

ವರಮಹಾಲಕ್ಷ್ಮೀ ಹಬ್ಬ ನಮಗೆ ಬಹಳ ವಿಶೇಷ. ಪ್ರತೀ ವರ್ಷ ಬಹಳ ಗ್ರಾಂಡ್ ಆಗಿ ಆಚರಿಸುತ್ತೇವೆ. ಬರೀ ಹಬ್ಬವಷ್ಟೇ ಅಲ್ಲ, ಶ್ರಾವಣದ ಪ್ರತೀ ಶುಕ್ರವಾರ ಸಹ ಪೂಜೆ ಮಾಡುತ್ತಾರೆ. ಮನೆಗೆ ಮುತೆôದೆಯರನ್ನು ಕರೆದು ಕುಂಕುಮ ಕೊಡುತ್ತಾರೆ. ಈಗಲೇ ಹಬ್ಬದ ಸಂಭ್ರಮ ಶುರುವಾಗಿದೆ. ಅಮ್ಮ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಇನ್ನು, ವರಮಹಾಲಕ್ಷ್ಮೀ ಹಬ್ಬದ ದಿನ ಊಟ ಇರುತ್ತಿದ್ದೆ. ಮುತೆôದೆಯರನ್ನು ಕರೆದು ಶೃಂಗಾರ ಮಾಡಿ, ಅವರಿಗೆ ಔತಣ ನೀಡಲಾಗುತ್ತದೆ. ಸಾಮಾನ್ಯವಾಗಿ ಶ್ರಾವಣದ ಸಂದರ್ಭದಲ್ಲಿ ನಾನು ಮನೆಯಲ್ಲೇ ಇರುತ್ತಿದೆ. ಈ ವರ್ಷ ಮೊದಲ ಶುಕ್ರವಾರ ಮಿಸ್ ಆಗಿದೆ. ಮುಂದಿನ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ನಾನು ನನ್ನೂರು ಹೊನ್ನಾವರಕ್ಕೆ ಹೋಗಿ ತಲುಪುತ್ತೇನೆ. ಈ ವರ್ಷ ಸದ್ಯ ಯಾವುದೇ ಶೂಟಿಂಗ್ ಇಲ್ಲದಿರುವುದರಿಂದ, ಮನೆಯವರೆಲ್ಲರ ಜತೆಗೆ ನಾನು, ನನ್ನಕ್ಕ ಎಲ್ಲರೂ ಒಟ್ಟಿಗೆ ಹಬ್ಬವನ್ನು ಆಚರಿಸುತ್ತೇವೆ.
| ಬೃಂದಾ ಆಚಾರ್ಯ
ನಮ್ಮ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ವಿಶೇಷವಾಗಿ ಆಚರಿಸುತ್ತೇವೆ. ಪ್ರತೀ ವರ್ಷ ಮನೆಯಲ್ಲಿ ಲಕ್ಷ್ಮೀ ಕೂರಿಸುವುದು, ಪೂಜೆ ಮಾಡುವುದು ಇದ್ದೇ ಇರುತ್ತದೆ. ಬಾಲ್ಯದಲ್ಲಿ ಹಬ್ಬಕ್ಕೆಂದೇ ಹೊಸ ಬಟ್ಟೆ ಖರೀದಿಸುತ್ತಿದ್ದೆ. ಆದರೆ, ಈಗ ಹಾಗೇನಿಲ್ಲ. ಆದರೆ, ಪೂಜೆಯನ್ನು ಚೆನ್ನಾಗಿ ಮಾಡುತ್ತೇವೆ. ಅಮ್ಮನಿಗೆ ವರಮಹಾಲಕ್ಷ್ಮೀ ಹಬ್ಬ ಎಂದರೆ ಬಹಳ ಇಷ್ಟ. ನಮ್ಮ ಮನೆಯಲ್ಲಿ ಮುಖ್ಯವಾದ ಹಬ್ಬವಿದು. ಅದರಲ್ಲೂ ವರಮಹಾಲಕ್ಷ್ಮೀ ಮತ್ತು ನವರಾತ್ರಿ ಎರಡೂ ಹಬ್ಬಗಳನ್ನು ಬಹಳ ಸ್ಪೆಷಲ್ ಆಗಿ ಆಚರಿಸುತ್ತೇವೆ. ನಾನು ಇದೇ ಮೊದಲ ಬಾರಿ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಈ ಬಾರಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ‘ದಿಲ್ಪಸಂದ್’ ಚಿತ್ರದ ಚಿತ್ರೀಕರಣ ಇರುವ ಕಾರಣ, ನಾನು ಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ಆದರೆ, ಸಿಹಿ ತಿನಿಸು ಮಾತ್ರ ಸವಿಯುತ್ತೇನೆ.
| ನಿಶ್ವಿಕಾ ನಾಯ್ಡು