Australian Parliament: 'ನೀನು ನಮಗೆ ರಾಜನಲ್ಲ': ಆಸ್ಟ್ರೇಲಿಯಾ ಸಂಸತ್​ನಲ್ಲಿ ಬ್ರಿಟನ್​ ರಾಜನಿಗೆ ಶಾಕ್​!

charls
Published on

ಸಿಡ್ನಿ(ಆಸ್ಟ್ರೇಲಿಯ): ಕಿಂಗ್ ಚಾರ್ಲ್ಸ್-3 ಸೋಮವಾರ ಆಸ್ಟ್ರೇಲಿಯನ್ ಸಂಸತ್ತಿ(Australian Parliament )ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಸೆನೆಟರ್ ಲಿಡಿಯಾ ಥೋರ್ಪ್ ವಸಾಹತುಶಾಹಿ ವಿರೋಧಿ ಘೋಷಣೆಗಳನ್ನು ಕೂಗಿದರು. ಇದುನೆರೆದಿದ್ದ ಶಾಸಕರು ಮತ್ತು ಇತರ ಗಣ್ಯರನ್ನು ಆಘಾತಗೊಳಿಸಿತು.

“ನಮ್ಮ ಭೂಮಿಯನ್ನು ನಮಗೆ ವಾಪಸ್​ ಕೊಡು, ನೀನು ನಮ್ಮಿಂದ ಕದ್ದದ್ದನ್ನು ನಮಗೆ ಕೊಡು” ಎಂದು ಲಿಡಿಯಾ ಥೋರ್ಪ್ ರಾಜ(ಕಿಂಗ್ ಚಾರ್ಲ್ಸ್-3)ನ ಭಾಷಣದ ನಂತರ ಏರುಧ್ವನಿಯಲ್ಲಿ ಘೋಷಣೆ ಕೂಗಿ ಒತ್ತಾಯಿಸಿದರು.

"ಇದು ನಿಮ್ಮ ಭೂಮಿ ಅಲ್ಲ, ನೀನು ನನ್ನ ರಾಜನಲ್ಲ" ನನ್ನ ರಾಷ್ಟ್ರ ಸ್ವತಂತ್ರವಾಗಬೇಕು. ಯುರೋಪಿಯನ್ ವಸಾಹತುಗಾರರಿಂದ ಆಸ್ಟ್ರೇಲಿಯನ್ನರ ಹತ್ಯೆಯಾಗಿದೆ ಎಂದು ಅವರು ಕೂಗಿದರು.

ಥೋರ್ಪ್ ರಾಜಪ್ರಭುತ್ವದ ತೀವ್ರ ವಿರೋಧಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು 2022 ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಮುಖ್ಯಸ್ಥರಾಗಿದ್ದ ರಾಣಿ ಎಲಿಸಬೆತ್ II ಅವರ ವಿರುದ್ಧ ಇದೇ ರೀತಿ ಧ್ವನಿ ಎತ್ತಿದರು.

ಆಸ್ಟ್ರೇಲಿಯಾವು 100 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷ್ ವಸಾಹತುವಾಗಿತ್ತು. ಆ ಸಮಯದಲ್ಲಿ ಸಾವಿರಾರು ಮೂಲನಿವಾಸಿ ಆಸ್ಟ್ರೇಲಿಯನ್ನರು ಕೊಲ್ಲಲ್ಪಟ್ಟರು. ದೇಶವು 1901 ರಲ್ಲಿ ಸ್ವಾತಂತ್ರ್ಯ ಗಳಿಸಿತು. ಆದರೆ ಇಂದಿಗೂ ಪೂರ್ಣ ಪ್ರಮಾಣದ ಗಣರಾಜ್ಯವಾಗಲಿಲ್ಲ. ಕಿಂಗ್ ಚಾರ್ಲ್ಸ್ ಪ್ರಸ್ತುತ ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ.

ಚಾರ್ಲ್ಸ್ ಪ್ರಸ್ತುತ ಆಸ್ಟ್ರೇಲಿಯಾ ಮತ್ತು ಸಮೋವಾಗೆ ಒಂಬತ್ತು ದಿನಗಳ ಪ್ರವಾಸದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net