ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆಯುವುದು ಕಷ್ಟವೆ!; ಸಿಂಪಲ್​ ಈ ಟ್ರಿಕ್ಸ್​​ ಬಳಸಿ | Life Style

Untitled-design-2024-10-02T193729.083
Published on

ಆಲೂಗಡ್ಡೆ ತಿನಿಸುಗಳು ಬೇಡ ಎಂದು ಯಾರು ಹೇಳುವುದಿಲ್ಲ. ನಮ್ಮ ಅಡುಗೆಮನೆಯಲ್ಲಿ ಪ್ರಮುಖ ಆಹಾರ ಎಂದರೆ ತಪ್ಪಲ್ಲ. ಬೇಯಿಸಿದ ಆಲೂಗಡ್ಡೆಯಿಂದ ಆಲೂ ಪರಾಠ, ಸಬ್ಜಿ, ಆಲೂ ಪೂರಿ, ಸಮೋಸಾ, ಪಲ್ಯ, ಆಲೂಬೊಂಡಾ ಹೀಗೆ ಅನೇಕ ರುಚಿಕರ ಮೆನುವನ್ನೆ ಸಿದ್ಧಪಡಿಸಬಹುದು. ಆದರೆ ಆಲೂಗಡ್ಡೆಯನ್ನು ನೀರಿನಲ್ಲಿ ಬೇಯಿಸಿ ನಂತರ ಅದು ತಣ್ಣಗಾದ ಮೇಲೆ ಸಿಪ್ಪೆ ತೆಗೆಯುವುದು ಇದೆಯಲ್ಲಾ ಬಹಳ ಸಮಯ ಬೇಕು. ಬೇಯಿಸಿದ ಬಿಸಿ ಆಲೂಗಡ್ಡೆಯಲ್ಲಿ ಸಿಪ್ಪೆ ತೆಗೆಯುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಸಮಯ ಕಡಿಮೆಯಿದ್ದರಂತೂ ದೊಡ್ಡ ತಲೆನೋವು. ಈ ಸಮಸ್ಯೆ ಎದರಿಸುತ್ತಿರುವವರಿಗಾಗಿಯೇ ಈ ಟಿಪ್ಸ್​​.(Life Style)

ಆಲೂಗಡ್ಡೆ ಬಿಸಿಯಾಗಿದ್ದರೂ ನೀವು ಅದರ ಸಿಪ್ಪೆಯನ್ನು ಕ್ಷರ್ಣಾಧದಲ್ಲಿ ತೆಗೆಯಬಹುದು. ಅಂತಹ ವೈರಲ್​ ಹ್ಯಾಕ್​ ವಿಡಿಯೋವೊಂದರ ಬಗ್ಗೆ ನಾವು ನಿಮಗೆ ತಿಳಿಸುತ್ತಿದ್ದೇವೆ. ಇದನ್ನು ನೋಡಿದರೆ ನಿಮ್ಮ ಟೆನ್ಷನ್​​ ಮಾಯವಾಗುವುದು ಪಕ್ಕಾ. ಈ ಟ್ರಿಕ್ಸ್​​​ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವೈರಲ್​​ ವಿಡಿಯೋದಲ್ಲಿ ಮಹಿಳೆಯೊಬ್ಬರು ಶಾರ್ಟ್​ಕಟ್​ನಲ್ಲಿ ಬೇಯಿಸಿದ ಬಿಸಿ ಬಿಸಿ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಹೇಗೆ ಎಂಬುದನ್ನು ತೋರಿಸಿದ್ದಾರೆ. ನೀವು ಒಮ್ಮೆ ನೋಡಿ..

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು, 19 ಮಿಲಿಯನ್​ ಮಂದಿ ವೀಕ್ಷಿಸಿದ್ದಾರೆ. ಈ ಪೋಸ್ಟ್​ಗೆ ಬಹಳಷ್ಟು ಮಂದಿ ಪ್ರತಿಕ್ರಿಯಿಸುತ್ತಿದ್ದಾರೆ. ನನಗೆ ಆಲೂಗಡ್ಡೆ ಸಿಪ್ಪೆ ಸುಲಿಯುವುದು ಎಂದರೆ ಬೇಸರ, ಧನ್ಯವಾದಗಳು ನಾನು ಈ ಟ್ರಿಕ್​​​ ಕಲಿತೆ, ಏನ್​ ಟಾಪಿಕ್​ ಸಿಸ್ಟರ್​​​​ ಸೂಪರ್​​ ಹ್ಯಾಕರ್​​ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net