

ನವದೆಹಲಿ: ಐಪಿಎಲ್ 13ನೇ ಆವೃತ್ತಿಯಲ್ಲಿ ಆಡಲು ಯುಎಇಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನವೇ ತಂಡಗಳ ನಡುವೆ ಸಮರ ಶುರುವಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣವೇ ವೇದಿಕೆಯಾಗಿದೆ!
ಹೌದು, ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ರಾಜಸ್ಥಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಟ್ವಿಟರ್ನಲ್ಲಿ ಮಾತಿನ ಚಕಮಕಿ ಆರಂಭಗೊಂಡಿದೆ. ಸೋಮವಾರ ವಿಶ್ವ ಸಿಂಹಗಳ ದಿನದ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರ ಬೆನ್ನ ಹಿಂದಿನ ಸಿಂಹಗಳ ಟ್ಯಾಟೂವಿನ ಚಿತ್ರವನ್ನು ಟ್ವೀಟ್ ಮಾಡಿತ್ತು. ಇದರ ಜತೆಗೆ, 'ಕ್ರಿಕೆಟ್ನಲ್ಲಿ ಇದಕ್ಕಿಂತ ಉತ್ತಮವಾದ ಟ್ಯಾಟೂ ಇದ್ದರೆ ತಿಳಿಸಿ, ನಾವು ಕಾಯುತ್ತೇವೆ' ಎಂದು ಟ್ವೀಟ್ ಮಾಡಿತ್ತು.
ರಾಜಸ್ಥಾನ ರಾಯಲ್ಸ್ ತಂಡದ ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರ ಟ್ಯಾಟೂ ಚಿತ್ರವನ್ನು ಪೋಸ್ಟ್ ಮಾಡಿದೆ. ಜತೆಗೆ, 'ನಾವು ನಿಮ್ಮನ್ನು ತುಂಬ ಹೊತ್ತು ಕಾಯಿಸಲಿಲ್ಲ ಎಂದು ಭರವಸೆ ಇಡುತ್ತೇವೆ' ಎಂದು ಬರೆದು ಟಾಂಗ್ ನೀಡಿದೆ. ರಾಜಸ್ಥಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಈ ಟ್ವೀಟ್ವಾರ್ ಇದೀಗ ಮೈದಾನದಲ್ಲಿ ಉಭಯ ತಂಡಗಳ ಮುಖಾಮುಖಿಯ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.