ಬಂಟ್ವಾಳದಲ್ಲಿ ಲೇಡಿ ಲಯನ್ಸ್ ಡೇ

8
Published on

ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ವತಿಯಿಂದ ಲೇಡಿ ಲಯನ್ಸ್ ಡೇ ಕಾರ್ಯಕ್ರಮ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಏಪ್ರಿಲ್ ತಿಂಗಳ ಮಾಸಿಕ ಸಭೆಯೊಂದಿಗೆ ಮಕ್ಕಳ, ಮಹಿಳೆಯರ ಹಾಗೂ ಲಯನ್ಸ್ ಕುಟುಂಬದ ಸದಸ್ಯರ ವಿವಿಧ ಒಳಾಂಗಣ ಆಟೋಟಗಳು, ಮನೋರಂಜನಾ ಸ್ಪರ್ಧೆಗಳೊಂದಿಗೆ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮಕ್ಕಿಂತ ಮುನ್ನ ಸೈಬರ್ ಲಾ ಬಗ್ಗೆ ಅನಂತ ಪ್ರಭು ಮಾಹಿತಿ ನೀಡಿದರು. ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್ ಹಾಗೂ ರೇಣುಕಾ ಅನಂತಕೃಷ್ಣ ಮಾತನಾಡಿದರು.

ಇತ್ತೀಚೆಗೆ ನಡೆದ ಜಿಲ್ಲಾ ಅಧಿವೇಶನದಲ್ಲಿ ಆಯ್ಕೆಯಾದ ಚುನಾಯಿತ ಗವರ್ನರ್ ಕುಡ್ಪಿ ಅರವಿಂದ ಶೆಣೈ, ಚುನಾಯಿತ ದ್ವಿತೀಯ ಉಪ ಗವರ್ನರ್ ಗೋವರ್ಧನ್ ಶೆಟ್ಟಿ, ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟ ಪೂರ್ವ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಪೂರ್ವ ಗವರ್ನರ್ ಸಂಜೀತ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಆತಿಥ್ಯ ನೀಡಿದ ಸುನೀಲ್ ಬಿ. ಮತ್ತು ಸುಮಾ ಸುನೀಲ್ ದಂಪತಿಯನ್ನು ಗೌರವಿಸಲಾಯಿತು. ಸ್ಥಾಪಕಾಧ್ಯಕ್ಷ ಡಾ.ಬಿ.ವಸಂತ ಬಾಳಿಗಾ, ಕಾರ್ಯದರ್ಶಿ ದೇವಿಕಾ ದಾಮೋದರ್, ಕೋಶಾಧಿಕಾರಿ ದೇವಪ್ಪ ಪೂಜಾರಿ, ಲಿಯೋ ಅಧ್ಯಕ್ಷೆ ಖುಷಿ ಟಿ.ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net