

Heavy Rain: ಮಧ್ಯ ಮತ್ತು ಆಗ್ನೇಯ ಮೆಕ್ಸಿಕೋದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಅಲ್ಲದೆ, ಇಲ್ಲಿ ಸಂಭವಿಸಿದ ಭೂಕುಸಿತದಿಂದ, ಹೆದ್ದಾರಿಗಳಿಗೆ ಹಾನಿಯಾಗಿದ್ದು, ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ (ಅಕ್ಟೋಬರ್,10) ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳ ವಿವಿಧ ಭಾಗಗಳಿಂದ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದ್ದು, ವಾಹನಗಳು ಮತ್ತು ಮನೆಗಳು ಸಂಪೂರ್ಣವಾಗಿ ನೀರಿನಿಂದ ಜಲವೃತವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಆಂತರಿಕ ಕಾರ್ಯದರ್ಶಿ ಗಿಲ್ಲೆರ್ಮೊ ಒಲಿವಾರೆಸ್ ರೇನಾ , ಕೇಂದ್ರ ರಾಜ್ಯವಾದ ಹಿಡಾಲ್ಗೊ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದ್ದು, 16 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿವೆ.
ಮೆಕ್ಸಿಕೋದ ಹಿಡಾಲ್ಗೊ ರಾಜ್ಯದಲ್ಲಿ ಕನಿಷ್ಠ 1,000 ಮನೆಗಳು, 59 ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ಮತ್ತು 308 ಶಾಲೆಗಳು ಭೂಕುಸಿತಗಳು ಮತ್ತು ನದಿಗಳು ತಮ್ಮ ದಡಗಳಲ್ಲಿ ಉಕ್ಕಿ ಹರಿಯುವುದರಿಂದ ಹಾನಿಗೊಳಗಾಗಿವೆ. ಅಲ್ಲದೆ, ರಾಜ್ಯದ 84 ಪುರಸಭೆಗಳಲ್ಲಿ ಹದಿನೇಳು ಪುರಸಭೆಗಳು ವಿದ್ಯುತ್ ಸಂಪರ್ಕ ಕಡಿತಗೊಂಡಿವೆ ಎಂದು ಗಿಲ್ಲೆರ್ಮೊ ಒಲಿವಾರೆಸ್ ಮಾಹಿತಿ ನೀಡಿದ್ದಾರೆ.
ನೆರೆಯ ಪ್ಯೂಲ್ಲಾ ರಾಜ್ಯದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು, 13 ಮಂದಿ ಕಾಣೆಯಾಗಿದ್ದಾರೆ ಎಂದು ಗವರ್ನರ್ ಅಲೆಜಾಂಡೊ ಅರ್ಮೆಂಟಾ ಹೇಳಿದ್ದಾರೆ. ಅಲ್ಲದೆ, ಪ್ರವಾಹದ ನೀರಿನಿಂದ ಛಾವಣಿಗಳ ಮೇಲೆ ಸಿಲುಕಿಕೊಂಡಿದ್ದ ಕೆಲವು ಮಕ್ಕಳು ಸೇರಿದಂತೆ 15 ಜನರನ್ನು ರಕ್ಷಿಸಲು ಅವರು ಫೆಡದಲ್ ಸರ್ಕಾರದಿಂದ ಸಹಾಯವನ್ನು ಕೋರಿದ್ದಾರೆ.
ಮೆಕ್ಸಿಕೋದಲ್ಲಿ ಸುರಿದ ಭಾರೀ ಮಳೆಯಿಂದ ಸುಮಾರು 80,000 ಜನರು ತೊಂದರೆಗೊಳಗಾಗಿದ್ದಾರೆ. ಅಲ್ಲದೆ, ಭೂಕುಸಿತದಿಂದ ಅನಿಲ ಪೈಪ್ಲೈನ್ ಒಡೆದುಹೋಗಿದ್ದು, ಗಲ್ಫ್ ಕರಾವಳಿ ರಾಜ್ಯವಾದ ವೆರಾಕ್ರೂಜ್ನಲ್ಲಿ, ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ರೊಸಿಯೊ ನಹ್ಲೆ ಹೇಳಿದ್ದಾರೆ.
ಸರಿಸುಮಾರು 5,000 ಮನೆಗಳು ಹಾನಿಗೊಳಗಾದವು ಮತ್ತು ನೌಕಾಪಡೆಯು ಸುಮಾರು 900 ಜನರನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿದೆ.
ಮೆಕ್ಸಿಕೋ ಮಳೆ ಇತಿಹಾಸ 2025 ರಲ್ಲಿ ಮೆಕ್ಸಿಕೋ ವಿಶೇಷವಾಗಿ ಭಾರೀ ಮಳೆಯಿಂದ ತತ್ತರಿಸಿದ್ದು, ರಾಜಧಾನಿ ಮೆಕ್ಸಿಕೋ ನಗರದಲ್ಲಿ ದಾಖಲೆಯ ಮಳೆಯಾಗಿದೆ.
ಇದು ಉಷ್ಣವಲಯದ ಚಂಡಮಾರುತ ರೇಮಂಡ್ ಶನಿವಾರದವರೆಗೂ ದೇಶದ ಪೆಸಿಫಿಕ್ ಕರಾವಳಿಯಿಂದ ದೂರವಿದ್ದು, ಇದು ಉತ್ತರಕ್ಕೆ ಚಲಿಸುತ್ತಿದ್ದಂತೆ ಭಾರೀ ಮಳೆಯನ್ನು ತಂದಿತು. ಅಲ್ಲದೆ, ಚಿಯಾಪಾಸ್, ಗೆರೆರೊ, ಓಕ್ಸಾಕ ಮತ್ತು ಮೈಕೋಕಾನ್ ರಾಜ್ಯಗಳಲ್ಲಿ ಚಂಡಮಾರುತದಿಂದ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.
ವಾರಾಂತ್ಯದಲ್ಲಿ ರೇಮಂಡ್ ಬಾಜಾ ಕ್ಯಾಲಿಫೋರ್ನಿಯಾದ ದಕ್ಷಿಣ ಭಾಗವನ್ನು ಅಪ್ಪಳಿಸುತ್ತದೆ ಎಂದು ಯುಎಸ್ ರಾಷ್ಟ್ರೀಯ ಹರಿಕೇನ್ ಕೇಂದ್ರ ನಿರೀಕ್ಷಿಸಿತ್ತು. (ಏಜೆನ್ಸೀಸ್)