ಸರಿಯಾಗಿ ನಿದ್ದೆ ಬರ್ತಿಲ್ವಾ? ನೀವು ಆರಾಮವಾಗಿ ಮಲಗಬೇಕೆಂದರೆ ಹೀಗೆ ಮಾಡಿ...

Sleeping On The Floor
Published on

ಬೆಂಗಳೂರು: ಮನುಷ್ಯರಿಗೆ ಒಳ್ಳೆಯ ನಿದ್ದೆ ಬೇಕು. ನಿದ್ರೆಯ ಕೊರತೆಯಿಂದ ದೇಹವು ರೋಗಗಳಿಗೆ ತುತ್ತಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ.

ಅತಿಯಾದ ಆಲೋಚನೆಗಳು, ವಯಸ್ಸಿಗೆ ಸಂಬಂಧಿಸಿದ ಒತ್ತಡ, ಭವಿಷ್ಯದ ಭಯ, ಆರೋಗ್ಯ ಸಮಸ್ಯೆಗಳು ಮತ್ತು ಇತರ ಕಾರಣಗಳು ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ. ಆದರೆ ದಿನನಿತ್ಯದ ಆಹಾರ ಕ್ರಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ನೆಮ್ಮದಿಯಿಂದ ನಿದ್ದೆ ಮಾಡಬಹುದು. ನಾವು ಇಂದು  ಉತ್ತಮ ನಿದ್ದೆಗಾಗಿ ಸರಳ ಮಾರ್ಗಗಳ ಕುರಿತಾಗಿ ಇಂದು ತಿಳಿಸಿಕೊಡಲಿದ್ದೇವೆ.

sleep

ಮಲಗುವ ಸಮಯಕ್ಕೆ ಕನಿಷ್ಠ ಎರಡು ಮೂರು ಗಂಟೆಗಳ ಮೊದಲು ನೀವು ನಿಮ್ಮ ಊಟವನ್ನು ಮುಗಿಸಬೇಕು. ಅಂದರೆ ರಾತ್ರಿ ಊಟವಾದ 2-3 ಗಂಟೆಗಳ ನಂತರ ಮಲಗಬೇಕು.

ತಿಂದ ನಂತರ ಮಲಗಬೇಡಿ, ತಡವಾಗಿ ತಿನ್ನಬೇಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ನಿಮಗೆ ಉತ್ತಮ ನಿದ್ರೆ ಬರುತ್ತದೆ.

ಹಗಲಿನಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ಹೈಡ್ರೇಟೆಡ್ ಆಗಿರುತ್ತದೆ. ರಾತ್ರಿ ಮಲಗುವ ಮುನ್ನ  ಬೆಚ್ಚಗಿನ ಹಾಲನ್ನು ಕುಡಿಯುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು.

sleeping woman
ಸಾಂದರ್ಭಿಕ ಚಿತ್ರ

ನಿದ್ರೆಯ ಕೊರತೆಯು ಮಲಬದ್ಧತೆ, ಖಿನ್ನತೆ, ಕೋಪ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತದೆ. ಇದು ಅಂತಿಮವಾಗಿ ರಕ್ತಹೀನತೆಗೆ ಕಾರಣವಾಗುತ್ತದೆ.

Sleep Paralysis

ನಿದ್ರಾಹೀನತೆಗೆ ಯೋಗ, ವಾಕಿಂಗ್, ಸೈಕ್ಲಿಂಗ್ ಮಾಡಬೇಕು. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಸಿಗರೇಟ್ ಮತ್ತು ಮದ್ಯಪಾನದಿಂದ ದೂರವಿರುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net