

ಕೊಕ್ಕರ್ಣೆ: ನಮಸ್ತೆ ಭಾರತ್ ಟ್ರಸ್ಟ್ ಮಾಡುವ ಸಮಾಜಮುಖಿ ಕಾರ್ಯಗಳು ಪ್ರಶಂಸನೀಯ. ಸಂಸ್ಕೃತಿಗೆ ಮರುಜೀವ ತುಂಬುವ ಕೆಲಸ ಸಂಕೀರ್ತನೆ ಮೂಲಕ ನೆರವೇರುತ್ತಿದೆ ಎಂದು ಶ್ರೀ ಕ್ಷೇತ್ರ ಮಂದಾರ್ತಿಯ ಮುಖ್ಯಸ್ಥ ರಮೇಶ ಬಾಯರಿ ಹೇಳಿದರು.
ಶ್ರೀಕ್ಷೇತ್ರ ಮಂದಾರ್ತಿಯಲ್ಲಿ ಜ.18ರಂದು ನಡೆಯಲಿರುವ 108 ಭಜನಾ ತಂಡಗಳ ರಾಷ್ಟ್ರೀಯ ಮಟ್ಟದ ಕುಣಿತ ಭಜನಾ ಕಾರ್ಯಕ್ರಮದ ಪೋಸ್ಟರನ್ನು ವಂಡಾರು ಶ್ರೀ ಆದಿಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ವಕೀಲ ಚೋರಾಡಿ ಕೃಷ್ಣರಾಜ್ ಶೆಟ್ಟಿ, ಉದ್ಯಮಿಗಳಾದ ನಾಗರಾಜ್ ಮೆಂಡನ್ ಜಾನುವಾರುಕಟ್ಟೆ, ನಾರಾಯಣ ಆಚಾರ್ಯ ಮಂದಾರ್ತಿ, ಹೆಗ್ಗುಂಜೆ ಗ್ರಾಪಂ ಸದಸ್ಯ ಸುಕುಮಾರ್ ಶೆಟ್ಟಿ ನೀರ್ಜೆಡ್ಡು, ಶಿರೂರು ಮುದ್ದುಮನೆ ಶ್ರೀ ಸಾರ್ವಜನಿಕ ಶಾರದೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ಮೋಹನ್ರಾಜ್ ಶೆಟ್ಟಿ, ಕಾಡೂರು ಪಂಚಾಯಿತಿ ಸದಸ್ಯ ಸತೀಶ್ ಕುಲಾಲ್ ನಡೂರು, ನಮಸ್ತೆ ಭಾರತ್ ಟ್ರಸ್ಟ್ ಸದಸ್ಯರಾದ ಗಿರೀಶ್ ಆಚಾರ್, ಪ್ರಕಾಶ್ ಕುಕ್ಕೆಹಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಶಿರೂರು ವಂದಿಸಿದರು. ಮಂದಾರ್ತಿ ಶ್ರೀರಾಮ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರುಗಿತು. ಶರತ್ಚಂದ್ರ ಶೆಟ್ಟಿ ಮುದ್ದುಮನೆ ನಿರೂಪಿಸಿದರು.