

ವಿಜಯವಾಣಿ ಸುದ್ದಿಜಾಲ ಕೋಟ
ಅಧ್ಯಯನದ ಜತೆಗೆ ಯಕ್ಷಗಾನ ಕಲೆ ಮೈಗೂಡಿಸಿಕೊಂಡಾಗ ಮಕ್ಕಳಲ್ಲಿ ಭಾಷಾ ಶುದ್ಧಿಯೊಂದಿಗೆ ಆತ್ಮಸ್ಥೈರ್ಯ ಮೂಡಿ ಹಿಂಜರಿಕೆ ಕಡಿಮೆಯಾಗಿ ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಬಲ್ಲರು ಎಂದು ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾಡಿಮನೆ ಹೇಳಿದರು.
ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಕಲಾರಂಗದ 8ನೇ ವರ್ಷದ ಚಿಣ್ಣರ ಒಡ್ಡೋಲಗದಲ್ಲಿ ಭಾನುವಾರ ಮಕ್ಕಳ ಯಕ್ಷಗಾನ, ತಾಳ ಹೆಜ್ಜೆ ತರಗತಿ ಉದ್ಘಾಟಿಸಿ ವಾತನಾಡಿದರು.
ವಕೀಲ ಕೊತ್ತಾಡಿ ಉದಯ್ ಕುವಾರ್ ಶೆಟ್ಟಿ ಮಾತನಾಡಿ, ಒತ್ತಡ ನಿವಾರಣೆ ವಾಡುವ ಯಕ್ಷಗಾನ ಕಲೆಯನ್ನು ಮಕ್ಕಳು ಕಲಿತು ಬದುಕಿನಲ್ಲಿ ಅಳವಡಿಸಿಕೊಂಡು ಸವಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಮುಖ್ಯ ಅತಿಥಿ ಯಕ್ಷ ಗುರು ಪ್ರಸಾದ್‌ಕುವಾರ್ ಮೊಗೆಬೆಟ್ಟು ಆರೋಗ್ಯಕರ ವಾತಾವರಣದಲ್ಲಿ ಪ್ರಬುದ್ಧ ಕಲಾವಿದರಿಂದ ಕೂಡಿದ ಕಲಾರಂಗದ ಕಲಾ ಸೇವೆ ಶ್ಲಾಘನೀಯವಾದುದು. ಯಕ್ಷಗಾನ ಶಿಕ್ಷಣದ ಅಭ್ಯುದಯಕ್ಕೆ ಒಂದು ಪದವಿ ಇದ್ದಾಗ ವಾತ್ರ ಉತ್ತಮ ಶಿಕ್ಷಕರಿಂದ ಉತ್ತಮ ಶಿಕ್ಷಣ ಹೊರಹೊಮ್ಮಲು ಸಾಧ್ಯ ಎಂದರು.
ಯಕ್ಷಗುರು ದೇವದಾಸ್ ರಾವ್ ಕೂಡ್ಲಿ, ಚೆಂಡೆ ವಾದಕ ಕೃಷ್ಣಾನಂದ ಶೆಣೈ ಶಿರಿಯಾರ ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಗುರುಪ್ರಸಾದ್ ಐತಾಳ್ ಅಧ್ಯಕ್ಷತೆ ವಹಿಸಿದರು. ಹಿರಿಯ ಸದಸ್ಯ ರಮೇಶ್ ಪೂಜಾರಿ ಪ್ರಾರ್ಥಿಸಿದರು. ಖಜಾಂಚಿ ನಾಗರಾಜ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ಸತೀಶ್ ವಡ್ಡರ್ಸೆ ನಿರೂಪಿಸಿದರು. ಗಣೆೇಶ್ ಐತಾಳ್ ವಂದಿಸಿದರು. ಕಲಾರಂಗದ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.