

ಮಂಗಳೂರು :ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪಟ್ಲ ಸತೀಶ್ ಶೆಟ್ಟಿ ಅವರ ನೇತ್ರತ್ವದಲ್ಲಿ ಸಮಾಜ ಸೇವೆಗೆ ಮುಂಬೈಯ ಉದ್ಯಮಿ, ಸಮಾಜ ಸೇವಕ ದಡ್ಡಂಗಡಿ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ 1 ಕೋಟಿ ರೂ. ದೇಣಿಗೆ ಘೋಷಿಸಿದ್ದಾರೆ. ಫೌಂಡೇಶನ್‌ನ ಮಹಾದಾನಿ ಗಳಲ್ಲಿ ಓರ್ವರಾಗಿ ಕಲೆ, ಕಲಾವಿದರ ಆಶೋತ್ತರಗಳಿಗೆ ಸ್ಪಂದಿಸಲು ಕುಸುಮೋದರ ಶೆಟ್ಟಿ ಮುಂದಾಗಿದ್ದಾರೆ.
ಜನ ಸಾಮಾನ್ಯರ ಕಲ್ಯಾಣಕ್ಕಾಗಿ ತಮ್ಮ ತಾಯಿಯ ಹೆಸರಿನಲ್ಲಿ ಭವಾನಿ ಫೌಂಡೇಶನ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಅವರು
ಸಾವಿರಾರು ಮಂದಿ ಅಶಕ್ತ ಕುಟುಂಬದ ಬಾಳಿಗೆ ಬೆಳಕಾಗಿದ್ದಾರೆ. ವೈದ್ಯಕೀಯ ನೆರವು, ವಿಧವ ವೇತನ, ಬಡ ಹೆಣ್ಮಕ್ಕಳ ಮದುವೆಗೆ ನೆರವು, ಶೈಕ್ಷಣಿಕ ನೆರವು, ಅಶಕ್ತರ ಮನೆ ನಿರ್ಮಾಣಕ್ಕೆ ನೆರವು ಸಹಿತ ಪ್ರತೀ ತಿಂಗಳು 50 ಲಕ್ಷ ರೂ.ಅಧಿಕ ಮೊತ್ತವನ್ನು ಸಮಾಜ ಸೇವೆಗಾಗಿ ಮೀಸಲಿರಿಸುವ ಕುಸುಮೋದರ ಶೆಟ್ಟಿಯವರು ತಮ್ಮ ಭವಾನಿ ಗ್ರೂಪ್ ಆಫ್ ಕಂಪೆನಿಯ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿದ್ದರೆ. ಯಕ್ಷಧ್ರುವ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಬರೋಡ ಶಶಿಧರ ಶೆಟ್ಟಿ ಅವರ ಮನವಿಗೆ ಸ್ಪಂದಿಸಿ
1 ಕೋಟಿ ರೂ.ದೇಣಿಗೆ ಘೋಷಿಸಿದ್ದಾರೆ.