ಡಿ.1ಕ್ಕೆ ಕನಕಪುರದ ದೇಗುಲಮಠದಲ್ಲಿ ಲಕ್ಷ ದೀಪೋತ್ಸವ, ಆದಿನಿರ್ವಾಣಸ್ವಾಮಿಗಳ ರಥೋತ್ಸವ

degula
Published on

ಕನಕಪುರ : ಪ್ರತಿವರ್ಷದಂತೆ ಕಾರ್ತೀಕ ಮಾಸದ ಅಮಾವಾಸ್ಯೆಯಂದು (ಡಿ.1ಕ್ಕೆ) ಕನಕಪುರದ ಪ್ರಾಚೀನ ದೇಗುಲಮಠದಲ್ಲಿ ಲಕ್ಷದೀಪೋತ್ಸವ ಮತ್ತು ಶ್ರೀಆದಿ ನಿರ್ವಾಣ ಸ್ವಾಮಿಗಳ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿದೆ.

700 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ದೇಗುಲಮಠದ ಆದಿನಿರ್ವಾಣ ಸ್ವಾಮಿಗಳು ಅಲ್ಲಮಪ್ರಭುಗಳ ಶೂನ್ಯ ಸಿಂಹಾಸನ ಪರಂಪರೆಯಲ್ಲಿ ಶ್ರೀಮಠವನ್ನು ಸಂಸ್ಥಾಪಿಸಿ ಹೊತ್ತಿಸಿದ ಜ್ಯೋತಿ ಪರಂಪರೆಯು 14 ಮಠಾಧಿಪತಿಗಳ ರೂಪದಲ್ಲಿ ಇಂದಿಗೂ ಬೆಳಗುತ್ತಿದೆ. ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರೀಮಠದ ಕೊಡುಗೆ ಅಪಾರವಾಗಿದ್ದು, ಜ್ಞಾನದ ಸಂಕೇತವಾಗಿರುವ ದೀಪೋತ್ಸವವವನ್ನು ಪ್ರತಿವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಶ್ರೀಮಠದ ಡಾ.ಮುಮ್ಮಡಿ ನಿರ್ವಾಣ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಲವು ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಗಣ್ಯರು, ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net