ವಾಹನ ಡಿಕ್ಕಿಯಾಗಿ ಚಿರತೆ ಮರಿ ಸಾವು

leopard-death
Published on

ಶಿರಸಿ: ಅಪರಿಚಿತ ವಾಹನ ಬಡಿದು ಚಿರತೆ ಮರಿಯೊಂದು ಮೃತಪಟ್ಟ ಘಟನೆ ಬನವಾಸಿ ಅರಣ್ಯ ವಲಯದ ದಾಸನಕೊಪ್ಪ ಶಾಖಾ ವ್ಯಾಪ್ತಿಯ ಶಿರಸಿ ಹಾವೇರಿ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.
6ರಿಂದ 7ತಿಂಗಳ ವಯಸ್ಸಿನ ಹೆಣ್ಣು ಮರಿ ಚಿರತೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಸಿ.ಎನ್, ವರದರಂಗನಾಥ್ ಜಿ.ಎಚ್ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶು ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.ಬನವಾಸಿ ವಲಯದಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net