ದೇಶಾಭಿಮಾನದ ಬದುಕಿಗೆ ರಾಣಿ ಅಬ್ಬಕ್ಕ ಪ್ರೇರಣೆ : ಡಾ.ಗಣೇಶ್ ಅಮೀನ್ ಸಂಕಮಾರ್ ಚಿಂತನೆ

Published on

ಮೂಲ್ಕಿ: ರಾಷ್ಟ್ರಭಕ್ತಿ ಯುವ ಮನಸುಗಳ ಕಣಕಣದಲ್ಲಿ ಬೆರೆತು, ಗುಲಾಮ ಮನಸ್ಥಿತಿಯಿಂದ ಹೊರಬಂದು ಸ್ವಾಭಿಮಾನ ಮತ್ತು ದೇಶಾಭಿಮಾನದಿಂದ ಬದುಕಲು ರಾಣಿ ಅಬ್ಬಕ್ಕನ ಜೀವನ ಪ್ರೇರಣೆಯಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ವಿಶ್ರಾಂತ ನಿರ್ದೇಶಕ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.

ರಾಣಿ ಅಬ್ಬಕ್ಕ ಸ್ಮರಣಾರ್ಥ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ಅಬ್ಬಕ್ಕ 500 ಎಸಳು 30 ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಎಂಆರ್‌ಪಿಎಲ್ ನಿವೃತ್ತ ಮಹಾಪ್ರಬಂಧಕಿ ವೀಣಾ ಟಿ.ಶೆಟ್ಟಿ ದೀಪ ಬೆಳಗಿಸಿದರು. ಶಾಲಾ ಸಂಚಾಲಕ ಹರೀಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ಬಾಲಚಂದ್ರ ಸನಿಲ್, ಪ್ರಾಂಶುಪಾಲ ಯತೀಶ್ ಅಮೀನ್, ಆಡಳಿತಾಧಿಕಾರಿ ಮಂಜುಳಾ ಕೆ.ವಿ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ರಾಣಿ ಅಬ್ಬಕ್ಕ ಸಂಬಂಧಿತ ರಸಪ್ರಶ್ನೆ ನಡೆಯಿತು. ಪೃಥ್ವಿರಾಜ್ ಸ್ವಾಗತಿಸಿದರು. ಶಕೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net