ಯುವಕರು ದುಶ್ಚಟ ತ್ಯಜಿಸಲಿ

ಬೀಳಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುಹಾಸ್ ಇಂಗಳೆ ಮಾತನಾಡಿದರು. ಕೃಷಿ ಅಧಿಕಾರಿ ಸತೀಶ ಮಾವಿನಕೊಪ್ಪ ಇದ್ದರು.
ಬೀಳಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುಹಾಸ್ ಇಂಗಳೆ ಮಾತನಾಡಿದರು. ಕೃಷಿ ಅಧಿಕಾರಿ ಸತೀಶ ಮಾವಿನಕೊಪ್ಪ ಇದ್ದರು.
Published on

ಬೀಳಗಿ: ಮದ್ಯಪಾನ, ಮಾದಕ ವಸ್ತು, ತಂಬಾಕು ಹಾಗೂ ಗುಟ್ಖಾ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಹಸೀಲ್ದಾರ್ ಸುಹಾಸ ಇಂಗಳೆ ಹೇಳಿದರು. ಪಟ್ಟಣದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ ಮತ್ತು ಆರೋಗ್ಯ ಇಲಾಖೆ ಆಶ್ರಯದಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತ ಸಂಸ್ಥಾನದ ಮಠಾಧಿಪತಿ ಲಿಂ. ಡಾ. ಮಹಾಂತ ಸ್ವಾಮಿಗಳ ಜನ್ಮದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮದ್ಯಪಾನ ಸೇವನೆಯಿಂದ ಜೀವನ ಹಾಳು ಮಾಡಿಕೊಳ್ಳಬಾರದು. ನಮ್ಮ ಕುಟುಂಬವು ನಮ್ಮನ್ನೇ ಅವಲಂಬಿತವಾಗಿದೆ ಎನ್ನುವುದನ್ನು ಮರೆತರೆ ಮಸನವೇ ಗತಿ. ವ್ಯಸನಮುಕ್ತರಾಗಿ ಮಹಾಂತ ಶ್ರೀಗಳ ಆದರ್ಶ ಪಾಲನೆ ಮಾಡಿದರೆ ಮಾತ್ರ ಜೀವನ ಸಾರ್ಥಕವಾಗಲಿದೆ. ಯುವಕರು ದುಶ್ಚಟಗಳಿಂದ ದೂರಾಗಿ ಸುಂದರ ಜೀವನ ರೂಪಿಸಿಕೊಳ್ಳಬೇಕು. ಮೌಲ್ಯಾಧಾರಿತ ಶಿಕ್ಷಣ ಪಡೆಯಬೇಕು ಎಂದರು.
ಆರೋಗ್ಯಾಧಿಕಾರಿ ಡಾ. ದಯಾನಂದ ಕರೆಣ್ಣವರ, ಅಬಕಾರಿ ಇನ್ಸ್‌ಪೆಕ್ಟರ್ ಅನೀಲ ಹೂಗಾರ, ಗ್ರೇಡ್-2 ತಹಸೀಲ್ದಾರ್ ಆನಂದ ಕೊಲ್ಹಾರ, ಉಪ ನೋಂದಣಿ ಅಧಿಕಾರಿ ಮುಂಡರಗಿ, ಕೃಷಿ ಅಧಿಕಾರಿ ಸತೀಶ ಮಾವಿನಕೊಪ್ಪ, ಶಿರಸ್ತೇದಾರ್ ಎಂ.ಎಸ್. ಹುರಕಡ್ಲಿ, ಶಿಕ್ಷಕ ಗುರುರಾಜ ಲೂತಿ, ದೈಹಿಕ ವಿಷಯ ಪರಿವೀಕ್ಷಕರು ಎಸ್.ಎ. ಎತ್ತಿನಮನಿ ಇತರರಿದ್ದರು.
ದಕ್ಕೂ ಮುನ್ನ ತಹಸೀಲ್ದಾರ್ ಸುಹಾಸ ಇಂಗಳೆ ಮತ್ತು ಆಯಾ ಇಲಾಖೆ ನೇತೃತ್ವದಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಲು ಪಟ್ಟಣದಲ್ಲಿ ಜಾಥಾ ನಡೆಯಿತು. ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net