

ಬೆಂಗಳೂರು: ದಾಂಪತ್ಯ ಎನ್ನುವುದು ಸುಂದರವಾದ ಬಂಧವಾಗಿದೆ. ದಂಪತಿಗಳ ಮಧ್ಯೆ ಪ್ರೀತಿ, ಹೊಂದಾಣಿಕೆ ಮುಖ್ಯವಾಗಿದೆ. ಚಾಣಕ್ಯನ ನೀತಿಶಾಸ್ತ್ರದಲ್ಲಿ ( Chanakya Niti ) ದಂಪತಿ ಸುಖಃ ಸಂಸಾರಕ್ಕೆ ಯಾವೆಲ್ಲ ವಿಚಾರಗಳನ್ನು ( Life Partner Secrets ) ಮುಚ್ಚಡಬಾರದು ಎನ್ನುವ ಕುರಿತಾಗಿ ತಿಳಿಸಿಕೊಡಲಾಗಿದೆ...
ಮತ್ತೊಂದು ಸ್ತ್ರೀ ಒಡನಾಟ: ಪತಿ-ಪತ್ನಿಯರ ( Couple ) ನಡುವೆ ವಿಶ್ವಾಸ ಇರಬೇಕು. ಇದೇ ಅವರ ಬಾಂಧವ್ಯದ ತಳಹದಿ. ಆದರೆ ಯಾರನ್ನೂ ಕುರುಡಾಗಿ ನಂಬಬಾರದು. ಹೊರಗಿನ ಎರಡನೇ ಮಹಿಳೆಯ ಸಹವಾಸದಲ್ಲಿ ಅನೇಕ ಪುರುಷರು ತಮ್ಮ ಹೆಂಡತಿಯರಿಗೆ ( Wife ) ಮೋಸ ಮಾಡುತ್ತಾರೆ. ಚಾಣಕ್ಯನ ಸೂತ್ರಗಳ ಪ್ರಕಾರ.. ಒಬ್ಬ ಪುರುಷ ತನ್ನ ಹೆಂಡತಿಗೆ ತಿಳಿಯದೆ ಇನ್ನೊಬ್ಬ ಮಹಿಳೆಯೊಂದಿಗೆ ಸಹವಾಸ ಮಾಡಿದರೆ.. ಅದು ವೈವಾಹಿಕ ಜೀವನದ ಅಡಿಪಾಯವನ್ನು ಅಲ್ಲಾಡಿಸುತ್ತದೆ. ಗಂಡನ ಈ ರಹಸ್ಯ..ಹೆಂಡತಿಗೆ ಗೊತ್ತಾದರೆ.. ಮುಚ್ಚಿಡಬಾರದು.
ಸುಳ್ಳು: ದಂಪತಿ ಸುಳ್ಳನ್ನು ಮುಚ್ಚಿಡಬಾರದು. ಗಂಡನ ಈ ಅಭ್ಯಾಸದ ಬಗ್ಗೆ ಹೆಂಡತಿ ತನ್ನ ಕುಟುಂಬ ಸದಸ್ಯರಿಗೆ ತಿಳಿಸಬೇಕು. ಇಲ್ಲದಿದ್ದರೆ, ಅವಳು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅನುಮಾನಾಸ್ಪದ ಅಭ್ಯಾಸ: ಕೆಲವೊಮ್ಮೆ ಗಂಡನು ತನ್ನ ಹೆಂಡತಿಯನ್ನು ಎಲ್ಲರ ಮುಂದೆ ಅವಮಾನಿಸುತ್ತಾನೆ. ಆದರೆ ಹೆಂಡತಿ ಇದನ್ನು ಮನಸ್ಸಿನಲ್ಲಿ ಮುಚ್ಚಿಡಬಾರದು.. ಮನೆಯಲ್ಲಿ ಕುಟುಂಬಸ್ಥರಿಗೆ ಹೇಳಬೇಕು. ಇಲ್ಲದೆ ಹೋದರೆ ಆಕೆಗೆ ಸಮಸ್ಯೆಗಳು ಮುಂದೆ ಬರಬಹುದು.
ಮಸಸ್ಥಾಪ ( ಕೋಪ) : ಸಣ್ಣ ವಿಷಯಕ್ಕೂ ಕೋಪ. ದಂಪತಿ ಈ ಸ್ವಭಾವವನ್ನು ಕೆಲವೊಮ್ಮೆ ಸಹಿಸಿಕೊಳ್ಳುತ್ತಾರೆ. ಆದರೆ ಅತಿಯಾದ ಕೋಪ ವೈವಾಹಿಕ ಬಂಧದಲ್ಲಿ ಕಂದಕವನ್ನು ಸೃಷ್ಟಿಸುತ್ತದೆ. ಗಂಡನಲ್ಲಿನ ಈ ಗುಣದ ಬಗ್ಗೆ ಹೆಂಡತಿ ತನ್ನ ಅತ್ತೆ-ಮಾವಂದಿರಿಗೆ ಹೇಳುವುದು ಕಡ್ಡಾಯ.