

ವಿಜಯಪುರ : ವಿಜ್ಞಾನ ೇತ್ರದಲ್ಲಿ ಮಹಿಳೆ ಸಮಾನತೆ ಸಾಧಿಸಲಿ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಕೆ. ರಮೇಶ ಹೇಳಿದರು.
ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸ್ಮಾರ್ಟ್ ಆಪ್ಟಿಕಲ್ ಮಟೆರಿಯಲ್ಸ್ ಆ್ಯಂಡ್ ಆ್ಯಂಗುಲರ್ ಮೊಮೆಂಟಮ್ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತ್ಯಜಿವನದಲ್ಲಿ ವೈಜ್ಞಾನಿಕ ವಿಚಾರಗಳು, ಆಚರಣೆಗಳು ಬಳಕೆಯಲ್ಲಿ ಇರಬೇಕು. ವಿದ್ಯಾರ್ಥಿನಿಯರ ಜೀವನಕ್ರಮವೂ ವೈಜ್ಞಾನಿಕತೆಯಿಂದ ಒಳಗೊಂಡಿರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ನಿಕಾಯದ ಡೀನ್ ಪ್ರೊ. ಸಕ್ಪಾಲ್ ಹೂವಣ್ಣ ಮಾತನಾಡಿದರು. ಅತಿಥಿ ಉಪನ್ಯಾಸಕಿ ವಾಣಿಶ್ರೀ ಕಿರಣಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಯೋಜಕಿ ಡಾ. ಜಿ. ಸೌಭಾಗ್ಯ ಮತ್ತಿತರರರಿದ್ದರು.