ಪುತ್ರನಿಂದಲೇ ಕೊಲೆಯಾದ ಹಿರಿಯ ನಟಿ; ಬ್ಯಾಟ್​ನಿಂದ ಹೊಡೆದು ಕೊಂದು ಶವ ನದಿಗೆಸೆದ ಮಗ!

veena kapoor
Published on

ಮುಂಬೈ: ಹಿರಿಯ ನಟಿಯೊಬ್ಬರು ಪುತ್ರನಿಂದಲೇ ಕೊಲೆಗೀಡಾಗಿದ್ದು, ಆಕೆಯನ್ನು ಬ್ಯಾಟ್​ನಿಂದ ಹೊಡೆದು ಕೊಂದ ಮಗ, ಶವವನ್ನು ನದಿಗೆಸೆದ ಪ್ರಕರಣವೊಂದು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುತ್ರ ಹಾಗೂ ಆತನ ಕೆಲಸದವನನ್ನು ಮುಂಬೈನ ಜುಹು ಪೊಲೀಸರು ಬಂಧಿಸಿದ್ದಾರೆ.

ಹಿಂದಿ ಚಿತ್ರರಂಗದ ಹಿರಿಯ ನಟಿ ವೀಣಾ ಕಪೂರ್ (74) ಕೊಲೆಗೀಡಾದ ಮಹಿಳೆ. ಪುತ್ರ ಸಚಿನ್ ಕಪೂರ್ (43) ಮತ್ತು ಆತನ ನೌಕರ ಲುಲುಕುಮಾರ್ ಮಂಡಲ್ (25) ಬಂಧಿತ ಆರೋಪಿಗಳು. ಪುತ್ರ ತಾಯಿಯನ್ನು ಬೇಸ್​ಬಾಲ್ ಬ್ಯಾಟ್​ನಿಂದ ಹೊಡೆದು ಕೊಂದಿದ್ದಲ್ಲದೆ, ಬಳಿಕ ಶವವನ್ನು ನದಿಗೆ ಎಸೆದಿದ್ದ. ಕಲ್ಪತರು ಸೊಸೈಟಿಯ ಸೆಕ್ಯುರಿಟಿಯ ಸುಪರ್​​​ವೈಸರ್​ ವೀಣಾ ಕಪೂರ್​ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ನೀಡಿದ್ದ ದೂರಿನಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.

ನಮ್ಮ ಮಧ್ಯೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯವಿತ್ತು. ಅದೇ ವಿಚಾರಕ್ಕೆ ಸಂಬಂಧಿಸಿದ ವಾಗ್ವಾದ ಸಂದರ್ಭದಲ್ಲಿ ತಾಯಿಯ ತಲೆಗೆ ಬೇಸ್​ಬಾಲ್ ಬ್ಯಾಟ್​ನಿಂದ ಹಲವು ಸಲ ಹೊಡೆದು ಕೊಂದಿದ್ದು, ನಂತರ ಶವವವನ್ನು ರಾಯಗಢ ಜಿಲ್ಲೆಯ ನದಿಯೊಂದರಲ್ಲಿ ಎಸೆದಿದ್ದಾಗಿ ವಿಚಾರಣೆ ವೇಳೆ ಪುತ್ರ ಪೊಲೀಸರಿಗೆ ತಿಳಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net