ಮಕ್ಕಳ ಕಲಿಕೆಗೆ ಗ್ರಾಪಂ ಮಟ್ಟದ ಗ್ರಂಥಾಲಯಗಳು ಪೂರಕವಾಗಲಿ

YLB LAIBRARI
ಯಲಬುರ್ಗಾದಲ್ಲಿ ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ಮಕ್ಕಳ ಸ್ನೇಹಿ ಗ್ರಂಥಾಲಯ ಕುರಿತ ತರಬೇತಿ ಕಾರ್ಯಾಗಾರದಲ್ಲಿ ತಾಪಂ ಇಒ ಸಂತೋಷ ಪಾಟೀಲ್ ಮಾತನಾಡಿದರು.
Published on

ಯಲಬುರ್ಗಾ: ಗ್ರಾಪಂ ಮಟ್ಟದ ಗ್ರಂಥಾಲಯಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚುವರಿ ಕಲಿಕಾ ಕೇಂದ್ರವಾಗಬೇಕು. ಮಗು ಓದುವ ಹವ್ಯಾಸ ರೂಢಿಸಿಕೊಳ್ಳಲು ಅವಶ್ಯವಿರುವ ಪುಸ್ತಕ ಸಂಗ್ರಹಿಸಬೇಕು ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.

ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ಮಕ್ಕಳ ಸ್ನೇಹಿ ಗ್ರಂಥಾಲಯ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮೇಲ್ವಿಚಾರಕರು ತಮ್ಮ ಗ್ರಂಥಾಲಯದಲ್ಲಿ ವಿವಿಧ ಕಾರ್ಯಕ್ರಮ ಮತ್ತು ಚಟುವಟಿಕೆಗಳ ಮೂಲಕ ಮಕ್ಕಳನ್ನು ಆಕರ್ಷಿಸಬೇಕು. ಪ್ರತಿದಿನವೂ ಮಗು ಗ್ರಂಥಾಲಯಕ್ಕೆ ಬರಲು ರೂಢಿಯಾಗಬೇಕು ಎಂದರು.

ತರಬೇತಿ ಸಂಪನ್ಮೂಲ ವ್ಯಕ್ತಿ ಭೀಮಪ್ಪ ಹವಳಿ ಮಾತನಾಡಿ, ಗ್ರಂಥಪಾಲಕರು ಮಕ್ಕಳಿಗೆ ಕುಡಿವ ನೀರು, ಸ್ವಚ್ಛತೆ, ಆಟ, ಕ್ರೀಡಾ ಸಾಮಗ್ರಿ ವ್ಯವಸ್ಥೆ ಮಾಡಬೇಕು. ಶೈಕ್ಷಣಿಕ ಅಭ್ಯಾಸ ಮಾಡಿಸಲು ಪೂರಕವಾದ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುವ ಪ್ರಯತ್ನವಾಗಬೇಕು ಎಂದು ಹೇಳಿದರು.

ತರಬೇತಿ ಸುಗಮಗಾರ ಪ್ರವೀಣಕುಮಾರ ಸನಗಿನ, ವಿಷಯ ನಿರ್ವಾಹಕ ಬಸವರಾಜ ಪಾಟೀಲ್, ಬಸವರಾಜ ಮ್ಯಾಗೇರಿ, ವೀರನಗೌಡ ಪಾಟೀಲ್, ಹನುಮಂತ ಮೇತಗಲ್, ಜಗದೀಶ ಛಲವಾದಿ, ಗವಿಸಿದ್ದಮ್ಮ ಗುಳಗುಳಿ, ಜಗನಾಥ, ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net