More

    ತುಂಬು ಗರ್ಭಿಣಿ ಮೇಘನಾ ಆಸ್ಪತ್ರೆಗೆ ದಾಖಲು: ಸಿಹಿಸುದ್ದಿ ನಿರೀಕ್ಷೆಯಲ್ಲಿ ಸರ್ಜಾ ಕುಟುಂಬ! ​

    ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾ ರಾಜ್​ ಇಂದು (ಅ.21) ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೇಘನಾ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದು, ವೈದ್ಯರ ಸೂಚನೆಯಂತೆ ಹೆರಿಗೆಗಾಗಿ ನಗರದ ಕೆ.ಆರ್​. ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಧ್ಯಾಹ್ನ ಮನೆಯಿಂದ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಜೋಶಿ ಜತೆ ಕಾರಿನಲ್ಲಿ ಆಗಮಿಸಿದರು.

    ಮೇಘನಾಗೆ ಇಂದು ಅಥವಾ ನಾಳೆ ಹೆರಿಗೆ ಆಗುವ ಸಾಧ್ಯತೆ ಇದೆ. ಸರ್ಜಾ ಕುಟುಂಬದ ಸದಸ್ಯರು ಸಹ ಆಸ್ಪತ್ರೆಗೆ ಆಗಮಿಸಲಿದ್ದಾರೆ. ಚಿರು ಅಗಲಿಕೆಯ ನೋವಿನಲ್ಲಿರುವ ಸರ್ಜಾ ಕುಟುಂಬ ಜ್ಯೂನಿಯರ್​ ಸರ್ಜಾ ಆಗಮನದ ನಿರೀಕ್ಷೆಯಲ್ಲಿದೆ.

    ಇದನ್ನೂ ಓದಿ: ‘ಬಾಹುಬಲಿ 2’ ಬಿಡುಗಡೆಯಾದ ದಿನದಂದೇ ‘ರಾಧೇ ಶ್ಯಾಮ್​’?

    ನಿನ್ನೆಯಷ್ಟೇ ಮೇಘನಾ ಅಕ್ಷ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಕೊಂಡು ಮನೆಗೆ ಮರಳಿದ್ದರು. ಈ ವೇಳೆ ಅಕ್ಷ ಅಸ್ಪತ್ರೆಗೆ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಸಹ ಆಗಮಿಸಿದ್ದರು.

    ಈಗಾಗಲೇ ಅಣ್ಣನ ಮಗುವಿಗೆ ಅಂತಾನೇ ಧ್ರುವ ಸರ್ಜಾ ವಿಶೇಷ ಉಡುಗೊರೆಯೊಂದನ್ನು ಖರೀದಿಸಿದ್ದಾರೆ. ಬರೋಬ್ಬರಿ 10 ಲಕ್ಷ ರೂ. ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಧ್ರುವ ಖರೀದಿ ಮಾಡಿದ್ದಾರೆ. ಈಗಾಗಲೇ ಆ ತೊಟ್ಟಿಲ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಧ್ರುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ಅಣ್ಣನ ಮಗುವಿಗೆ ಧ್ರುವ ಸರ್ಜಾ ಕಡೆಯಿಂದ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲು ಗಿಫ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts