ಕಲಿಕಾ ಹಬ್ಬದಿಂದ ಪ್ರತಿಭೆಗಳಿಗೆ ಅನುಕೂಲ

blank

ಯಲಬುರ್ಗಾ: ಕಲಿಕಾ ಹಬ್ಬ ಮಕ್ಕಳಲ್ಲಿನ ಪ್ರತಿಭೆ ಪ್ರಸ್ತುತಪಡಿಸಲು ಅವಕಾಶ ನೀಡಲಿದೆ ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಹೇಳಿದರು.

ಇದನ್ನೂ ಓದಿ:ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ : ಆನೆಗುಂದಿ ಶ್ರೀ ಆಶೀರ್ವಚನ 

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಲಿಕಾಹಬ್ಬ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಗುಣ ಮತ್ತು ಕಲೆ ಗುರುತಿಸಲು ಪೂರ್ವ ತಯಾರಿ ನಡೆಸಲು ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದರು.

ಕಲಿಕಾ ಹಬ್ಬ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ. ಇದರಿಂದ ಹೊಸ ಬಗೆಯ ಪಠ್ಯೇತರ ಚಟುವಟಿಕೆ ಕಲಿಯಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಜ್ಞಾನ ಚಟುವಟಿಕೆ ಮೂಲಕ ತೆರೆದಿಡಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕವಾಗಿ ಬಲಗೊಳ್ಳಬಹುದು.

ಮಕ್ಕಳನ್ನ ಪುಸ್ತಕದ ಹುಳಗಳನ್ನಾಗಿ ಮಾಡದೆ, ಪಠ್ಯೇತರ ಚಟುವಟಿಕೆಗಳಲ್ಲಿ ಮುನ್ನಲೆಗೆ ತಂದರೆ ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗಲಿದೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ಶಾಂತಪ್ಪ ಚಂಡೂರ, ಸಿಆರ್‌ಪಿ ಶರಣು ಕುರ್ನಾಳ, ಬಿಆರ್‌ಪಿ ಮಕ್ಕಳ ಕಲಿಕಾ ಹಬ್ಬದ ತಾಲೂಕು ನೋಡಲ್ ಅಧಿಕಾರಿ ಶಿವಪ್ಪ ಉಪ್ಪಾರ, ನೌಕರ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಎಸ್ಡಿಎಂಸಿ ಉಪಾಧ್ಯಕ್ಷ ಯಮನೂರಪ್ಪ ಕಡೇಮನಿ,

ಸದಸ್ಯರಾದ ಈರಣ್ಣ ಬಿಸೆರೊಟ್ಟಿ, ಶರಣಪ್ಪ ತೋಟದ, ಸಿದ್ದಪ್ಪ ಅಂಗಡಿ, ಶಿವಪ್ಪ ಸೂಡಿ, ಶರಣಪ್ಪ ಚಲವಾದಿ, ಗ್ರಾಪಂ ಸದಸ್ಯ ಶರಣಪ್ಪ ಕರಡದ, ಮುಖ್ಯಶಿಕ್ಷಕ ಚಿನ್ನುಭಾಷ ಅತ್ತಾರ, ಶಿಕ್ಷಕರಾದ ಬಸವರಾಜ ಮುಳಗುಂದ, ಪರಶುರಾಮ ತಳವಾರ, ಮಹಾಂತೇಶ ಹಿರೇಮಠ, ಡಿ.ವೈ.ಮುಜೇವಾರ, ಸಿ.ಶಾಂತಾ, ಪ್ರಮುಖರಾದ ಎಸ್.ವಿ.ಧರಣಾ, ಬಾಗೇಶ ಬಿಂದ್ಗಿ ಇತರರಿದ್ದರು.

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…