ಸಿಕೆಪಿಯಲ್ಲಿ 18ರಿಂದ ಕಲಾಕೃತಿಗಳ ಪ್ರದರ್ಶನ, ಮಾರಾಟ : ಲಲಿತಾಕಲಾ ಅಕಾಡೆಮಿ ಆಯೋಜನೆ

Raghu_08_Lalitha_Academy_President_Pasa_Kumar_Samvada_@_VV_Office (1)
Published on

ಬೆಂಗಳೂರು: ಮನೆ ಮನೆಗೂ ಚಿತ್ರಕಲೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು ‘ಮನೆಗೊಂದು ಕಲಾಕೃತಿ’ ಯೋಜನೆ ರೂಪಿಸಿದ್ದು, ಇದರಡಿ 18ರಿಂದ 21ರವರೆಗೆ ಕುಮಾರಕೃಪಾ ರಸ್ತೆಯಲ್ಲಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿಗಳಲ್ಲಿ ನಾಡಿನ ಕಲಾ ಪರಂಪರೆ ಮತ್ತು ಸಂಸ್ಕೃತಿ ಬಿಂಬಿಸುವ ಆಯ್ದ 600 ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿದೆ.

18ರಂದು ಸಂಜೆ 5 ಗಂಟೆಗೆ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದಾರೆ. ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್. ಶಂಕರ್, ಪ್ರಧಾನ ಕಾರ್ಯದರ್ಶಿ ಎಸ್.ಎನ್. ಶಶಿಧರ್ ಇತರರು ಭಾಗವಹಿಸಲಿದ್ದಾರೆ.

ಅಕಾಡೆಮಿಯು ಹಲವು ವರ್ಷಗಳಿಂದ ಯುವ ಕಲಾವಿದರಿಗೆ ತರಬೇತಿ, ಕಾರ್ಯಾಗಾರ, ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಅವಧಿಯಲ್ಲಿ ನೂರಾರು ಕಲಾವಿದರಿಂದ ಸಾವಿರಾರು ಕಲಾಕೃತಿಗಳು ರಚಿಸಲ್ಪಟ್ಟಿವೆ. ಅತ್ಯುತ್ತಮವಾದ 600 ಕಲಾಕೃತಿಗಳನ್ನು ಆಯ್ಕೆ ಮಾಡಿ ದರ ನಿಗದಿಪಡಿಸಲಾಗಿದೆ. 3 ಸಾವಿರ ರೂ.ಗಳಿಂದ 50 ಸಾವಿರ ರೂ.ವರೆಗಿನ ಕಲಾಕೃತಿಗಳು ಪರಿಷತ್ತಿನ ಏಳು ಗ್ಯಾಲರಿಗಳಲ್ಲಿ ಪ್ರದರ್ಶನಗೊಳ್ಳಲಿವೆ.ನೇರವಾಗಿ ಖರೀದಿ ಮಾಡಬಹುದು ಇಲ್ಲವೇ ಹಣ ಪಾವತಿಸಿ, ಕಲಾಕೃತಿ ಕಾಯ್ದಿಸಿಕೊಳ್ಳಬಹುದು.

ನಾಲ್ಕು ದಿನಗಳ ಕಾಲ ನಿತ್ಯ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ಮತ್ತು ಮಾರಾಟ ಇರಲಿದೆ.

ಕೋಟ್ . . .

ಕಲಾಕೃತಿಯು ಮನೆಯ ಅಂದ ಹೆಚ್ಚಿಸುವ ಜತೆಗೆ ನಮ್ಮ ಅಭಿರುಚಿ ಉತ್ತಮಪಡಿಸುತ್ತದೆ. ಆದ್ದರಿಂದ ಅತ್ಯಂತ ಕಡಿಮೆ ದರದಲ್ಲಿ ಕಲಾಕೃತಿಗಳನ್ನು ಮಾರಾಟ ಮಾಡಲಾಗುತ್ತಿದೆ.

- ಪ.ಸ. ಕುಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net