More

    VIDEO| ತೆಲಂಗಾಣದಲ್ಲಿ ಹಾಡಹಗಲೇ ಕಾಣಿಸಿಕೊಂಡ ಚಿರತೆ!

    ಹೈದ್ರಾಬಾದ್​: ಕರೊನಾ ಸೋಂಕು ತಡೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲಾಕ್​ಡೌನ್​ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಾರಣವಾಗಿದೆ.

    ಕೇವಲ ವಾಹನ ಶಬ್ಧ ಕೇಳುತ್ತಿದ್ದ ನಗರಗಳಲ್ಲಿ ಹಕ್ಕಿಗಳ ಕಲವರ ಕೇಳಿಸುತ್ತಿದೆ. ಖಾಲಿ ರಸ್ತೆಗಳಲ್ಲಿ ಕಾಡು ಪ್ರಾಣಿಗಳು ಸಂಚರಿಸುತ್ತಿವೆ.

    ತೆಲಂಗಾಣದ ಖಾಲಿ ರಸ್ತೆಯಲ್ಲಿ ಹಾಡಹಗಲೇ ಚಿರತೆ ಪ್ರತ್ಯಕ್ಷವಾಗಿ ಭೀತಿಯ ಜತೆ ಆಶ್ಚರ್ಯ ಕೂಡ ವ್ಯಕ್ತವಾಗಿದೆ.
    ಮೇ 14ರಂದು ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಮೈಲಾ ದೇವರಪಲ್ಲಿಯ ಅಂಡರ್​ಪಾಸ್​ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಾಣಿಸಿಕೊಂಡಿರುವ 19 ಸೆಕೆಂಡುಗಳ ವಿಡಿಯೋ ತುಣುಕನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ (ಐಎಫ್​ಎಸ್​) ಸುಸಂತಾ ನಂದಾ ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್​ ಮಾಡಿದ್ದಾರೆ. ಈ ವಿಡಿಯೋವನ್ನು ಅಂದಾಜು 3 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ.

    ಇದನ್ನೂ ಓದಿ     VIDEO| ಮರಿ ಆನೆ ಸಫಾರಿ ವಾಹನದಲ್ಲಿರುವವರನ್ನು ಹೇಗೆ ಬೆದರಿಸುತ್ತದೆ ನೋಡಿ !

    ರಸ್ತೆ ವಿಭಜಕದ ಬಳಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿತ್ತು. ನಂತರ ಎದ್ದು ಖಾಲಿ ರಸ್ತೆಯಲ್ಲಿ ಓಡಾಡಲು ಆರಂಭಿಸಿತು. ಚಿರತೆಯನ್ನು ರಸ್ತೆಯಲ್ಲಿ ನೋಡಿದ ಜನರು ತಾರಸಿ ಮೇಲೆ ಬಂದು ವೀಕ್ಷಿಸಿದರು.
    ಚಿರತೆ ಗಾಯಗೊಂಡು ರಸ್ತೆಯಲ್ಲಿ ಮಲಗಿದೆ ಎಂದು ಎಲ್ಲರೂ ಭಾವಿಸಿದ್ದರೂ, ಆದರೆ ಚಿರತೆ ಓಡಾಡುತ್ತಿರುವುದನ್ನು ನೋಡಿದವರು ಅದು ಆರೋಗ್ಯವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)

    ಸೋಮವಾರದಿಂದ ರಸ್ತೆಗೆ ಇಳಿಯಲಿವೆ ಬಿಎಂಟಿಸಿ ಬಸ್‌ಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts