

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿ ಹಲವು ದಿನಗಳೇ ಕಳೆದಿವೆ. ಆದರೂ ಎಲ್ಲೆಡೆ ಧೋನಿ ಕುರಿತು ಚರ್ಚೆ ಮಾತ್ರ ನಿಂತಿಲ್ಲ. ಕೇವಲ ಕ್ರಿಕೆಟಿಗರಷ್ಟೇ ಅಲ್ಲದೆ, ಇತರ ವಲಯಗಳಿಂದಲೂ ಧೋನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಾತ್ರ ಧೋನಿ ಅವರಿಗೂ ತಮ್ಮ ಪತಿ ಪಾಕ್ ಕ್ರಿಕೆಟಿಗ ಶೋಯಿಬ್ ಮಲಿಕ್ಗೂ ಸಾಕಷ್ಟು ಸಾಮ್ಯತೆಯಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಲ್ ತಂಡಕ್ಕೆ ಸೇರ್ತಾರಾ ಲಿಯೋನೆಲ್ ಮೆಸ್ಸಿ!
ಧೋನಿ-ಶೋಯಿಬ್ ನಡುವೆ ಹೆಚ್ಚು ವ್ಯತ್ಯಾಸ ಕಾಣುವುದಿಲ್ಲ ಎಂದು ಕ್ರೀಡಾ ವೆಬ್ಸೈಟ್ವೊಂದಕ್ಕೆ ಸಾನಿಯಾ ಹೇಳಿದ್ದಾರೆ. ವ್ಯಕ್ತಿಗತವಾಗಿ, ವೃತ್ತಿಪರವಾಗಿ ಸಾಕಷ್ಟು ಸಾಮ್ಯತೆಯಿದ್ದು, ಇಬ್ಬರೂ ಕೂಲ್ಗೆ ಹೆಸರು ವಾಸಿ. ಹಲವು ವಿಷಯಗಳಲ್ಲಿ ಒಂದೇ ತಕ್ಕಡಿಯಲ್ಲಿ ನಿಲ್ಲಬಲ್ಲರು ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ. ಆಗಸ್ಟ್ 15 ರಂದು ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಇದನ್ನೂ ಓದಿ: ಲಿಯೋನೆಲ್ ಮೆಸ್ಸಿ ಹೊಸ ತಂಡದ ಬಗ್ಗೆ ಮೂಡಿದೆ ಕುತೂಹಲ
ಭಾರತ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಅವರಿಗೆ ದೊಡ್ಡ ಮಟ್ಟದ ಬಿಳ್ಕೊಡುಗೆ ನೀಡಬೇಕು. ನಾನು ಗೌರವಿಸುವಂಥ ಕ್ರಿಕೆಟಿಗ, ಅವರ ವ್ಯಕ್ತಿತ್ವವೇ ಕ್ಯಾಪ್ಟಲ್ ಕೂಲ್ ಎಂದು ಹೆಸರು ತಂದುಕೊಟ್ಟಿದೆ. ಭಾರತೀಯ ಕ್ರಿಕೆಟ್ ಕಂಡ ಅದ್ಭುತ ಪ್ರತಿಭೆ ಧೋನಿ ಎಂದು ಸಾನಿಯಾ ಮಿರ್ಜಾ ತಿಳಿಸಿದ್ದಾರೆ. ಸಾನಿಯಾ ಪತಿ ಶೋಯಿಬ್ ಮಲಿಕ್, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಟಿ20 ಸರಣಿಯಲ್ಲಿ ಆಡುವ ಸಲುವಾಗಿ ಪಾಕಿಸ್ತಾನ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ.