

ಸಿದ್ದಾಪುರ: ಭಟ್ಕಳದ ವಕೀಲರಾದ ಗುರುದಾಸ ಮಂಜುನಾಥ ಮೊಗೇರ್ ಅವರ ಮೇಲೆ ನಡೆದ ಹಲ್ಲೆಯನ್ನು ಸಿದ್ದಾಪುರ ತಾಲೂಕು ನ್ಯಾಯವಾದಿಗಳ ಸಂಘ ಮಂಗಳವಾರ ಖಂಡಿಸಿ ಹಲ್ಲೆ ನಡೆಸಿದವರ ಮೇಲೆ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯದ ಕಲಾಪದಿಂದ ದೂರ ಉಳಿದರು. ಅಲ್ಲದೆ, ವಕೀಲರ ಸಂರಕ್ಷಣಾ ಕಾಯ್ದೆಯನ್ನು ಶೀಘ್ರ ಜಾರಿಗೆ ತರುವಂತೆ ಸರ್ವಾನುಮತದಿಂದ ಒತ್ತಾಯಿಸಿದರು.
ನ್ಯಾಯವಾದಿಗಳ ಸಂಘದ ತಾಲೂಕಾಧ್ಯಕ್ಷ ಕೆ.ಜಿ. ನಾಯ್ಕ ಬೊಮ್ಮನಗುಳಿ, ಉಪಾಧ್ಯಕ್ಷ ಎನ್.ಎಂ. ನಾಯ್ಕ ಚನ್ನಮಾವ, ಕಾರ್ಯದರ್ಶಿ ರಾಜೇಶ ಪಿ.ಭಟ್ಟ, ಹಿರಿಯ ವಕೀಲರಾದ ರವಿ ಹೆಗಡೆ ಹೂವಿನಮನೆ, ಜಿ.ಎಸ್. ಹೆಗಡೆ ಬೆಳ್ಳೆಮಡಿಕೆ, ಕೆ.ಎಂ. ನಾಯ್ಕ, ಎಂ.ಆರ್. ಪಾಟೀಲ, ಪಿ.ಬಿ. ಹೊಸೂರು ಇತರರಿದ್ದರು.