ಮತ್ತೆ ಕಾರ್ಯಾರಂಭಿಸಲಿ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿ

4 lxr 2- NULINA GIRANI
Published on

ಲಕ್ಷ್ಮೇಶ್ವರ: ಸಹಕಾರ ಕ್ಷೇತ್ರದಲ್ಲಿ ಈ ಭಾಗದಲ್ಲಿಯೇ ವಿಶಿಷ್ಟ ಹೆಸರು ಮಾಡಿರುವ ದಿ. ಗೂಳಪ್ಪ ಉಪನಾಳ ಅವರು ಸ್ಥಾಪಿಸಿದ ಶ್ರೀ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯು ಮೊದಲಿನಂತೆ ವ್ಯವಸ್ಥಿತವಾಗಿ ಸಾಗಲು ನಿರ್ದೇಶಕ ಮಂಡಳಿ, ಸದಸ್ಯರು, ಮುಖಂಡರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ನೂಲಿನ ಗಿರಣಿಯ ಅಧ್ಯಕ್ಷ ಪುಲಕೇಶಿ ಉಪನಾಳ ಹೇಳಿದರು.


ಸೋಮವಾರ ಪಟ್ಟಣದ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ 43ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿದರು.


1981ರಲ್ಲಿ ನೂಲಿನ ಗಿರಣಿಗೆ ಶಂಕುಸ್ಥಾಪನೆ ನಡೆದು, 1991ರಲ್ಲಿ ನೂಲು ಉತ್ಪಾದನೆ ಪ್ರಾರಂಭಿಸಿತು. ಇದೀಗ ಕಾರಣಾಂತರಗಳಿಂದ ನೂಲಿನ ಗಿರಣಿ ತನ್ನ ಕಾರ್ಯ ಚಟುವಟಿಕೆ ನಿಲ್ಲಿಸಿದ್ದು, ಅದನ್ನು ಮತ್ತೆ ಪ್ರಾರಂಭಿಸುವ ಉದ್ದೇಶ ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.


ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಎಫ್.ಸಿ. ಗುಡಗೇರಿ, ನಿರ್ದೇಶಕರಾದ ಎಸ್.ಪಿ. ಬಳಿಗಾರ, ಸೋಮೇಶ ಉಪನಾಳ, ಎಸ್.ವಿ. ಪಾಟೀಲ, ಎಸ್.ಬಿ. ಬಿಸನಳ್ಳಿ, ಎನ್.ಎನ್. ರಗಟಿ, ಎಸ್.ವಿ. ಹರ್ತಿ, ಜೆ.ಬಿ. ಮೆಣಸಿನಕಾಯಿ, ಸಿ.ಕೆ. ಗುಂಜಳ, ಬಿ.ಎಫ್. ಮುದಿಮಲ್ಲನವರ, ಎನ್.ಎಚ್. ಗುಂಜಳ, ಶಂಕ್ರಪ್ಪ ಗೊರವರ, ಬಿ.ಎಂ. ಕಳಸದ, ನಂದಾ ಧರ್ವಯತ, ಪಿ.ಎನ್. ಗಿಡಿಬಿಡಿ, ಎಂ.ಎಚ್. ಗುಡಾರದ, ಆರ್.ಇ. ಬಾಕಳೆ, ಬಿ.ಪಿ. ಸಾಸಲವಾಡ, ವ್ಯವಸ್ಥಾಪಕ ನಿರ್ದೇಶಕ ಎ. ಧರಣೇಶ, ನೂಲಿನ ಬೋಧಕ ಜಿ. ರೇವಣ್ಣ, ಹಾಗೂ ನೂರಾರು ರೈತರು ಇದ್ದರು. ಮಂಜುನಾಥ ಕುಂಬಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net