ಕರೊನಾ ಬುಲೆಟಿನ್​​: ರಾಜ್ಯದಲ್ಲಿ ಕಳೆದೆರಡು ದಿನಗಳಿಗಿಂತ ಕಡಿಮೆ ಸೋಂಕು, ಕಡಿಮೆ ಸಾವು..

Corona
Published on

ಬೆಂಗಳೂರು: ರಾಜ್ಯದಲ್ಲಿನ ಸೋಮವಾರದ ಕೋವಿಡ್​-19 ಬುಲೆಟಿನ್​ ಬಿಡುಗಡೆ ಆಗಿದ್ದು, ಕಳೆದೆರಡು ದಿನಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸಾವಿನ ಸಂಖ್ಯೆ ಕೂಡ ತಗ್ಗಿದೆ.

ಸೋಮವಾರ ರಾಜ್ಯದಲ್ಲಿ ಹೊಸದಾಗಿ 6,892 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,82,458ಕ್ಕೆ ತಲುಪಿದೆ. ಮತ್ತೊಂದೆಡೆ ಒಂದೇ ದಿನ 7,509 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಇದುವರೆಗೆ ಗುಣವಾದವರ ಪ್ರಮಾಣ 4,69,750ಕ್ಕೆ ಏರಿದೆ. ಸದ್ಯ ರಾಜ್ಯದಲ್ಲಿ 1,04,048 ಕೋವಿಡ್​-19 ಪ್ರಕರಣಗಳು ಸಕ್ರಿಯವಾಗಿವೆ. ಆದರೆ ರಾಜ್ಯಲ್ಲಿ ಸೋಮವಾರ 59 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಭಾನುವಾರ ಹೊಸದಾಗಿ 9,543 ಸೋಂಕಿತರು ಪತ್ತೆಯಾಗಿದ್ದು, 79 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದರು. ಶನಿವಾರ ಹೊಸದಾಗಿ 8,811 ಕೋವಿಡ್​-19 ಸೋಂಕಿತರು ಪತ್ತೆಯಾಗಿದ್ದು, 86 ಜನ ಕರೊನಾಗೆ ಬಲಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net