ಆಹಾರ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಲಿ

byn (2)
Published on

ಬೈಂದೂರು: ಇಂದಿನ ಯುವಜನರು ಸಾಂಪ್ರದಾಯಿಕ ಪೌಷ್ಟಿಕಾಂಶದ ಆಹಾರ ಸೇವನೆ ಬಿಟ್ಟು ಪಾಶ್ಚಿಮಾತ್ಯ ಆಹಾರದ ಕಡೆಗೆ ಒಲವು ತೋರುತ್ತಿದ್ದಾರೆ. ಆಹಾರ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಜಾರಿಗೆ ತಂದಿದೆ ಎಂದು ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಖಾರ್ವಿ ಹೇಳಿದರು. ಕಿರಿಮಂಜೇಶ್ವರ ಗ್ರಾಪಂ ಆಶ್ರಯದಲ್ಲಿ ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಾಗೂರು ಶಾಂತೇರಿ ಕಾಮಾಕ್ಷಿ ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಮನೆಯಿಂದ ತಯಾರಿಸಿ ತಂದಿರುವ ಪೌಷ್ಟಿಕಾಂಶ ತಿಂಡಿಗಳ ಪ್ರದರ್ಶನ ನಡೆಯಿತು. ಆಯ್ಕೆಯಾದ ತಿನಿಸುಗಳಿಗೆ ಬಹುಮಾನ ನೀಡಲಾಯಿತು. ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ವೈದ್ಯಾಧಿಕಾರಿ ನಿಶಾ ರೆಬೆಲ್ಲೊ, ಗ್ರಾಪಂ ಸದಸ್ಯರಾದ ರಾಜು ದೇವಾಡಿಗ, ಕೃಷ್ಣ ಖಾರ್ವಿ, ಈಶ್ವರ್ ದೇವಾಡಿಗ, ಆನಂದ ಪೂಜಾರಿ, ಸರಸ್ವತಿ ನಾಯರಿ, ನೇತ್ರಾವತಿ, ಶಶಿಕಲಾ, ಜಯಲಕ್ಷ್ಮೀ, ಪಿಡಿಒ ರಾಜೇಶ, ಅಂಗನವಾಡಿ ಮೇಲ್ವಿಚಾರಕಿ ರೇಖಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಸಂಘದ ಸದಸ್ಯರು, ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಪ್ರವೀಣಾ ಹೊಸಹಿತ್ಲು ಸ್ವಾಗತಿಸಿದರು. ಪದ್ಮನಾಭ ಹೆಬ್ಬಾರ್ ನಿರೂಪಿಸಿದರು. ಪ್ರವೀಣಾ ನಾಗೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net