ತೂಕ ಹಾಗೂ ಮನಸ್ಥಿತಿ ಸುಧಾರಿಸಲು ಈ ಸರಳ ನಡಿಗೆಗಳನ್ನು ಆಯ್ಕೆ ಮಾಡಿ! Walks

Walks
Walks
Published on

ಪ್ರಮುಖ ಮುಖ್ಯಾಂಶಗಳು

  • ನಡಿಗೆ ಎಂಬುದು ಕಡಿಮೆ ಅಂದಾಜು ಮಾಡಲಾದ ವ್ಯಾಯಾಮ ಮಾತ್ರವಲ್ಲ.
  • ಜನರ ಮನಸ್ಥಿತಿಯನ್ನು ಹೆಚ್ಚಿಸುವುದರೊಂದಿಗೆ ಮನಸ್ಸನ್ನು ಶಾಂತಿಗೊಳಿಸುತ್ತದೆ.
  • ಟೋ ವಾಕ್​ ಇದು ಭಂಗಿಯನ್ನು ಸುಧಾರಿಸಿ, ಬಿಗಿತವನ್ನು ಸರಾಗಗೊಳಿಸುತ್ತದೆ.
  • ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Walks : ನಡಿಗೆ ಎಂಬುದು ಕಡಿಮೆ ಅಂದಾಜು ಮಾಡಲಾದ ವ್ಯಾಯಾಮ ಮಾತ್ರವಲ್ಲ. ಬದಲಿಗೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಇದು ಜನರ ಮನಸ್ಥಿತಿಯನ್ನು ಹೆಚ್ಚಿಸುವುದರೊಂದಿಗೆ ಮನಸ್ಸನ್ನು ಶಾಂತಿಗೊಳಿಸುತ್ತದೆ, ಇದು ಹೃದಯದ ಆರೋಗ್ಯವನ್ನು ಬಲಪಡಿಸಿ ತೂಕವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಈ ಕಾರಣದಿಂದಾಗಿ ನೀವು ದೈನಂದಿನ ವ್ಯಾಯಾಮ ದಿನಚರಿಯಲ್ಲಿ ನಡಿಗೆಯನ್ನು ಸೇರಿಸಿಕೊಳ್ಳಲು ಬಯಸಿದರೆ, ಪೌಷ್ಟಿಕತಜ್ಞ ರೇಣು ರಾಖೇಜಾ ಅವರ ಉಪಯುಕ್ತ ಸಲಹೆಗಳನ್ನು ಅಳವಡಿಸಿಕೊಳ್ಳಿ. ಇವರು ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಮನೆಯಲ್ಲಿಯೇ ಮಾಡಬಹುದಾದ 5 ರೀತಿಯ ಸುಲಭ ನಡಿಗೆಯನ್ನು ಹೇಳಿಕೊಟ್ಟಿದ್ದಾರೆ.

ಟೋ ವಾಕ್ (ತಡಾಸನ)

ಟೋ ವಾಕ್​ ಇದು ಭಂಗಿಯನ್ನು ಸುಧಾರಿಸುತ್ತದೆ. ಬಿಗಿತವನ್ನು ಸರಾಗಗೊಳಿಸಿ, ಹೃದಯದ ಆರೋಗ್ಯವನ್ನು ಬಲಪಡಿಸುತ್ತದೆ. ಈ ರೀತಿಯಾಗಿ ನಡೆಯುವುದರಿಂದ ಇದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೇ, ಇದು ಆರೋಗ್ಯವನ್ನು ಸುಧಾರಿಸುತ್ತದೆ.

ಹೀಲ್ ವಾಕ್

ಹೀಲ್ ವಾಕ್ ಮಾಡುವುದರಿಂದ ಕಣಕಾಲುಗಳು ಬಲಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಇದು ದೇಹಕ್ಕೆ ಉತ್ತಮ ರಕ್ತದ ಹರಿವನ್ನು ಖಚಿತಪಡಿಸುತ್ತವೆ ಮತ್ತು ಪಾದಗಳ ಊತವನ್ನು ಕಡಿಮೆ ಮಾಡುತ್ತವೆ. ಆದರಿಂದ ಪ್ರತಿನಿತ್ಯ ಈ ಚಟುವಟಿಕೆಯನ್ನು ಮಾಡುವಾಗ ಗಮನ ಇಟ್ಟುಕೊಂಡು ಮಾಡಿರಿ. ಇದು ಅನೇಕ ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಸೊಂಟ ತಿರುಗುವಿಕೆಯ ನಡಿಗೆ

ಬಿಗಿಯಾದ ಸೊಂಟವನ್ನು ಸಡಿಲಗೊಳಿಸಲು ಸೊಂಟ ತಿರುಗುವಿಕೆಯ ನಡಿಗೆಯನ್ನು ನಡೆಯಿರಿ. ಇದು ಬೆನ್ನಿನ ಬಿಗಿತವನನ್ಉ ಸುಧಾರಿಸಿ, ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಸೊಂಟದಲ್ಲಾಗುವ ನೋವನ್ನು ಶಮನ ಮಾಡಲು ಸಹಾಯ ಮಾಡುತ್ತದೆ. ಆದರಿಂದ ಈ ವ್ಯಾಯಾಮವನ್ನು ಪ್ರತಿನಿತ್ಯ ಮಾಡುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ಉತ್ತಮವಾಗುತ್ತದೆ.

ಅಕ್ಕಪಕ್ಕದ ನಡಿಗೆ

.
ತೊಡೆಗಳ ಸ್ನಾಯುಗಳನ್ನು ಬಲಪಡಿಸಲು ಮತ್ತು ಸೊಂಟದ ಸ್ನಾಯುಗಳನ್ನು ನಿರ್ಮಿಸಲು ಈ ನಡಿಗೆಯು ಉತ್ತಮವಾಗಿದೆ. ಈ ನಡಿಗೆಯನ್ನು ಪ್ರತಿನಿತ್ಯ ಮಾಡುವುದರಿಂದ ಹಿಪ್ಸ್, ಗ್ಲೂಟ್ಸ್ ಮತ್ತು ಥೈಸ್ ಮಸಲ್‌ಗಳನ್ನು ಬಲಪಡಿಸುತ್ತದೆ, ಸಮತೋಲನವನ್ನು ಸುಧಾರಿಸುತ್ತದೆ. ಹಾಗಾಗಿ ಇದನ್ನು ಪ್ರತಿನಿತ್ಯು 2 ನಿಮಿಷಗಳ ಕಾಲ ಮಾಡಿ ಎಂದು ತಜ್ಞರು ತಿಳಿಸಿದ್ದಾರೆ.

ಹಿಮ್ಮುಖ ನಡಿಗೆ

ಪ್ರತಿನಿತ್ಯ ಹಿಮ್ಮುಖ ನಡಿಗೆಯನ್ನು 5 ನಿಮಿಷ ಮಾಡುವುದರಿಂದ ಇದು ಮೊಣಕಾಲು ನೋವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇದು ಸ್ಥಿರತೆಯನ್ನು ಹೆಚ್ಚು ಮಾಡಿ, ಕೀಲು ನೋವನ್ನು ಕಡಿಮೆ ಮಾಡುತ್ತದೆ. ಇದು ತುಂಬಾ ಸುಭವಾಗಿದ್ದು, ಇದರಿಂದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹದು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net