ರಾಜ್ಯಾಧ್ಯಕ್ಷ ಸಿ.ಟಿ.ರವಿಯಾದರೇ ಬಿಜೆಪಿ ದುರ್ಧೈವ ; ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಲೇವಡಿ

IMG_20230731_200259.jpg
Published on

ಬೆಳಗಾವಿ : ವಿಪಕ್ಷ ನಾಯಕ ಇಲ್ಲದೇ ಇಡೀ ಅಧಿವೇಶನ ನಡೆದಿರುವುದು ದುರಂತದ ಕಥೆ. ಬಿಜೆಪಿಗರು ಯಾರನ್ನ ರಾಜ್ಯಾಧ್ಯಕ್ಷ ಮಾಡುತ್ತಾರೆ ಎನ್ನುವದನ್ನು ತಿಳಿಯುವ ಅವಶ್ಯಕತೆ ನಮಗಿಲ್ಲ. ಸಿ.ಟಿ.ರವಿಯೇ ಅಧ್ಯಕ್ಷರಾದರೆ ದುರ್ದೈವದ ಸಂಗತಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸದಲ್ಲೇ ವಿಪಕ್ಷ ನಾಯಕ ಇಲ್ಲದೇ ಅಧಿವೇಶನ ನಡೆದಿರುವುದು ಇತಿಹಾಸದಲ್ಲೇ ಮೊದಲು.  ಇಂತಹ ಹೊಸ ಹೊಸ ಇತಿಹಾಸವನ್ನು ಬಿಜೆಪಿಯವರು ಬರೆಯುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ರವಿಯೊಂದಿಗಿನ ಗೆಳತನಕ್ಕೂ ಪಕ್ಷಕ್ಕೂ ವ್ಯತ್ಯಾಸ ಇರುತ್ತದೆ. ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆ ಪಕ್ಷದಲ್ಲಿ ಬೆಳೆಯುತ್ತಾನೆ ಎಂದರೆ ಶುಭಕೋರುತ್ತೇನೆ ಎಂದರು. 

ಹೊಸ ಸರ್ಕಾರ ಬಂದ ಮೇಲೆ ಅನೇಕ ಶಾಸಕರ ಬೇಡಿಕೆಗಳ ಬಗ್ಗೆ ಹಾಗೂ ಅವರ ವಿಚಾರಗಳ ಕುರಿತು ಚರ್ಚೆ ಮಾಡಲು ಪತ್ರ ಬರೆಯಲಾಗಿದೆಯೇ ಹೊರತು ; ಇದರಲ್ಲಿ ಯಾವುದೇ ಶಾಸಕರ ಅಸಮಾಧಾನದ ಮಾತಿಲ್ಲ. ಹೀಗಾಗಿ, ವಿರೋಧ ಪಕ್ಷದವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.
ಅಧಿವೇಶನ ನಡೆದಾಗ ಶಾಸಕಾಂಗ ಸಭೆ ಕರೆದಿದ್ದರು. ಆದರೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರ ಸಭೆ ಕರೆದು, ಎಲ್ಲಾ ವಿರೋಧ ಪಕ್ಷಗಳ ಒಕ್ಕೂಟ ಮಾಡಲು ಸಮ್ಮೇಳನ ಮಾಡಿದ್ದರಿಂದ ಆಗ ಶಾಸಕಾಂಗ ಪಕ್ಷದ ಸಭೆ ನಡೆಸಲು ಸಾಧ್ಯವಾಗರಲಿಲ್ಲ. ಆ ಬಳಿಕ ನಡೆದ ಶಾಸಕರ ಸಭೆಯಲ್ಲಿ ವರ್ಗಾವಣೆ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಮರ್ಕವಾಗಿ ಶಾಸಕರಿಗೆ ತಿಳಿ ಹೇಳಿದ್ದು, ಅಸಮಾಧಾನದ ಪ್ರಶ್ನೆಯಲ್ಲ ಎಂದರು.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆ.2 ರಂದು ದೆಹಲಿಯಲ್ಲಿ ರಾಹುಲ್ ಗಾಂಧಿಹಾಗೂ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ಕರೆದಿದ್ದಾರೆ. ಹಾಜರಾಗುತ್ತೇವೆ. ಸಭೆಯಲ್ಲಿ ನಮಗೇನು ಜವಾಬ್ದಾರಿ ನೀಡುತ್ತಾರೋ ಅದನ್ನು ನಿಭಾಯಿಸುತ್ತೇವೆ. ಒಂದು ಪಕ್ಷದಲ್ಲಿದ್ದಾಗ ಪಕ್ಷದ ಕೆಲಸ ಓಡಾಡಿ ಮಾಡಬೇಕಾಗುತ್ತದೆ’ ಎಂದು ’ಸವದಿ ಹಾಗೂ ಶೆಟ್ಟರ್‌ಗೆ ಟಾಸ್ಕ್ ಕೊಟ್ಟಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net