

ಹೆಬ್ರಿ: ವಿದ್ಯಾರ್ಥಿಗಳು ಜ್ಞಾನದ ಹಸಿವು ಹೆಚ್ಚಿಸಿಕೊಂಡು ಕಾಲೇಜಿನಲ್ಲಿ ಲಭ್ಯವಿರುವ ಗ್ರಂಥಾಲಯದ ಸೌಲಭ್ಯ ಬಳಸಿಕೊಂಡಲ್ಲಿ ಗುರಿ ಸಾಧಿಸಬಹುದು ಎಂದು ಉಡುಪಿ ಮಹಿಳಾ ಸ.ಪ್ರ.ದ.ಕಾಲೇಜಿನ ಹಿರಿಯ ಶ್ರೇಣಿ ಗ್ರಂಥಪಾಲಕ ವೆಂಕಟೇಶ್ ಹೇಳಿದರು.
ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಗ್ರಂಥಾಲಯ ಸಪ್ತಾಹದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಮಾತನಾಡಿದರು. ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಐಕ್ಯುಎಸಿ ಸಂಚಾಲಕ ಡಾ.ಗಣೇಶ ಎಸ್, ಉಪನ್ಯಾಸಕರಾದ ಜ್ಯೋತಿ, ಪ್ರವೀಣ್, ಪ್ರದೀಪ್, ವಿದ್ಯಾರ್ಥಿ ನಾಯಕರಾದ ಪ್ರಮೋದ್ ರೆಡ್ಡಿ, ಅಕ್ಷಯ ಶೆಟ್ಟಿ ಉಪಸ್ಥಿತರಿದ್ದರು. ಗ್ರಂಥಪಾಲಕಿ ಶಿಲ್ಪಾ ಪ್ರಸ್ತಾವನೆಗೈದರು. ರಕ್ಷಾ ಸ್ವಾಗತಿಸಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.