

ಬೆಂಗಳೂರು: ಸ್ಟ್ರಾಬೆರಿ ಎಲ್ಲಾ ಋತುವಿನಲ್ಲಿ ಸೂಪರ್ ಮಾರ್ಕೆಟ್ನಲ್ಲಿ ಲಭ್ಯವಿದೆ. ವಿಶೇಷವಾಗಿ ಮಕ್ಕಳು ಅವುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮಕ್ಕಳು ಮತ್ತು ವಯಸ್ಕರು ಇಬ್ಬರೂ ಈ ಹಣ್ಣುಗಳನ್ನು ತಿನ್ನಬೇಕು. ದಿನಕ್ಕೆ ಎರಡು ಸ್ಟ್ರಾಬೆರಿಗಳನ್ನು ತಿಂದರೆ ಸಾಕು, ದೇಹದಲ್ಲಿ ಅನೇಕ ಸಕರಾತ್ಮಕ ಬದಲಾವಣೆಗಳು ನಡೆಯುತ್ತವೆ. ಸ್ಟ್ರಾಬೆರಿಗಳಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ.
ಹಾಗಾಗಿ ಇವುಗಳನ್ನು ತಿಂದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ ಎಂದು ಭಯಪಡುವ ಅಗತ್ಯವಿಲ್ಲ. ಆದ್ದರಿಂದ ಮಧುಮೇಹ ರೋಗಿಗಳು ಸಹ ಸಾಕಷ್ಟು ಸ್ಟ್ರಾಬೆರಿಗಳನ್ನು ತಿನ್ನಬಹುದು. ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಸಿ, ವಿಟಮಿನ್ ಕೆ ಈ ಹಣ್ಣಿನಲ್ಲಿ ಹೇರಳವಾಗಿವೆ. ಇವೆಲ್ಲವೂ ನಮ್ಮ ದೇಹಕ್ಕೆ ಅತ್ಯಗತ್ಯ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಪ್ರತಿದಿನ ಸ್ಟ್ರಾಬೆರಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿನಿತ್ಯ ಇವುಗಳನ್ನು ತಿನ್ನುವುದರಿಂದ ಹೃದಯದ ತೊಂದರೆ, ಚಯಾಪಚಯ ಮತ್ತು ಏಕಾಗ್ರತೆಯ ಸಮಸ್ಯೆ ತಡೆಯುತ್ತದೆ.
ಸ್ಟ್ರಾಬೆರಿ ಹೃದಯಕ್ಕೆ ಅಗತ್ಯವಾದ ಪೋಷಕಾಂಶಗಳಾದ ಫೋಲೇಟ್, ಪೊಟ್ಯಾಶಿಯಂ, ಫೈಬರ್ ಮತ್ತು ಪಾಲಿಫಿನಾಲ್ಗಳನ್ನು ಹೊಂದಿರುತ್ತವೆ. ಇವೆಲ್ಲವೂ ಹೃದಯಾಘಾತದಿಂದ ರಕ್ಷಿಸುತ್ತವೆ. ಸ್ಟ್ರಾಬೆರಿಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ LDL ಅನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಯುತ್ತದೆ. ಸ್ಟ್ರಾಬೆರಿಗಳನ್ನು ಸೇವಿಸುವುದರಿಂದ ಮಿದುಳಿನ ಆರೋಗ್ಯವೂ ಹೆಚ್ಚುತ್ತದೆ. ಅನೇಕ ಅಧ್ಯಯನಗಳು ಇದನ್ನು ಈಗಾಗಲೇ ಸಾಬೀತುಪಡಿಸಿವೆ.
ಹೆಚ್ಚು ಸ್ಟ್ರಾಬೆರಿಗಳನ್ನು ತಿನ್ನುವುದರಿಂದ ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯನ್ನು ತಡೆಯಬಹುದು. ಇದರಲ್ಲಿರುವ ಪೊಟ್ಯಾಷಿಯಂ ಹೃದಯಕ್ಕೆ ಅತ್ಯಗತ್ಯ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಸ್ಟ್ರಾಬೆರಿ ತಿನ್ನುವುದರಿಂದ ಚರ್ಮದ ಸಮಸ್ಯೆಗಳು ಬರುವುದಿಲ್ಲ. ತಲೆನೋವು, ಅಲರ್ಜಿ, ನಿದ್ರಾಹೀನತೆಯಂತಹ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಸ್ಟ್ರಾಬೆರಿ ತಿನ್ನುವುದರಿಂದ ಕಣ್ಣಿನ ಪೊರೆಯಂತಹ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ. ದೃಷ್ಟಿ ಸುಧಾರಿಸುತ್ತದೆ. ಸ್ಟ್ರಾಬೆರಿ ಬಾಯಿಯ ಕ್ಯಾನ್ಸರ್ ಅನ್ನು ತಡೆಯುತ್ತದೆ. ದುರ್ವಾಸನೆ ತಡೆಯುತ್ತದೆ. ಹಲ್ಲಿನ ಸಮಸ್ಯೆಗಳನ್ನು ತಡೆಯುತ್ತದೆ. ಹೊಟ್ಟೆಯ ಹುಣ್ಣು ತಡೆಯುವಲ್ಲಿ ಕೂಡ ಸ್ಟ್ರಾಬೆರಿ ಪ್ರಮುಖ ಪಾತ್ರ ವಹಿಸುತ್ತದೆ.
ಗಮನಿಸಿ: ವಿವಿಧ ಅಧ್ಯಯನಗಳು ಮತ್ತು ಸಂಶೋಧನೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಎಂದಿನಂತೆ ಇಲ್ಲಿ ಒದಗಿಸಲಾಗಿದೆ. ವೈದ್ಯರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿದ ನಂತರವೇ ಈ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಮರೆಯದಿರಿ. ಈ ಮಾಹಿತಿಯು ನಿಮ್ಮ ಮಾಹಿತಿಗಾಗಿ ಮಾತ್ರ.