

ಬಂಟ್ವಾಳ: ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಮತ್ತು ಬಂಟ್ವಾಳ ಮುಸ್ಲಿಂ ಸಮಾಜ ಬಂಟ್ವಾಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ ಬಿ.ಸಿ.ರೋಡಿನ ರೋಟರಿ ಕ್ಲಬ್‌ನಲ್ಲಿ ನಡೆಯಿತು.
ಸ್ವಾತಂತ್ರೃ ನಂತರದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ ಕಾನೂನುಗಳ ಬಗ್ಗೆ ಮಾಹಿತಿ ನೀಡಿ, ಕೇಂದ್ರ ಸರ್ಕಾರ ಇತ್ತೀಚೆಗೆ ಭಾರತದಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ಕಾನೂನುಗಳ ವ್ಯಾಪ್ತಿ ಮತ್ತು ನಿಯಮಾವಳಿಗಳನ್ನು ಬದಲಾವಣೆ ಮಾಡಿದ ಬಗ್ಗೆ ಸಮಗ್ರವಾದ ವಿವರಣೆ ಬೆಂಗಳೂರಿನ ವಕೀಲ ಮುಝಫರ್ ಅಹ್ಮದ್ ನೀಡಿದರು.
ವಕೀಲ ಇಮ್ತಿಯಾಝ್ ಬಿ.ಮಾತನಾಡಿ, ಭಾರತದ ಕಾನೂನುಗಳ ಕಾರ್ಯಮಿತಿ ಮತ್ತು ಲೋಪದೋಷಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ವಕ್ಫ್ ಬೊರ್ಡುಗಳಲ್ಲಿ ಮಾಡಿದಂಥ ಬದಲಾವಣೆ ಸಹ ಸಭೆಗೆ ತಿಳಿಸಿದರು.
ಬಂಟ್ವಾಳ ಮುಸ್ಲಿಂ ಸಮಾಜದ ಅಧ್ಯಕ್ಷ ಕೆ.ಎಚ್.ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಅಧ್ಯಕ್ಷ ಇರ್ಷಾದ್ ಯು.ಟಿ.ಸ್ವಾಗತಿಸಿ, ಬಂಟ್ವಾಳ ಮುಸ್ಲಿಂ ಸಮಾಜದ ಹಿರಿಯ ಸದಸ್ಯರಾದ ರಹೀಂ ಬಿ.ಪ್ರಾಸ್ತಾವಿಕ ಮಾತನಾಡಿದರು. ಮುಸ್ಲಿಂ ಜಸ್ಟೀಸ್ ಫೋರಂ ವಕ್ತಾರ ಹಾಗೂ ಬಂಟ್ವಾಳ ಮುಸ್ಲಿಂ ಸಮಾಜದ ಕಾರ್ಯದರ್ಶಿ ಹನೀಫ್ ಖಾನ್ ಕೋಡಾಜೆ ಇದ್ದರು.
ಮುಸ್ಲಿಂ ಜಸ್ಟೀಸ್ ಫೋರಂ ಸದಸ್ಯ ಸಲಾಂ ಉಚ್ಚಿಲ್ ವಂದಿಸಿ. ಮುಸ್ಲಿಂ ಸಮಾಜ ಬಂಟ್ವಾಳದ ಸದಸ್ಯ ಇಕ್ಬಾಲ್ ಐಎಂಆರ್ ನಿರೂಪಿಸಿದರು.