ಹೆರಿಗೆ ನಂತರದ ಹೊಟ್ಟೆ ನೋವನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಬೇಡಿ! ಇದು ಈ ತೊಂದರೆಗೆ ಕಾರಣವಾಗಬಹುದು! Gallstones
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹೆರಿಗೆಯ ಮೊದಲು ಮತ್ತು ನಂತರ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ
ಅನೇಕ ಮಹಿಳೆಯರಿಗೆ ಪಿತ್ತಕೋಶದಲ್ಲಿ ಕಲ್ಲುಗಳು ವೇಗವಾಗಿ ಹೆಚ್ಚುತ್ತವೆ
ಹೆರಿಗೆ ನಂತರ ಆಹಾರಕ್ರಮಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ.
ತುಪ್ಪ, ಬೆಣ್ಣೆ ಮತ್ತು ಎಣ್ಣೆಯಂತಹ ಕೊಬ್ಬಿನ ಆಹಾರಗಳನ್ನು ಆದಷ್ಟು ಸೇವಿಸಬೇಕು
Gallstones : ಹೆರಿಗೆಯ ಮೊದಲು ಮತ್ತು ನಂತರ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಇದು ಹಾರ್ಮೋನುಗಳ ವ್ಯತ್ಯಾಸ, ಜೀರ್ಣಕ್ರಿಯೆಯಲ್ಲಿ ಬದಲಾವಣೆಗಳು ಹೆರಿಗೆ ನಂತರದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಯದಲ್ಲಿ ಅನೇಕ ಮಹಿಳೆಯರಿಗೆ ಪಿತ್ತಕೋಶದಲ್ಲಿ ಕಲ್ಲುಗಳು ವೇಗವಾಗಿ ಹೆಚ್ಚುತ್ತವೆ ಎಂದು ತಜ್ಞರು ಸೂಚಿಸುತ್ತಾರೆ.
ಪೌಷ್ಟಿಕ ತಜ್ಞರಾದ ಅನಿತಾ ಗಾದ್ರೆ ಅವರು ಸೂಚಿಸಿದಂತೆ ಕಳೆದ ತಿಂಗಳು, ಹೆರಿಗೆಯ ನಂತರ 6 ಮಹಿಳೆಯರಲ್ಲಿ ಪಿತ್ತಕೋಶದ ಕಲ್ಲುಗಳು ಕಾಣಿಸಿಕೊಂಡಿದ್ದವು. ಈ ಸಮಸ್ಯೆಯು ಹೆರಿಗೆ ನಂತರ ಆಗುವಂತಹ ಹಾರ್ಮೋನುಗಳ ಬದಲಾವಣೆಗಳು ಪಿತ್ತಕೋಶದ ಖಾಲಿಯಾಗುವಿಕೆಯನ್ನು ನಿಧಾನಗೊಳಿಸುತ್ತದೆ. ಈ ಸಂದರ್ಭದಲ್ಲಿ ಆ ಜಾಗದಲ್ಲಿ ಕಲ್ಲು ಉತ್ಪತ್ತಿಯಾಗುವಂತೆ ಮಾಡುತ್ತದೆ.
ಮಹಿಳೆಯರು ಹೆರಿಗೆ ನಂತರ ಆಹಾರಕ್ರಮಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮವಾಗಿದೆ ಹಾಗಾಗಿ ತುಪ್ಪ, ಬೆಣ್ಣೆ ಮತ್ತು ಎಣ್ಣೆಯಂತಹ ಕೊಬ್ಬಿನ ಆಹಾರಗಳನ್ನು ಆದಷ್ಟು ಸೇವಿಸಬೇಕು. ಹೆರಿಗೆ ನಂತರ ಮಹಿಳೆಯರು ಆದಷ್ಟು ತೂಕವನ್ನು ಇಳಿಸಿಕೊಳ್ಳಲು ಗಮನಹರಿಸುತ್ತಾರೆ. ಹಾಗಾಗಿ ಸಕ್ಕರೆ ಸೇವನೆ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡುತ್ತಾರೆ. ಇದು ಪಿತ್ತಗಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಹೆರಿಗೆ ನಂತರ ಪಿತ್ತಕೋಶದಲ್ಲಾಗುವ ಕಲ್ಲುಗಳನ್ನು ತಡೆಯುವುದು ಹೇಗೆ?
* ಹೆರಿಗೆಯ ನಂತರ ಹೆಚ್ಚು ತುಪ್ಪ, ಬೆಣ್ಣೆ ಅಥವಾ ಎಣ್ಣೆ ಹಾಗೂ ಅದರಲ್ಲಿ ಮಾಡಿದಂತಗಹ ಆಹಾರಗಳನ್ನು ಬಳಸಬೇಡಿ.
* ಹೆಚ್ಚು ಹೆಚ್ಚು ಸಿಹಿ ತಿಂಡಿಗಳು ಮತ್ತು ಸಕ್ಕರೆ ಒಳಗೊಂಡಿರುವ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.
* ಆದಷ್ಟು ಸಮತೋಲಿತ ಆಹಾರ ಹಾಗೂ ಫೈಬರ್ ಹೊಂದಿರುವ ಆಹಾರಗಳನ್ನು ಸೇವಿಸಿರಿ.
* ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯಿರಿ ಹಾಗೂ ಹೈಡ್ರೇಟೆಡ್ ಆಗಿರಿ.
* ಹೆರಿಗೆಯ ನಂತರ ಸ್ವಲ್ಪ ಸಮಯದವರೆಗೆ ನಿಧಾನವಾಗಿ ನಡೆಯುವುದನ್ನು ಕಲಿಯಿರಿ.
ಈಗಾಗಲೇ ಹೆರಿಗೆಯ ನಂತರ ಕೆಲವು ಮಹಿಳೆಯರು ಪಿತ್ತಗಲ್ಲುಗಳ ಲಕ್ಷಣಗಳನ್ನು ಅನುಭವಿಸಿರಬಹುದು. ಕೆಲವೊಮ್ಮೆ ಕೊಬ್ಬಿನ ಆಹಾರವನ್ನು ಸೇವಿಸಿದ ನಂತರ ಹೊಟ್ಟೆಯ ಮೇಲ್ಭಾಗದಲ್ಲಿ ತೀವ್ರವಾದ ನೋವನ್ನು ಅನುಭವಿಸಬೇಕಾಗುತ್ತದೆ. ಇದು ವಾಂತಿ, ವಾಕರಿಕೆ, ಅಜೀರ್ಣದಂತಹ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಾಗಾಗಿ ಮಹಿಳರರು ಆದಷ್ಟು ಜವಬ್ದಾರಿಯಿಂದ ಇದ್ದು, ದೇಹಕ್ಕೆ ಸೂಕ್ತವಾದ ಆಹಾರವನ್ನು ಸೇವಿಸಬೇಕು ಎಂದು ವೈದ್ಯರು ಸೂಚಿಸುತ್ತಾರೆ.
ಪಿತ್ತಕೋಶದಲ್ಲಾಗುವ ಕಲ್ಲನ್ನು ತಡೆಯಲು ಸೇವಿಸಬೇಕಾದ ಆಹಾರಗಳು ಯಾವುವು?
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.