂಜಾಟದಿಂದ ನೆಮ್ಮದಿಯನ್ನು ಪಡೆಯ ಬಯಸುವ ಜನರು ಪ್ರವಾಸವನ್ನು ಕೈಗೊಳ್ಳುತ್ತಾರೆ.
  • ವಿದೇಶೀಯರ ಜನಜೀವನ, ಆಹಾರ ಪದ್ಧತಿ, ಉಡುಗೆ ತೊಡುಗೆ ಮತ್ತು ಪ್ರವಾಸಿ ತಾಣಗಳನ್ನು ನೋಡಿಕೊಂಡು ಬರುವುದು ಸಾಮಾನ್ಯವಾಗಿದೆ.
  • ಪ್ರವಾಸಕ್ಕೆ ತೆರಳುತ್ತಿರುವ ದೇಶ/ ನಗರ ಸುರಕ್ಷಿತವೇ ಎಂದು ತಿಳಿದಿರಬೇಕು
Dangerous Cities : ಇತ್ತಿಚೀನ ದಿನಗಳಲ್ಲಿ ಜನರು ಪ್ರವಾಸಕ್ಕೆಂದು ತೆರಳುವುದು ಹೆಚ್ಚಾಗಿದ್ದು, ದಿನನಿತ್ಯ ಕೆಲಸದ ಜಂಜಾಟದಿಂದ ನೆಮ್ಮದಿಯನ್ನು ಪಡೆಯ ಬಯಸುವ ಜನರು ಪ್ರವಾಸವನ್ನು ಕೈಗೊಳ್ಳುತ್ತಾರೆ. ಇನ್ನೂ ಕೆಲವರು ಪ್ರವಾಸಕ್ಕೆ ತೆರಳುವುದನ್ನೇ ತಮ್ಮ ವೃತ್ತಿಯನ್ನಾಗಿ ಬದಲಾಯಿಸಿಕೊಂಡ ಉದಾಹರಣೆಗಳು ಸಹ ನಮ್ಮ ಎದುರಿಗಿದೆ. ಪ್ರಸ್ತುತ ದಿನಮಾನದಲ್ಲಿ ವಿದೇಶ ಪ್ರವಾಸ ಎನ್ನುವುದು ಜನಪ್ರೀಯವಾಗುತ್ತಿದ್ದು, ಜನರು ವಿದೇಶಗಳಿಗೆ ತೆರಳಿ ಅಲ್ಲಿಯ ಜನಜೀವನ, ಆಹಾರ ಪದ್ಧತಿ, ಉಡುಗೆ ತೊಡುಗೆ ಮತ್ತು ಪ್ರವಾಸಿ ತಾಣಗಳನ್ನು ನೋಡಿಕೊಂಡು ಬರುವುದು ಸಾಮಾನ್ಯವಾಗಿದೆ.
ಆದರೆ ನಾವು ಹೋಗುತ್ತಿರುವ ದೇಶ ಅಥವಾ ನಗರ ಎಷ್ಟು ಸುರಕ್ಷಿತ? ಅಲ್ಲಿಯ ಕಾನೂನು ಹೇಗಿದೆ? ಭಯೋತ್ಪಾದಕರ ಸಮಸ್ಯೆ ಇದೆಯೇ?ಅಲ್ಲಿಯ ಜನರು ಒರಟು ಸ್ವಭಾವದವರರೇ? ಎನ್ನುವ ಅಂಶಗಳು ನಮಗೆ ಪ್ರವಾಸ ಕೈಗೊಳ್ಳುವ ಮೊದಲೇ ತಿಳಿದಿದ್ದರೆ ಆ ದೇಶಕ್ಕೆ ಹೋಗಿ ಕಷ್ಟಕ್ಕೆ ಸಿಲುಕಿಕೊಳ್ಳುವ ಸನ್ನಿವೇಶ ಎದುರಾಗುವುದಿಲ್ಲ.  ಈ ಮೇಲಿನ ಅಂಶಗಳ ಆಧಾರದ ಮೇಲೆ ಸೂಚಿಸಲಾಗಿರುವ ನಗರಗಳ ಪ್ರವಾಸವನ್ನು ಕೈಗೊಂಡರೇ ಸಮಸ್ಯೆ ಕಟ್ಟಿಟ್ಟ ಬುತ್ತಿಯಾಗಿದ್ದೂ ಜೀವ ಹೋಗುವ ಸನ್ನಿವೇಶವನ್ನು ಎದುರಿಸಬೇಕಾಗಬಹುದು. 

1. ಅಲೆಪ್ಪೊ , ಸಿರಿಯಾ

ಅಲೆಪ್ಪೊ ಒಂದು ಕಾಲದಲ್ಲಿ ಸಿರಿಯಾದ ಅತಿದೊಡ್ಡ ನಗರ. ಅಂತೆಯೇ ಪ್ರಾಚೀನ ಇತಿಹಾಸ, ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ಶಿಕ್ಷಣದ ಕೇಂದ್ರವಾಗಿತ್ತು. ಆದರೆ 2011 ರಲ್ಲಿ ಪ್ರಾರಂಭವಾದ ಸಿರಿಯನ್ ಅಂತರ್ಯುದ್ಧದಲ್ಲಿ ಈ ನಗರವು ಮುಂಚೂಣಿಯಲ್ಲಿದ್ದು, ಇಂದಿಗೂ ಸಹ ಇಲ್ಲಿ ಯುದ್ಧ ಮುಗಿಯದ ಕಾರಣ ಈ ನಗರವು ಭಯೋತ್ಪಾದಕರ ಕೇಂದ್ರ ಸ್ಥಳವಾಗಿ ಗುರುತಿಸಿಕೊಂಡಿದೆ. ಆದ್ದರಿಂದ ಈ ನಗರವು ಪ್ರವಾಸಕ್ಕೆ ಸುರಕ್ಷಿತವಲ್ಲ. 

2. ಕಾಬೂಲ್, ಅಫಘಾನಿಸ್ತಾನ

ಕಾಬೂಲ್ ಅಫ್ಘಾನಿಸ್ತಾನದ ರಾಜಧಾನಿ. ಒಂದು ಕಾಲದಲ್ಲಿ, ಇಲ್ಲಿಯ ಮಾರುಕಟ್ಟೆಗಳು, ಅರಮನೆಗಳು ಮತ್ತು ಉದ್ಯಾನಗಳು ಜಗತ್​ ಪ್ರಸಿದ್ಧವಾಗಿದ್ದವು. ಆದರೆ ತಾಲಿಬಾನ್​ ಹಿಡಿತದ ನಂತರ ಈ ನಗರವು  ಅತ್ಯಂತ ಅಪಾಯಕಾರಿಯಾಗಿದ್ದು, ಇಲ್ಲಿ  ಬಾಂಬ್ ದಾಳಿ, ಗುಂಡಿನ ದಾಳಿ ಮತ್ತು ಅಪಹರಣಗಳು ಸರ್ವೇ ಸಾಮಾನ್ಯವಾಗಿದೆ.

 3. ಜುಬಾ, ದಕ್ಷಿಣ ಸುಡಾನ್

ಪ್ರಪಂಚದ ಅದ್ಭುತ ಪ್ರಾಣಿಗಳನ್ನು ಹೊಂದಿರುವ ಜುಬಾ  ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ನಗರಗಳಲ್ಲೊಂದ.ಆಫ್ರಿಕಾದ ದಕ್ಷಿಣ ಸುಡಾನ್​ನಲ್ಲಿ 2013 ರಿಂದ ಯುದ್ಧದ ಸ್ಥಿತಿಯಯಿದ್ದು, ಜುಬಾ ನಗರದಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷ ಮತ್ತು ಹಿಂಸಾಚಾರದಿಂದಾಗಿ, ಅಲ್ಲಿಗೆ ಪ್ರಯಾಣಿಸುವುದು ಸುರಕ್ಷಿತವಲ್ಲ. 

4. ಸನಾ, ಯೆಮನ್

ಯೆಮನ್ ದೇಶದ ಸನಾ ನಗರ ಸಹ ಆಂತರಿಕ ಬಿಕ್ಕಟ್ಟಿಗೆ ತುತ್ತಾಗಿರುವ ನಗರ. ಈ ನಗರವು ಪುರಾತನ ಸ್ಮಾರಕಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಾದರೂ ಅಲ್ಲಿಗೆ ತೆರಳಿದ ಅನೇಕ ಪ್ರವಾಸಿಗರೊಂದಿಗೆ ಅಪಹರಣ, ಕಳ್ಳತನ ಮತ್ತು ಕೊಲೆ ಮೊದಲಾದ ಘಟನೆಗಳು ಸಂಭವಿಸಿದೆ ಎಂದು ವರದಿಯಾಗಿದೆ.

5. ಖಾರ್ತೂಮ್, ಸುಡಾನ್

ಸುಡಾನ್‌ನ ರಾಜಧಾನಿ ಖಾರ್ತೂಮ್​ನಲ್ಲಿ ಬಿಳಿ ಮತ್ತು ನೀಲಿ ನೈಲ್ ನದಿಗಳು ಸಂಗಮವಾಗುತ್ತವೆ. ಸುಡಾನ್‌ನ ಕೆಲವು ಪ್ರದೇಶಗಳು ಸಂಘರ್ಷದಿಂದಾಗಿ ತುರ್ತು ಪರಿಸ್ಥಿತಿಯಲ್ಲಿವೆ. ಈ ನಗರದ ಒಳಗೆ ಮತ್ತು ಹೊರಗೆ ಕರ್ಫ್ಯೂ ಮತ್ತು ಚಲನೆಯ ಮೇಲೆ ನಿರ್ಬಂಧಗಳನ್ನು ವಿಧಿಸಿರುವ ಕಾರಣ ಈ ನಗರ ಪ್ರವಾಸಕ್ಕೆ ಯೋಗ್ಯವಲ್ಲ.

6. ಇಸ್ಲಾಮಾಬಾದ್, ಪಾಕಿಸ್ತಾನ್

ಇಸ್ಲಾಮಾಬಾದ್ ನಗರವು  ಪಾಕಿಸ್ತಾನದ ರಾಜಧಾನಿಯಾಗಿದೆ. ಈ ನಗರದ ವ್ಯಾಪಾರಿ ಅಂಗಡಿಗಳು ಮತ್ತು ಆಹಾರ ಖಾದ್ಯಗಳು ಪ್ರಖ್ಯಾತವಾಗಿವೆ. ಆದರೆ ಈ ನಗರದ ಸುತ್ತಮುತ್ತ ಭಯೋತ್ಪಾದಕ ನೆಲೆಗಳಿದ್ದು, ಭಯೋತ್ಪಾದಕ ದಾಳಿ ಮತ್ತು ಕಳ್ಳತನ ಈ ನಗರದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ.

7. ಪ್ಯಾಂಗ್ಯಾಂಗ್​, ಉತ್ತರ ಕೊರಿಯಾ

ಉತ್ತರ ಕೊರಿಯಾದ ರಾಜಧಾನಿ ಪ್ಯಾಂಗ್ಯಾಂಗ್​ಗೆ ಪ್ರಯಾಣಿಸುವುದು ಸೂಕ್ತವಲ್ಲ. ಕಾರಣ ಈ ದೇಶದಲ್ಲಿ ಈಗಲೂ ಸರ್ವಾಧಿಕಾರಿ ಆಡಳಿತವಿದ್ದು  ಅಲ್ಲಿಯ ಪ್ರಜೆಗಳಿಗೆ ನೆಮ್ಮದಿ ಇಲ್ಲದ ಸ್ಥಿತಿ ಇರುವಾಗ ಪ್ರವಾಸಿಗರ ಪರಿಸ್ಥಿತಿ ಇನ್ನೂ ಗಂಭೀರವಾಗಿರುತ್ತದೆ. ಅತಿ ಸಣ್ಣ ತಪ್ಪಿಗೂ ಅತಿರೇಕದ ಶಿಕ್ಷೆಗಳನ್ನು ಇಲ್ಲಿ ವಿಧಿಸಲಾಗುತ್ತದೆ.

 8. ಬೊಗೋಟಾ, ಕೊಲಂಬಿಯಾದ 

ಬೊಗೋಟಾ ಕೊಲಂಬಿಯಾದ ದೇಶದ ರಾಜಧಾನಿ. ಈ ನಗರವು ಕೆಲವು ಉತ್ತಮ ವಾಸ್ತುಶಿಲ್ಪ, ಕಲೆಗಳು ಮತ್ತು ಉತ್ತಮ ಕಾಫಿಯನ್ನು ಹೊಂದಿದೆ. ಆದರೆ ಇದು ಬೀದಿ ಅಪರಾಧಗಳಿಗೆ ಹೆಸರುವಾಸಿಯಾಗಿದೆ. ಈ ನಗರದ ಹೊರಗೆ, ಕೊಲಂಬಿಯಾದ ಅನೇಕ ಪ್ರದೇಶಗಳು ಪ್ರಸ್ತುತ ಪ್ರವಾಸಿಗರಿಗೆ ಅಸುರಕ್ಷಿತವಾಗಿವೆ.

9. ರಿಯಾದ್, ಸೌದಿ ಅರೇಬಿಯಾ

ರಿಯಾದ್ ಇದು ಸವದಿ ಅರೇಬಿಯಾ ದೇಶದ ರಾಜಧಾನಿ. ಈ ನಗರದಲ್ಲಿ ಆಗ್ಗಾಗೆ ಆಂತರಿಕ ದಂಗೆ ಮತ್ತು ಭಯೋತ್ಪಾದಕ ಕೃತ್ಯಗಳು ನಡೆಯುತ್ತಿರುವುದರಿಂದ ಈ ನಗರದ ಪ್ರವಾಸ ಅಸುರಕ್ಷಿತ.

10. ಕಿಂಗ್​ಸ್ಟನ್​, ಜಮೈಕಾ

ಜಮೈಕಾದ ರಾಜಧಾನಿ ಮತ್ತು ಅತಿದೊಡ್ಡ ನಗರವಾದ ಕಿಂಗ್‌ಸ್ಟನ್ ತನ್ನ ಹಿಂಸಾತ್ಮಕ ಅಪರಾಧಗಳಿಗೆ ಕುಖ್ಯಾತವಾಗಿದೆ. ಕಿಂಗ್‌ಸ್ಟನ್‌ನ  ಗ್ಯಾಂಗ್​ವಾರ್​ಗಳು ಅನೇಕ ಪ್ರವಾಸಿಗರ ಪ್ರಾಣವನ್ನು ತೆಗೆದಿದೆ. ಈ ನಗರದಲ್ಲಿ ಕಳ್ಳತನ ಸಹ ಅಧಿಕವಾಗಿರುವುದರಿಂದ ಈ ನಗರದ ಪ್ರವಾಸವನ್ನು ಮಾಡದಿರುವುದೇ ಉತ್ತಮ.
ಗಮನಿಸಿ : ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net