

ಕಾರ್ಕಳ: ವಿದ್ಯಾರ್ಥಿಗಳಲ್ಲಿ ಹೊಂದಾಣಿಕೆ, ಪ್ರಾವಾಣಿಕತೆ, ನೈತಿಕತೆಗಳನ್ನು ಬೆಳೆಸುವ ಉಪನ್ಯಾಸಕರಾಗಬೇಕು. ಕಾರ್ಯಾಗಾರದ ಸದುಪಯೋಗ ಪಡೆದು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕೆಂದು ಉಡುಪಿ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕ ವಾರುತಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂ ಮತ್ತು ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪ್ರಾಂಶುಪಾಲರ ಸಂ ಆಯೋಜಿಸಿದ್ದ ಆಂಗ್ಲ ಭಾಷಾ ಉಪನ್ಯಾಸಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ವಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸಂತೋಷ್ ವಾತನಾಡಿ, ಪ್ರಪಂಚದ ಯಾವ ಭಾಗಗಳಿಂದ ಜ್ಞಾನ ಹರಿದು ಬಂದರೂ ಅದನ್ನು ಸ್ವೀಕರಿಸಬೇಕು. ಆದರೆ ಆ ಜ್ಞಾನವನ್ನು ಸ್ವೀಕರಿಸಲು ಆಂಗ್ಲಭಾಷೆ ಬಹುಮುಖ್ಯ. ಈ ಭಾಷೆಯ ಕಲಿಕೆ ಯಶಸ್ಸಿನ ಮೊದಲ ಹೆಜ್ಜೆ ಎಂದರು.
ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪ್ರಾಂಶುಪಾಲರ ಸಂದ ಅಧ್ಯಕ್ಷ ದಿನೇಶ್ ಎಂ.ಕೊಡವೂರು ಮಾತನಾಡಿದರು. ಚಿಕ್ಕಮಗಳೂರು ಸರ್ಕಾರಿ ಪ.ಪೂ. ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಮಧು.ಜಿ.ಎಂ., ತರಿಕೆರೆ ಸರ್ಕಾರಿ ಪ.ಪೂ. ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಓಂಕಾರಮೂರ್ತಿ ಜಿ.ಟಿ. ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಆಂಗ್ಲ ಭಾಷಾ ಉಪನ್ಯಾಸಕರ ಸಂ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ್ ವಿ.ಎ. ವಂದಿಸಿದರು, ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಕೀರ್ತಿ ಹರೀಶ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಾರದಾ ಹೊಳ್ಳ, ಉಪಾಧ್ಯಕ್ಷ ಥೋಮಸ್, ಕಾರ್ಯದರ್ಶಿ ಜೋತ್ಸ್ನಾ ಪೈ, ಸಹ ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿಯಾಗಿ ರಾಜೇಶ್, ಸಹ ಖಜಾಂಚಿ ಶಮಿತಾ, ಸದಸ್ಯರಾಗಿ ಅನುಪವಾ, ಜಿನ್ಸಿ, ಸೌದಾಮಿನಿ, ಪ್ರಕಾಶ್, ಸೌರಭ್ ಆಯ್ಕೆಯಾದರು.